ಬೆಂಗಳೂರು: ಕೊರೊನಾದ ಮೂರನೇ ಅಲೆ ಮಕ್ಕಳ ಮೇಲೆ ಗಂಭೀರವಾಗಿ ಅಟ್ಯಾಕ್ ಮಾಡುತ್ತದೆ ಅಂತಾ ಈಗಾಗಲೇ ತಜ್ಞರು ಎಚ್ಚರಿಕೆಯನ್ನ ನೀಡಿದ್ದಾರೆ. ಮಕ್ಕಳ ಮೇಲೆ ಕೊರೊನಾ ಸೋಂಕು ಅಟ್ಯಾಕ್ ಮಾಡುವ ಮೊದಲೇ ಪೋಷಕರಿಗೆ ವ್ಯಾಕ್ಸಿನೇಷನ್ ಆಗಿರಬೇಕು. ಇಲ್ಲದಿದ್ದರೆ ಮತ್ತೊಂದು ಅಪಾಯ ಎದುರಾಗುತ್ತದೆ ಅಂತಾ ಖ್ಯಾತ ಕಾರ್ಡಿಯಾಕ್ ಸರ್ಜನ್ ಮತ್ತು ನಾರಾಯಣ ಹೆಲ್ತ್​​ನ ಅಧ್ಯಕ್ಷರಾದ ಡಾ.ದೇವಿ ಪ್ರಸಾದ್ ಶೆಟ್ಟಿ ಅವರು ಎಚ್ಚರಿಕೆಯನ್ನ ನೀಡಿದ್ದಾರೆ.

ಡಾ.ದೇವಿ ಶೆಟ್ಟಿ ಅವರು ಹೇಳುವಂತೆ.. ‘ನಿಮ್ಹಾನ್ಸ್​ನ ಖ್ಯಾತ ವೈರಾಣು ತಜ್ಞ ಡಾ.ರವಿ ಕೊರೊನಾದ ಮೂರನೇ ಅಲೆ ಮಕ್ಕಳ ಮೇಲೆ ದಾಳಿ ಮಾಡಲಿದೆ ಎಂದಿದ್ದಾರೆ. ನಾನು ಸಾಂಕ್ರಾಮಿಕ ರೋಗಗಳ ತಜ್ಞನಲ್ಲದಿದ್ದರೂ ಕೊರೊನಾದ ಮೂರನೇ ಅಲೆ ಮಕ್ಕಳ ಮೇಲೆ ದಾಳಿ ಮಾಡಲಿದೆ ಎಂದಿದ್ದಾರೆ. ಹೀಗಾಗಿ ನಾವು ಎಚ್ಚೆತ್ತುಕೊಳ್ಳಬೇಕಿದೆ. ಮೂರನೇ ಅಲೆಯಲ್ಲಿ ಕೊರೊನಾ ಸೋಂಕಿಗೆ ಒಳಗಾದ ಮಕ್ಕಳನ್ನ ಹೇಗೆ ಟ್ರೀಟ್​ ಮಾಡಬೇಕು ಅನ್ನೋದಕ್ಕೆ ಈಗಾಗಲೇ ಮಹಾರಾಷ್ಟ್ರ ಸರ್ಕಾರ ಟಾಸ್ಕ್​ ಫೋರ್ಸ್ ತಂಡವನ್ನ ರಚನೆ ಮಾಡಿದೆ.

ಈಗಾಗಲೇ ಸೋಂಕು ತಗುಲಿರೋವವರನ್ನ ಹೊರತುಪಡಿಸಿ ಉಳಿದವರಿಗೂ ಕೊರೊನಾ ಬರುವ ಸಾಧ್ಯತೆ ಹೆಚ್ಚಾಗಿದೆ. ಮೊದಲ ವೇವ್​ನಲ್ಲಿ ಕೊರೊನಾ ಹಿರಿಯರು ಮತ್ತು ಮಧ್ಯಮ ವಯಸ್ಕರ ಮೇಲೆ ಸವಾರಿ ಮಾಡಿತ್ತು. ಎರಡನೇ ಅಲೆಯು ಯುವಕರನ್ನ ಟಾರ್ಗೆಟ್ ಮಾಡಿದೆ. ಆದರೆ ಮೂರನೇ ಅಲೆ ಮಕ್ಕಳ ಮೇಲೆ ಗಂಭೀರವಾಗಿ ಪರಿಣಾಮ ಬೀರುವ ಸಾಧ್ಯತೆ ಇದೆ. ಯಾಕಂದ್ರೆ ಈಗಾಗಲೇ ವಯಸ್ಕರಿಗೆ ಕೊರೊನಾ ಬಂದು ಹೋಗಿರೋದ್ರಿಂದ ಅವರಲ್ಲಿ ಇಮ್ಯುನಿಟಿ ಪವರ್ ಜಾಸ್ತಿಯಾಗಿದೆ.

ಮಕ್ಕಳನ್ನ ಐಸಿಯುನಲ್ಲಿ ಒಬ್ಬಂಟಿಯಾಗಿ ಬಿಡಲು ಆಗಲ್ಲ
ದುರಾದೃಷ್ಟವಶಾತ್ 18 ವರ್ಷದೊಳಗಿನವರಿಗೆ ಕೊರೊನಾ ವ್ಯಾಕ್ಸಿನ್ ಸಿಗುತ್ತಿಲ್ಲ. ಪರಿಣಾಮ ಮಕ್ಕಳು ಮಾತ್ರ ವೈರಸ್​ಗಳಿಗೆ ಹೋಸ್ಟ್​ ಆಗಿ ಉಳಿದುಕೊಳ್ಳುತ್ತಾರೆ. 12 ವರ್ಷದೊಳಗಿನ 165 ಮಿಲಿಯನ್​ ಮಕ್ಕಳು ನಮ್ಮಲ್ಲಿದ್ದಾರೆ. ಇವಾಗ ಶೇಕಡಾ 20 ರಷ್ಟು ಮಕ್ಕಳಿಗೆ ಕೋವಿಡ್ ಅಟ್ಯಾಕ್ ಆಗಿದೆ ಅಂದ್ಕೊಂಡರೆ ಅದರಲ್ಲಿ ಶೇಕಡಾ 5 ರಷ್ಟು ಮಕ್ಕಳಿಗೆ ಕ್ರಿಟಿಕಲ್ ಕೇರ್ ಬೇಕಾದರೆ 1.65 ಲಕ್ಷ ಪೀಡಿಯಾಟ್ರಿಕ್​ ಐಸಿಯು ಬೆಡ್​ನ ಅವಶ್ಯಕತೆ ಇರುತ್ತದೆ. ಇಂದು ನಾವು 90 ಸಾವಿರದಷ್ಟು ಐಸಿಯು ಅಡಲ್ಟ್ಸ್​​ ಬೆಡ್ಸ್​ಗೆ ಹಾಗೂ 2 ಸಾವಿರಕ್ಕಿಂತ ಕಡಿಮೆ ಪೀಡಿಯಾಟ್ರಿಕ್​​ ಬೆಡ್ಸ್​ಗೆ ಪರದಾಡುತ್ತಿದ್ದೇವೆ.

ನನಗೆ ಮಕ್ಕಳಂದ್ರೆ ಇಷ್ಟ ಮತ್ತು ನನ್ನ ವೃತ್ತಿ ಜೀವನದಲ್ಲಿ ಜಾಸ್ತಿ ಸಮಯವನ್ನ ಪ್ರಪಂಚದಲ್ಲೇ ಅತೀ ದೊಡ್ಡ ಕಾರ್ಡಿಯಾಕ್ ಸರ್ಜಿಕಲ್ ಐಸಿಯು ರಚಿಸೋದ್ರಲ್ಲಿ ಕಳೆದೆ. ಈ ಸಮಯದಲ್ಲಿ ನಾನು ತುಂಬಾ ಪಾಠಗಳನ್ನ ಕಲಿತೆ. ಮಕ್ಕಳು ದೊಡ್ಡವರ ಹಾಗಲ್ಲ. ಆದರೆ ನಾವು ಕೋವಿಡ್ ಐಸಿಯುನಲ್ಲಿ ಪೋಷಕರಿಲ್ಲದೇ ಎರಡು ತಿಂಗಳ ಮಗುವನ್ನ ಇಡಲು ಆಗಲ್ಲ. ಹೇಗೆ ನೀವು ಮೂರು ಮಕ್ಕಳನ್ನ ಹೊಂದಿರೋ ವಯಷ್ಕ ಮಹಿಳೆ ಅಥವಾ ಪುರುಷ ವ್ಯಾಕ್ಸಿನ್ ಆಗದೇ ಕೋವಿಡ್ ಐಸಿಯುಗೆ ಕಳುಹಿಸುತ್ತೀರಾ? ಅಡಲ್ಟ್​ ಕೋವಿಡ್ ಐಸಿಯುನಲ್ಲಿ ರೋಗಿಗಳನ್ನ ಕೇವಲ ವೈದ್ಯರು ಮತ್ತು ನರ್ಸಸ್​ ನೋಡಿಕೊಳ್ಳುತ್ತಾರೆ. ಆದರೆ ಚಿಕ್ಕ ಮಕ್ಕಳನ್ನ ಪೋಷಕರಿಲ್ಲದೇ ಐಸಿಯುನಲ್ಲಿ ಇಡಲು ಆಗಲ್ಲ.

ಕೂಡಲೇ ಪೋಷಕರಿಗೆ ವ್ಯಾಕ್ಸಿನ್ ನೀಡಿ
ಅಮ್ಮಂದಿರು ಮಕ್ಕಳಿಗೆ ಎದೆಹಾಲುಣಿಸಬೇಕು ಹಾಗೂ ಆ ಟೈಮ್​ನಲ್ಲಿ ಮಗು ಆಕ್ಸಿಜನ್ ಮಾಸ್ಕ್​​ ತೆಗೆದು ಹಾಕದೇ ಇರೋ ಥರಾ ನೋಡಿಕೊಳ್ಳಲು ಯಾರಾದರೂ ಇರಬೇಕು. ಇನ್ನು ಕಾರ್ಡಿಯಾಕ್ ಐಸಿಯುನಲ್ಲಿ ತುಂಬಾ ಮಕ್ಕಳು ಅರ್ಧಂಬರ್ಧ ಎಚ್ಚರ ಇರುತ್ತಾರೆ. ಮತ್ತು ಯಾವಾಗ ಫುಲ್ ಎಚ್ಚರ ಆಗುತ್ತಾರೋ ಆಗ ಅವರನ್ನ ವಾರ್ಡ್​ಗೆ ಶಿಫ್ಟ್​ ಮಾಡುತ್ತೇವೆ. ಆದರೆ ಕೊರೊನಾ ಐಸಿಯುನಲ್ಲಿ ಮಕ್ಕಳಿಗೆ ನಿದ್ರೆ ಇಂಜೆಕ್ಷನ್ ಕೊಡುವ ಹಾಗಿಲ್ಲ. ಮಕ್ಕಳು ಆಕ್ಸಿಜನ್ ಮೆಂಟೇನ್ ಮಾಡೋಕೆ ಚೆನ್ನಾಗಿ ಉಸಿರಾಡಬೇಕು.

ಇದರ ಅರ್ಥ ನಾವು ಆದಷ್ಟು ಬೇಗ ಚಿಕ್ಕ ಮಕ್ಕಳು ಹೊಂದಿರುವ ಪೋಷಕರಿಗೆ ಎರಡೂ ಡೋಸ್​ ವ್ಯಾಕ್ಸಿನ್ ಹಾಕಿಸಬೇಕು. ಅದು ಈಗಲೇ ಆಗಬೇಕು. ಮುಂದಿನ ಕೆಲವೇ ತಿಂಗಳಲ್ಲಿ 3000 ಮಿಲಿಯನ್ ಯಂಗ್ ಪೇರೆಂಟ್ಸ್​​ಗೆ ವ್ಯಾಕ್ಸಿನೇಟ್ ಮಾಡಬೇಕು. ಸಿಹಿ ಸುದ್ದಿ ಏನಂದರೆ ವ್ಯಾಕ್ಸಿನ್ ಕೊರೊನಾದಿಂದ ನಮ್ಮನ್ನ ರಕ್ಷಿಸುತ್ತದೆ. ನಮ್ಮ ಆಸ್ಪತ್ರೆಯಲ್ಲಿ 500ಕ್ಕಿಂತ ಜಾಸ್ತಿ ಕೋವಿಡ್ ರೋಗಿಗಳು ಇದ್ದಾರೆ. ಅವರಲ್ಲಿ ಎರಡೂ ಡೋಸ್ ವ್ಯಾಕ್ಸಿನ್ ಪಡೆದವಱರೂ ಐಸಿಯುನಲ್ಲಿ ಇಲ್ಲ.

ಬಡವರಿಗೆ ವ್ಯಾಕ್ಸಿನ್ ದುಬಾರಿ
ಇವತ್ತು ಮಾರುಕಟ್ಟೆಯಲ್ಲಿ ಮೊದಲ ಡೋಸ್ ವ್ಯಾಕ್ಸಿನ್​ಗೆ 800 ರಿಂದ 1500 ರೂಪಾಯಿ ಇದೆ. ಎರಡೂ ಡೋಸ್​ಗೆ 3,200 ರಿಂದ 6,000 ರೂಪಾಯಿವರೆಗೆ ಇದೆ. ಇದು ಬಡವರಿಗೆ ತುಂಬಾ ದುಬಾರಿಯಾಗಿದೆ. ಭಾರತ ಸರ್ಕಾರ ಭಾರತ ಹಾಗೂ ವಿದೇಶದಲ್ಲಿ ವ್ಯಾಕ್ಸಿನ್ ತಯಾರಿಕ ಸಂಸ್ಥೆಗಳ ಜೊತೆ ಕೈಜೋಡಿಸಿ 300 ಮಿಲಿಯನ್ ವ್ಯಾಕ್ಸಿನ್​ ಅನ್ನ ಮೊದಲೇ ಪೇ ಮಾಡಿ ತರಿಸಿಕೊಳ್ಳಬೇಕಿದೆ.

The post ‘3ನೇ ಅಲೆ ಎದುರಿಸಲು ಈ ಕೂಡಲೇ ಪೋಷಕರಿಗೆ ವ್ಯಾಕ್ಸಿನ್ ಹಾಕಿಸಿ’ ಅಂತಿದ್ದಾರೆ ತಜ್ಞರು appeared first on News First Kannada.

Source: newsfirstlive.com

Source link