3ನೇ ದಿನದಾಟದ ಮೊದಲ ಸೆಷನ್​ನಲ್ಲಿ ಕಿವೀಸ್​ ಮೇಲುಗೈ.. ಎಷ್ಟಾಯ್ತು ಟೀಂ ಇಂಡಿಯಾ ಸ್ಕೋರ್​?

3ನೇ ದಿನದಾಟದ ಮೊದಲ ಸೆಷನ್​ನಲ್ಲಿ ಕಿವೀಸ್​ ಮೇಲುಗೈ.. ಎಷ್ಟಾಯ್ತು ಟೀಂ ಇಂಡಿಯಾ ಸ್ಕೋರ್​?

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​​ ಫೈನಲ್​​ನ 3ನೇ ದಿನದಾಟದಲ್ಲಿ ಕಿವೀಸ್​​ ಬೌಲರ್​ಗಳು ಮೇಲುಗೈ ಸಾಧಿಸಿದ್ದಾರೆ. ಮಳೆ, ಬ್ಯಾಡ್​ಲೈಟ್ಸ್​ ಯಾವುದೇ ಅಡ್ಡಿ ಆತಂಕಗಳು ಇಲ್ಲದೆ ಆರಂಭವಾದ ದಿನದಾಟದಲ್ಲಿ ಟೀಮ್​ ಇಂಡಿಯಾ ಬ್ಯಾಟ್ಸ್​ಮನ್​​ಗಳು, ಕಿವೀಸ್​ ದಾಳಿಗೆ ನಿರುತ್ತರಾದರು.​

146 ರನ್​​ಗಳಿಗೆ 3 ವಿಕೆಟ್​ ಕಳೆದುಕೊಂಡು ದಿನದಾಟ ಪ್ರಾರಂಭಿಸಿದ ಟೀಮ್​ ಇಂಡಿಯಾ, ಭೋಜನ ವಿರಾಮಕ್ಕೆ 7 ವಿಕೆಟ್​​ಗೆ 211 ರನ್​ ಕಲೆ ಹಾಕಿದೆ. ದಿನದಾಟದ ಆರಂಭದಲ್ಲೇ ವಿರಾಟ್​ ಕೊಹ್ಲಿ, ರಿಷಭ್​ ಪಂತ್​ ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಕೊಹ್ಲಿ ಇಂದು ಒಂದೂ ರನ್​ ಗಳಿಸಿದೆ 44ರನ್​ಗೆ​, ಪಂತ್​ ಬೌಂಡರಿ ಸಿಡಿಸಿ ಕೈಲ್​ ಜೆಮಿಸನ್​ಗೆ ವಿಕೆಟ್​ ಒಪ್ಪಿಸಿದ್ದಾರೆ.

ಇನ್ನು ಬೇಗನೇ 2 ವಿಕೆಟ್​ ಕಳೆದುಕೊಂಡರೂ ತಂಡಕ್ಕೆ ಆಸರೆಯಾಗಿದ್ದ ಅಜಿಂಕ್ಯಾ ರಹಾನೆ ಆಟ 49 ರನ್​ಗೆ ಅಂತ್ಯವಾಯ್ತು. 1 ರನ್ನಿಂದ ಅರ್ಧಶತಕದಿಂದ ವಂಚಿರಾದ ರಹಾನೆ, ನೀಲ್​ ವ್ಯಾಗ್ನರ್ ಬೌಲಿಂಗ್​ನಲ್ಲಿ ಲಾಥಮ್​ಗೆ ಕ್ಯಾಚ್​​ ನೀಡಿದರು. ಇನ್ನು ಅಶ್ವಿನ್​ ಕೂಡ ತಂಡಕ್ಕೆ ನೆರವಾದ್ರು. 3 ಭರ್ಜರಿ ಬೌಂಡರಿಗಳೊಂದಿಗೆ 22 ರನ್​ಗಳಿಸಿದ ಅಶ್ವಿನ್​, ತಂಡದ ಮೊತ್ತವನ್ನ 200 ಗಡಿ ದಾಟುವಂತೆ ಮಾಡಿದ್ರು. ಇದರ ಬೆನ್ನಲ್ಲೇ ಸೌಥಿ ಬೌಲಿಂಗ್​ನಲ್ಲಿ ಔಟಾದ್ರು. ಇನ್ನು ಜಡೇಜಾ – ಇಶಾಂತ್​ ಶರ್ಮಾ ಕ್ರೀಸ್​​ನಲ್ಲಿದ್ದಾರೆ.

The post 3ನೇ ದಿನದಾಟದ ಮೊದಲ ಸೆಷನ್​ನಲ್ಲಿ ಕಿವೀಸ್​ ಮೇಲುಗೈ.. ಎಷ್ಟಾಯ್ತು ಟೀಂ ಇಂಡಿಯಾ ಸ್ಕೋರ್​? appeared first on News First Kannada.

Source: newsfirstlive.com

Source link