ಬೆಂಗಳೂರು: ಪರೀಕ್ಷೆ ಇಲ್ಲದೇ ಪಾಸ್ ಆಗ್ತಿರುವ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶವನ್ನ ಸದ್ಯಕ್ಕೆ ನೀಡಬೇಡಿ ಎಂದು ಹೈಕೋರ್ಟ್ ವಿಭಾಗೀಯ ಪೀಠದಿಂದ ಮೌಖಿಕ ಆದೇಶ ಹೊರಡಿಸಲಾಗಿದೆ.

ಕೊರೊನಾ ಸಾಂಕ್ರಾಮಿಕದ ಹಿನ್ನೆಲೆ ಈ ವರ್ಷ ದ್ವಿತೀಯ ಪಿಯುಸಿ ರೆಗ್ಯೂಲರ್ ವಿದ್ಯಾರ್ಥಿಗಳನ್ನ ಪರೀಕ್ಷೆ ಇಲ್ಲದೆ ಪಾಸ್ ಮಾಡಲು ನಿರ್ಧರಿಸಲಾಗಿದೆ. ಈ ಹಿನ್ನೆಲೆ ಪಿಯು ರಿಪಿಟರ್ಸ್ ಅಭ್ಯರ್ಥಿಗಳು ‌ಕೋರ್ಟ್ ಮೊರೆ ಹೋಗಿದ್ರು. ಇವರ ಅರ್ಜಿ ಆಲಿಸಿದ ನ್ಯಾಯಾಲಯ ರೆಗ್ಯೂಲರ್ ವಿದ್ಯಾರ್ಥಿಗಳನ್ನ ಪಾಸ್ ಮಾಡಿರೋದು ಸರಿಯಲ್ಲ. ಗುರುವಾರದ ತನಕ ಯಾವುದೇ ಫಲಿತಾಂಶ ಪ್ರಕಟ ಮಾಡಬೇಡಿ. ಪಾಸ್ ಮಾಡಿದ್ರೆ ಎಲ್ಲಾರನ್ನು ಪಾಸ್​​ ಮಾಡಬೇಕಿತ್ತು ಎಂದು ಹೇಳಿದೆ.

ರೆಗ್ಯೂಲರ್ ವಿದ್ಯಾರ್ಥಿಗಳನ್ನ ಮಾತ್ರ ಪಾಸ್ ಮಾಡಿ, ರಿಪಿಟರ್ಸ್ ಅಭ್ಯರ್ಥಿಗಳಿಗೆ ಪರೀಕ್ಷೆ ನಡೆಸುವುದು ಸರಿಯಲ್ಲ. ಈ ಕುರಿತು ಸರ್ಕಾರದ ಎಜಿ ಗೆ ಮಾಹಿತಿ ನೀಡಬೇಕು ಎಂದು ಹೈಕೋರ್ಟ್ ಸೂಚನೆ ನೀಡಿದೆ.

ಗುರುವಾರದೊಳಗೆ ಕೋರ್ಟ್ಗೆ ಮಾಹಿತಿ‌ ನೀಡುವಂತೆ ನಿರ್ದೇಶನ ನೀಡಲಾಗಿದೆ ಎಂದು ಅರ್ಜಿದಾರರ ಸಿಂಗ್ರೇಗೌಡ ನ್ಯೂಸ್​​ಫಸ್ಟ್​​ಗೆ ಮಾಹಿತಿ ನೀಡಿದ್ದಾರೆ.

The post 2nd ಪಿಯು ವಿದ್ಯಾರ್ಥಿಗಳ ಫಲಿತಾಂಶ ಸದ್ಯಕ್ಕೆ ನೀಡಬೇಡಿ -ಹೈಕೋರ್ಟ್​ appeared first on News First Kannada.

Source: newsfirstlive.com

Source link