ಚೆನ್ನೈ: ರಾಜೀವ್ ಗಾಂಧಿ ಸರ್ಕಾರಿ ಜನರಲ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿಗೆ ಒಳಗಾಗಿದ್ದ ಮಹಿಳೆ ನಾಪತ್ತೆಯಾದ ಎರಡು ವಾರಗಳ ನಂತರ ಅದೇ ಆಸ್ಪತ್ರೆಯಲ್ಲಿ ಶವವಾಗಿ ಪತ್ತೆಯಾದ ಆತಂಕಕಾರಿ ಘಟನೆ ನಡೆದಿದೆ.

ಆಸ್ಪತ್ರೆಯ 3ನೇ ಫ್ಲೋರ್​ನಲ್ಲಿ ದಾಖಲಾಗಿದ್ದ 41 ವರ್ಷದ ತಮ್ಮ ಪತ್ನಿ ನಾಪತ್ತೆಯಾಗಿದ್ದಾರೆಂದು ಮೇ 24 ರಂದು ಅವರ ಪತಿ ಪೊಲೀಸ್​ ಕಂಪ್ಲೇಂಟ್ ನೀಡಿದ್ದರು. ಇದಾದ ಎರಡು ವಾರಗಳ ನಂತರ ಅದೇ ಆಸ್ಪತ್ರೆಯ 8 ನೇ ಫ್ಲೋರ್​ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಸುನೀತ ಎಂಬ ಮಹಿಳೆ ಮೇ 22ರಂದು ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಇದಾದ ಎರಡು ದಿನಗಳ ನಂತರ ಇದ್ದಕ್ಕಿದ್ದಂತೆ ಕಾಣೆಯಾಗಿದ್ದಾರೆ.. ಕಾಣೆಯಾದ ಬಗ್ಗೆ ವಿಚಾರಿಸಿದಾಗ ಆಸ್ಪತ್ರೆಯ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದಾರೆ, ಅಲ್ಲದೇ ಪತೆ ಮೌಲಿ ಅವರಿಗೆ ಆಸ್ಪತ್ರೆಯೊಳಗೆ ಪ್ರವೇಶಕ್ಕೆ ಅವಕಾಶ ನೀಡಿಲ್ಲ ಎನ್ನಲಾಗಿದೆ. ಈ ಹಿನ್ನೆಲೆ ಮೌಲಿ ಪೊಲೀಸ್ ಕಂಪ್ಲೇಂಟ್ ದಾಖಲಿಸಿದ್ದಾರೆ.

ಇನ್ನು ಆಸ್ಪತ್ರೆಯಲ್ಲಿ ಶವದ ವಾಸನೆ ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆ ಸಿಬ್ಬಂದಿ ಕಳೆದ ಮಂಗಳವಾರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಪೊಲೀಸರು ಪರಿಶೀಲನೆ ನಡೆಸಿದಾಗ 8 ನೇ ಫ್ಲೋರ್​ನಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. 8 ನೇ ಫ್ಲೋರ್​ನಲ್ಲಿ ಕಾನ್ಫರೆನ್ಸ್ ಹಾಲ್​ ಇತ್ತು ಆದ್ರೆ ಅದನ್ನ ತುಂಬಾ ದಿನಗಳಿಂದ ಬಳಕೆ ಮಾಡುತ್ತಿರಲಿಲ್ಲ ಎಂದು ಆಸ್ಪತ್ರೆ ಸಿಬ್ಬಂದಿ ಹೇಳಿಕೆ ನೀಡಿದ್ದಾರೆ. ಅಲ್ಲದೇ ಆಸ್ಪತ್ರೆಯ ಸಿಸಿಟಿವಿಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲವಾದ್ದರಿಂದ ಮಹಿಳೆ 3 ನೇ ಫ್ಲೋರ್​ನಿಂದ 8 ನೇ ಫ್ಲೋರ್​ಗೆ ಹೇಗೆ ಹೋದರು.. ಯಾವ ಕಾರಣಕ್ಕೆ ಹೋದರು ಎಂಬ ಮಾಹಿತಿ ಲಭ್ಯವಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

The post 3ನೇ ಮಹಡಿಯಲ್ಲಿ ನಾಪತ್ತೆ.. 15 ದಿನಗಳ ನಂತರ 8 ನೇ ಮಹಡಿಯಲ್ಲಿ ಶವ ಪತ್ತೆ appeared first on News First Kannada.

Source: newsfirstlive.com

Source link