28 ಬಾರಿ ಚಿನ್ನದ ಪದಕ ಗೆದ್ದಿರೋ ದೇಶದ ಮೊದಲ ಅಂತರಾಷ್ಟ್ರೀಯ ಮಟ್ಟದ ಪ್ಯಾರಾಶೂಟರ್ ದಿಲ್ರಾಜ್ ಕೌರ್ ಈಗ ಜೀವನ ನಿರ್ವಹಣೆಗಾಗಿ ರಸ್ತೆ ಬದಿ ಚಿಪ್ಸ್ ಮಾರುತ್ತಿದ್ದಾರೆ.

ದಿಲ್ರಾಜ್ ಕೌರ್ ಅವರು ಉತ್ತರಾಖಂಡದ ರಾಜಧಾನಿ ಡೆಹ್ರಾಡೂನ್​ನ ರಸ್ತೆ ಬದಿಯಲ್ಲಿ ಚಿಪ್ಸ್ ಮತ್ತು ಬಿಸ್ಕತ್​ಗಳನ್ನು ಮಾರಾಟ ಮಾಡಿ ತುತ್ತಿನ ಚೀಲ ತುಂಬಿಸಿಕೊಳ್ಳುವಂತಾಗಿದೆ. ಈ ಕುರಿತು ಮಾತನಾಡಿರುವ​ ಕೌರ್, ಪ್ರಸ್ತುತ ನನ್ನ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ. ಸಾಕಷ್ಟು ಬಾರಿ ಸರ್ಕಾರವನ್ನು ಸಂಪರ್ಕಿಸುವ ಪ್ರಯತ್ನ ಮಾಡಿದರೂ ಅದೂ ಸಫಲವಾಗಿಲ್ಲ. ಹೀಗಾಗಿ ಜೀವನ ನಿರ್ವಹಣೆಗಾಗಿ ರಸ್ತೆ ಬದಿಯಲ್ಲಿ ಚಿಪ್ಸ್ ಮಾರಾಟ ಮಾಡುತ್ತಿರೋದಾಗಿ ಹೇಳಿದ್ದಾರೆ.

ನಾನು 2004ರಲ್ಲಿ ಶೂಟಿಂಗ್ ಪ್ರಾರಂಭಿಸಿದೆ. ರಾಷ್ಟ್ರಮಟ್ಟದಲ್ಲಿ 28 ಚಿನ್ನ, 8 ಬೆಳ್ಳಿ ಮತ್ತು 3 ಕಂಚಿನ ಪದಕಗಳನ್ನು ಗೆದ್ದಿದ್ದೇನೆ. ಅಂತರರಾಷ್ಟ್ರೀಯ ಆಟಗಳಲ್ಲಿಯೂ ಭಾಗವಹಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ.

The post 28 ಬಾರಿ ಚಿನ್ನದ ಪದಕ ವಿಜೇತೆ.. ಜೀವನ ನಿರ್ವಹಣೆಗಾಗಿ ರಸ್ತೆ ಬದಿ ಚಿಪ್ಸ್ ಮಾರಾಟ appeared first on News First Kannada.

Source: newsfirstlive.com

Source link