ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿನ 3 ನೇ ಅಲೆಯ ಆತಂಕ ಮನೆ ಮಾಡಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈಗಿನಿಂದಲೇ ಸಿದ್ಧತೆ ಆರಂಭಿಸಿದೆ.ಅದ್ರಲ್ಲೂ ಪಿಎಂ ಕೇರ್ಸ್​ ಫಂಡ್​​ನ ಸಹಾಯದಿಂದ ದೇಶಾದ್ಯಂತೆ 850 ಆಮ್ಲಜನಕ ಪ್ಲಾಂಟ್​ಗಳನ್ನು ನಿರ್ಮಾಣ ಆರಂಭವಾಗುತ್ತಿದೆ.

ಹೌದು, ಪಿಎಂ ಕೇರ್ಸ್ ಫಂಡ್‌ನಿಂದ ವಿವಿಧ ಜಿಲ್ಲೆಗಳಲ್ಲಿ 850 ಆಮ್ಲಜನಕ ಸ್ಥಾವರಗಳನ್ನು ಸ್ಥಾಪಿಸಲಾಗುತ್ತಿದೆ ಅಂತ ಡಿಆರ್‌ಡಿಒ ಚೇರ್​ಮನ್ ಸಿ. ಸತೀಶ್ ರೆಡ್ಡಿ ಹೇಳಿದ್ದಾರೆ.

ಸತೀಶ್ ರೆಡ್ಡಿ, ಡಿಆರ್​ಡಿಓ ಚೇರ್​ಮನ್

ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಭಾರತದಲ್ಲಿ ಕೊರೊನಾ ಎರಡನೇ ಅಲೆ ವ್ಯಾಪಕವಾದ ಹಿನ್ನೆಲೆ ಮೆಡಿಕಲ್ ಆಕ್ಸಿಜನ್​ನ ಅಭಾವ ಉಂಟಾಗಿತ್ತು. ಹೀಗಾಗಿ ಪಿಎಂ ಕೇರ್ಸ್​ ಅಡಿ ಆಕ್ಸಿಜನ್ ಪ್ಲಾಂಟ್​ಗಳನ್ನ ಸ್ಥಾಪಿಸಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು.

ಈ ಬಗ್ಗೆ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ‘ಆಜಾದಿ ಕಾ ಅಮೃತ್ ಮಹೋತ್ಸವ್ ಪ್ರವಚನ ಸರಣಿ’ಯ ಸಂದರ್ಭದಲ್ಲಿ ಮಾತನಾಡಿದ ಸತೀಶ್​​​ ರೆಡ್ಡಿ, ಕೊರೊನಾವೈರಸ್​ ವಿರುದ್ಧ ಹೋರಾಟದಲ್ಲಿ ಅಗತ್ಯ ಬಿದ್ದರೆ ಹೆಚ್ಚಿನ ಫ್ಲೈಯಿಂಗ್ ಆಸ್ಪತ್ರೆ ಸೇರಿದಂತೆ ಎಲ್ಲಾ ರೀತಿಯ ಸಪೋರ್ಟ್​​ ಒದಗಿಸಲು ಡಿಆರ್​​ಡಿಓ ಸಿದ್ದವಾಗಿದೆ ಎಂದು ಹೇಳಿದ್ದಾಗಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ನಾವು ಹಲವಾರು ನಗರಗಳಲ್ಲಿ ಕೊರೊನಾ ಸೋಂಕಿತರ ಚಿಕಿತ್ಸೆಗೆಂದೇ ನಿಗದಿತ ಆಸ್ಪತ್ರೆಗಳನ್ನ ಸ್ಥಾಪನೆ ಮಾಡಿದ್ದೇವೆ. ಇವು ಮಾಡ್ಯುಲರ್ ಆಸ್ಪತ್ರೆಗಳು, ಇವನ್ನು ಫ್ಲೈಯಿಂಗ್ ಆಸ್ಪತ್ರೆಗಳೆಂದು ಕರೆಯುತ್ತೇವೆ. ವೈರಸ್​ ಆಸ್ಪತ್ರೆಯಿಂದ ಹೊರಗಡೆ ಹೋಗದಂಥ ರೀತಿಯಲ್ಲಿ ಇಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

 

The post 3ನೇ ಅಲೆಗೆ ಕೇಂದ್ರ ಸಿದ್ಧತೆ; ಪಿಎಂ ಕೇರ್ಸ್ ಫಂಡ್‌ನಿಂದ 850 ಆಕ್ಸಿಜನ್ ಪ್ಲಾಂಟ್​​ ಸ್ಥಾಪನೆ appeared first on News First Kannada.

Source: newsfirstlive.com

Source link