ಬೆಂಗಳೂರು: 27 ಸಾವಿರ ದೇವಾಲಯಗಳ ಅರ್ಚಕರಿಗೆ ರಾಜ್ಯ ಸರ್ಕಾರ ಗುಡ್​ನ್ಯೂಸ್ ನೀಡಿದ್ದು, ಕೊರೊನಾ ಸಂಕಷ್ಟದಲ್ಲಿರುವ ಅರ್ಚಕರಿಗೆ ನೆರವು ಘೋಷಣೆ ಮಾಡಿದೆ.

ಅರ್ಚಕರಿಗೆ 3 ತಿಂಗಳ ಮುಂಗಡ ತಸ್ತಕ್ ಹಣ ಬಿಡುಗಡೆ ಮಾಡಲು ಸರ್ಕಾರ ನಿರ್ಧರಿಸಿದೆ. ಜೊತೆಗೆ 1500 ರೂಪಾಯಿ ಮೊತ್ತದ ಫುಡ್​​ ಕಿಟ್ ನೀಡಲು ತೀರ್ಮಾನಿಸಿದೆ. 50 ಸಾವಿರ ಅರ್ಚಕರಿಗೆ ಫುಡ್​​ ಕಿಟ್ ವಿತರಿಸಲು ಮುಜರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಆದೇಶ ನೀಡಿದ್ದಾರೆ. ಇನ್ನು ಸರ್ಕಾರದಿಂದ ಒಟ್ಟು 4.50 ಕೋಟಿ ವರ್ಷಾಸನ ಬಿಡುಗಡೆಯಾಗಲಿದೆ.

The post 27 ಸಾವಿರ ದೇವಾಲಯಗಳ ಅರ್ಚಕರಿಗೆ ಗುಡ್​ನ್ಯೂಸ್​; ಮುಜರಾಯಿ ಇಲಾಖೆಯಿಂದ ಅನುದಾನ appeared first on News First Kannada.

Source: newsfirstlive.com

Source link