29 ರಾಷ್ಟ್ರಗಳಲ್ಲಿ ಕಂಡು ಬಂದ ಒಮಿಕ್ರಾನ್​​; ಸೋಂಕಿನ ವೇಗ ತಗ್ಗಿತಾ?


ಕೊರೊನಾ ವೈರಾಣು ಒಮಿಕ್ರಾನ್ ಸೋಂಕು ವಿಶ್ವದ ಸುಮಾರು 25 ದೇಶಗಳಲ್ಲಿ ಕಾಣಿಸಿಕೊಂಡಿದೆ. ಹೀಗಾಗಿ ಇಂಥದ್ದೊಂದು ರೂಪಾಂತರಿ ಕಾಣಿಸಿಕೊಂಡಿದ್ದೇ ತಡ ಮತ್ತೊಮ್ಮೆ ವಿಶ್ವದಲ್ಲಿ ಕೊರೊನಾ ಪಿಡುಗು ಕಾಣಿಸಿಕೊಳ್ಳಲಿದೆಯೇ? ಎಂಬ ಆತಂಕ ಜನರಲ್ಲಿ ಶುರುವಾಗಿದೆ.

ಕಳೆದ ಎರಡು ವಾರಗಳಿಂದ ಒಮಿಕ್ರಾನ್ ಬಗ್ಗೆ ಭಾರೀ ಚರ್ಚೆ ನಡೆಯುತ್ತಲೇ ಇದೆ. ಒಮಿಕ್ರಾನ್ ಕೊರೋನಾದ ಹಿಂದಿನ ಪ್ರಭೇದಗಳಿಗಿಂತಲೂ ಹೆಚ್ಚು ಅಪಾಯಕಾರಿ. ಒಮಿಕ್ರಾನ್​​ನಿಂದ ಇಡೀ ಪ್ರಪಂಚದಲ್ಲಿ ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸಲಿದೆ ಎಂದು ಹೇಳಲಾಗಿತ್ತು.

ಅತ್ಯಂತ ಕಡಿಮೆ ಅವಧಿಯಲ್ಲಿ ಸೋಂಕಿತ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬರಲಿದೆ. ಇದು ಹೇಗೆ ಎಂಬುದು ಮಾತ್ರ ಪ್ರಶ್ನೆಗೆ ಈವರೆಗೆ ಉತ್ತರ ಸಿಕ್ಕಿಲ್ಲ. ಒಮಿಕ್ರಾನ್ ವಿರುದ್ಧ ಲಸಿಕೆಗಳು ಪರಿಣಾಮಕಾರಿಯೇ? ಯಾವ ಚಿಕಿತ್ಸಾ ಕ್ರಮ ಅನುಸರಿಸವುದು ಒಳ್ಳೆಯದು? ಒಮಿಕ್ರಾನ್​ ರೂಪಾಂತರಿಯಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆಯೇ? ಎಂಬ ಪ್ರಶ್ನೆಗಳನ್ನು ಹಲವರು ಕೇಳುತ್ತಲೇ ಇದ್ದಾರೆ. ಹೀಗಿರುವಾಗಲೇ ಕಳೆದ ಎರಡು ವಾರಗಳಲ್ಲಿ 25 ದೇಶಗಳಲ್ಲಿ ಒಮಿಕ್ರಾನ್​​ ಕೇಸ್​ಗಳು ಅತೀ ಕಡಿಮೆ ದಾಖಲಾಗಿವೆ. ಈ ಬೆಳವಣಿಗೆ ಹಲವು ಪ್ರಶ್ನೆಗಳನ್ನು ಹುಟ್ಟಿಹಾಕಿದೆ.

ಜಗತ್ತಿನ ಹಲವೆಡೆ ದಿನೇ ದಿನೇ ಹೆಚ್ಚಾದ ಒಮಿಕ್ರಾನ್ ಸೋಂಕು ಈಗ ನಿಧಾನವಾಗಿ ಹಲವು ದೇಶಗಳಿಗೆ ವ್ಯಾಪಿಸುತ್ತಿದೆ. 29 ದೇಶಗಳಿಗೆ ವ್ಯಾಪಿಸಿದ ಈ ರೂಪಾಂತರಿ ಒಮಿಕ್ರಾನ್, ಕೇವಲ 373 ಜನರಲ್ಲಿ ಮಾತ್ರ ಪತ್ತೆಯಾಗಿದೆ. ದಕ್ಷಿಣ ಆಫ್ರಿಕಾದಲ್ಲಿಯೇ 77 ಒಮಿಕ್ರಾನ್​ ಪ್ರಕರಣ ಪತ್ತೆಯಾಗಿದ್ದು, 5 ದೇಶಗಳಲ್ಲಿ 10ಕ್ಕಿಂತ ಹೆಚ್ಚು ಒಮಿಕ್ರಾನ್​ ಪ್ರಕರಣ ಪತ್ತೆ ಆಗಿವೆ. ಹೀಗಾಗಿ ಇದು ಹೇಗೆ ಅಪಾಯಕಾರಿ? ಇಷ್ಟು ನಿಧಾನವಾಗಿ ಹರಡುತ್ತಿರೋ ಒಮಿಕ್ರಾನ್​​ ಡೇಂಜರಸ್​​​ ಎಂದು ಹೇಗೆ ಹೇಳಲು ಸಾಧ್ಯ ಎಂದು ಹಲವರು ಪ್ರಶ್ನಿಸಿದ್ದಾರೆ.

ಒಮಿಕ್ರಾನ್ ಕುರಿತಂತೆ ಪ್ರಕಟವಾದ ವರದಿಗಳನ್ನು ತಜ್ಞರು ಈಗಾಗಲೇ ತಳ್ಳಿಹಾಕಿದ್ದಾರೆ. ಇಂಥ ವರದಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಡಬಾರದು. ಏಕೆಂದರೆ ಈ ದತ್ತಾಂಶಗಳು ಅತ್ಯಂತ ಕಡಿಮೆ. ಇದರಿಂದ ಯಾವುದೇ ಹಾನಿ ಇಲ್ಲ ಎಂದು ಕೂಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

The post 29 ರಾಷ್ಟ್ರಗಳಲ್ಲಿ ಕಂಡು ಬಂದ ಒಮಿಕ್ರಾನ್​​; ಸೋಂಕಿನ ವೇಗ ತಗ್ಗಿತಾ? appeared first on News First Kannada.

News First Live Kannada


Leave a Reply

Your email address will not be published. Required fields are marked *