ಬೆಂಗಳೂರು: ಕೊರೊನಾ 2ನೇ ಅಲೆ ದಾಟಿ ಮೂರನೇ ಅಲೆಗೆ ಹೋಗಬಾರದು ಎಂದರೆ ಎಲ್ಲಾರೂ ಕೊರೊನಾ ಲಸಿಕೆಯನ್ನ ಹಾಕಿಸಿಕೊಳ್ಳಬೇಕು ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ್​ಗೌಡ ತಿಳಿಸಿದ್ದಾರೆ.

ಇಂದು ವಿಧಾನ ಸೌಧದಲ್ಲಿ ಮಾತನಾಡಿದ ಸಚಿವರು ಕರ್ನಾಟಕ ರಾಜ್ಯ ಕೊರೊನಾ ನಿಯಂತ್ರಣ ಮಾಡುವಲ್ಲಿ ಯಶಸ್ವಿಯಾಗುತ್ತಿದೆ. ಆದ್ರೆ ಬೆಂಗಳೂರಿನಲ್ಲಿ ಅತಿ ಹೆಚ್ಚು ಸೊಂಕು ಕಾಣಿಸಿಕೊಂಡಿದೆ, ಹೀಗಾಗಿ ನಾವು ತುಂಬಾ ಜಾಗೃತರಾಗಿರಬೇಕು. ಸೋಂಕು ಇನ್ನೂ ಹೆಚ್ಚಾಗುವಂತ ಸಾಧ್ಯತೆ ಇದೆ ಎಂದ‌ ತಜ್ಞರು ಹೇಳುತ್ತಿದ್ದಾರೆ. ಪ್ರಾರಂಭಿಕ ಹಂತದಲ್ಲಿ ಆಕ್ಸಿಜನ್​ ಮತ್ತು ರೆಮಿಡಿಸಿವಿರ್​ ಸ್ವಲ್ಪ ಪ್ರಮಾಣದಲ್ಲಿ ಕೊರೆತೆ ಇತ್ತು, ಆ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರು ಕೇಂದ್ರ ಸರ್ಕಾರದ ಮೇಲೆ‌ ಒತ್ತಡ ಹಾಕಿದರು. ನಾವೂ ಸಹ ಕೇಂದ್ರ ಸರ್ಕಾರದ ಮೇಲೆ ಅದೇ ದಿವಸ ಒತ್ತಡ ತಂದೆವು, ಹಾಗಾಗಿ 1 ಲಕ್ಷ 22 ಸಾವಿರ ರೆಮಿಡಿಸಿವಿರ್​ ರಾಜ್ಯಕ್ಕೆ ನೀಡಲು ಕೇಂದ್ರ ಒಪ್ಪಿಗೆ ಸೂಚಿಸಿದೆ‌. 30 ನೇ ತಾರೀಖಿನವರೆಗೂ 3 ಲಕ್ಷ ಲಸಿಕೆ ಬೇಕು ಎಂದು ಕೇಳಿದ್ದರು ಅದನ್ನ ಸಹ ಕೊಟ್ಟಿದ್ದೇವೆ.

ಕೇಂದ್ರ ಸರ್ಕಾರದಿಂದ 800 ಮೆಟ್ರಿಕ್​ ಟನ್​ ಆಕ್ಸಿಜನ್​ ನಿಡಲಾಗುತ್ತಿದೆ, ಈ ಆಕ್ಸಿಜನ್​ ಇನ್ನು 15 ದಿವಸದೊಳಗೆ ರಾಜ್ಯಕ್ಕೆ ಬಂದು ಸೇರಲಿದೆ. ರಾಜ್ಯ ಸರ್ಕಾರ ಇನ್ನೂ ಹೆಚ್ಚಿನ ಲಸಿಕೆ ನೀಡುವಂತೆ ಬೇಡಿಕೆ ಇಟ್ಟಿದೆ, ಕೇಂದ್ರ ಅದನ್ನೂ ಈಡೇರಿಸಲಿದೆ. ನಾವು ಯಶಸ್ವಿಯಾಗಿ ಕೊರೊನಾ ಕಂಟ್ರೋಲ್​ ಮಾಡುತ್ತೇವೆ‌‌, ಸಾವು ಸಂಭವಿಸಿರೋದು ನಮ್ಮ ಮನಸ್ಸಿಗೆ ನೋವು ತಂದಿದೆ. ಜನರು ಇದರಿಂದ ಇನ್ನಷ್ಟು ಜಾಗೃತಿರಾಗಬೇಕು.

ರಾಜ್ಯದಲ್ಲಿ ವೀಕೆಂಡ್​ ಕರ್ಪ್ಯೂ ಯಶಸ್ವಿಯಾಗಿದೆ, ಇದರ ಫಲಿತಾಂಶ ಇನ್ನು 10 ರಿಂದ 14 ದಿವಸದ ನಂತರ ತಿಳಿಯುತ್ತದೆ. ಈ ವೀಕೆಂಡ್​ ಕರ್ಪ್ಯೂ ಮುಂದುವರೆಸುವ ಬಗ್ಗೆ ರಾಜ್ಯ ಸರ್ಕಾರ ತೀರ್ಮಾನ ಮಾಡುತ್ತದೆ. ರಾಜ್ಯಕ್ಕೆ ಯಾವ ನೆರವು ಬೇಕೋ ಅದನ್ನಲ್ಲಾ ನೀಡಲು ಕೇಂದ್ರ ಸರ್ಕಾರ ಸಿದ್ಧವಿದೆ. ಮುಂದಿನ 10 ದಿನ ಕಠಿಣ ಇರಬಹುದು ತದನಂತರ ಸೋಂಕು ಕಡಿಮೆಯಾಗುವ ಸಾಧ್ಯತೆ ಇದೆ. ಕೊರೊನಾ ಲಸಿಕೆಯನ್ನ ಪಡೆದುಕೊಳ್ಳುವುದು ಎಲ್ಲರ ಜವಾಬ್ದಾರಿ, ಹಾಗೇ ಅದನ್ನ ನೀಡೋದು ನಮ್ಮ ಜವಾಬ್ದಾರಿ ಎಂದಿದ್ದಾರೆ.

The post 3ನೇ ಅಲೆಗೆ ಹೋಗಬಾರದೆಂದ್ರೆ ಎಲ್ಲರೂ ಲಸಿಕೆ ಹಾಕಿಸಕೊಳ್ಳಬೇಕು- D.V.ಸದಾನಂದಗೌಡ appeared first on News First Kannada.

Source: News First Kannada
Read More