ಬೆಂಗಳೂರು: ರಾಜ್ಯ ಸರ್ಕಾರ ಕ್ಲೋಸ್​ ಡೌನ್​ ಜಾರಿ ಮಾಡಿ ಮೂರು ದಿನಗಳೇ ಕಳೆದಿದೆ. ಈ ಸಮಯದಲ್ಲಿ ಅನಾವಶ್ಯಕವಾಗಿ ಜನರು ರಸ್ತೆಗಳಲ್ಲಿ ಓಡಾಡಬಾರದು ಅಂತ ಕಟ್ಟುನಿಟ್ಟಾಗಿ ಹೇಳಿದ್ರೂ ಕೆಲವರು ಮಾತ್ರ ರೂಲ್ಸ್ ಬ್ರೇಕ್ ಮಾಡುತ್ತಲೇ ಇದ್ದಾರೆ.

ಹೀಗೆ ಅನಿವಾರ್ಯ ಅಲ್ಲದಿದ್ದರೂ ರಸ್ತೆಗಿಳಿದಿದ್ದ ವಾಹನಗಳನ್ನ ಮೂರನೇ ದಿನವೂ ಅಡ್ಡಗಟ್ಟಿದ ಪೊಲೀಸರು ಇಂದು ಬರೋಬ್ಬರಿ 1,610 ವಾಹನಗಳನ್ನ ಸೀಜ್ ಮಾಡಿದ್ದಾರೆ. ನಗರದ ವಿವಿಧೆಡೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದು ಖಾಸಗಿ ವಾಹನಗಳನ್ನ ಜಪ್ತಿ ಮಾಡಿದ್ದಾರೆ. ಈ ವಾಹನಗಳ ಪೈಕಿ 1,450 ದ್ವಿಚಕ್ರವಾಹನಗಳು ಜಪ್ತಿಯಾಗಿವೆ. ಜೊತೆಗೆ 70 ಕಾರುಗಳು ಹಾಗೂ 90 ಆಟೋಗಳನ್ನು ಪೊಈಸರು ವಶಕ್ಕೆ ಪಡೆದಿದ್ದಾರೆ. ನಿಯಮ ಉಲ್ಲಂಘಿಸಿದ ಹಿನ್ನಲೆ 3 ಎನ್​ಡಿಎಂಎ ಕಾಯ್ದೆ ಅಡಿ ಪ್ರಕರಣ ದಾಖಲಾಗಿವೆ.

 

The post 3ನೇ ದಿನದ ಕ್ಲೋಸ್​ಡೌನ್​.. ಒಂದೇ ದಿನ 1,610 ವೆಹಿಕಲ್​ಗಳು ಪೊಲೀಸರಿಂದ ಸೀಜ್ appeared first on News First Kannada.

Source: newsfirstlive.com

Source link