3 ತಿಂಗಳಲ್ಲಿ 6ನೇ ಬಾರಿ CM ಹೈಕಮಾಂಡ್​​ಗಾಗಿ ‘ದೆಹಲಿ ಯಾತ್ರೆ’ -ಆಕಾಂಕ್ಷಿಗಳ ಆಸೆಗಳಿಗೆ ಬಂತು ರೆಕ್ಕೆಪುಕ್ಕ

ಬೆಂಗಳೂರು: ರಾಜ್ಯದ ಸಿಂಹಾಸನ ಏರಿದ ಸಿಎಂ ಬೊಮ್ಮಾಯಿ ಪದೇ ಪದೇ ದೆಹಲಿ ಯಾತ್ರೆ ಕೈಗೊಳ್ತಿರೋದು ಸಾಕಷ್ಟೂ ಕುತೂಹಲಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ಆದ ಬಳಿಕ 3 ತಿಂಗಳಲ್ಲಿ ಈಗ 6ನೇ ಬಾರಿ ದೆಹಲಿಗೆ ಹಾರಿರುವ ಸಿಎಂ ಮಹತ್ವದ ಚರ್ಚೆ ನಡೆಸಿದ್ದಾರೆ. ದೆಹಲಿ ಟ್ರಿಪ್​​​​ನಿಂದಾಗಿ ಸಂಪುಟ ವಿಸ್ತರಣೆ, ನಿಗಮ ಮಂಡಳಿ, ಉಪಾಧ್ಯಕ್ಷರ ಮರು ಹಂಚಿಕೆ ವಿಚಾರಕ್ಕೆ ರೆಕ್ಕೆ ಪುಕ್ಕ ಬಂದಿದೆ.

ಗದ್ದುಗೆ ಏರಿದ 3ನೇ ತಿಂಗಳಲ್ಲಿ 6 ಬಾರಿ ಸಿಎಂ ದೆಹಲಿ ಯಾತ್ರೆ
ಚರ್ಚೆ ಆಯ್ತಾ ಸಂಪುಟ ವಿಸ್ತರಣೆ, ನಿಗಮ ಮಂಡಳಿ ವಿಚಾರ?

ಸವಾಲುಗಳಲ್ಲೇ ಹೊತ್ತು ಗದ್ದುಗೆ ಏರಿರುವ ಬಸವರಾಜ ಬೊಮ್ಮಾಯಿ ಪದೇ ಪದೇ ದೆಹಲಿ ಯಾತ್ರೆ ಮಾಡ್ತಿದ್ದಾರೆ. ಇದೀಗ ಮತ್ತೆ ಸಿಎಂ ಹುದ್ದೆ ಅಲಂಕರಿಸಿದ 2 ತಿಂಗಳು ಕಳೆದು 3ನೇ ತಿಂಗಳಲ್ಲಿ 6ನೇ ಬಾರಿ ಪ್ರವಾಸ ಕೈಗೊಂಡಿದ್ದಾರೆ. ಬೊಮ್ಮಾಯಿ ದೆಹಲಿಗೆ ಹೋದಾಗಲೆಲ್ಲಾ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರುತ್ತವೆ. ಅದ್ರೆ ಡೆಲ್ಲಿ ಟೂರ್​ ಮುಗಿಸಿ ವಾಪಾಸ್ ಬಂದ್ಮೇಲೆ ಅಂದುಕೊಂಡಿರುವುದು ಯಾವುದೂ ಆಗಿರುವುದಿಲ್ಲ. ಇದಕ್ಕೆ ಹಲವು ಪ್ರವಾಸದ ನಿರೀಕ್ಷೆ ಹುಸಿಯಾಗಿರುವುದು ಸಾಕ್ಷಿಯಾಗಿದೆ. ಸದ್ಯ ಈ ಬಾರಿಯ ಪ್ರವಾಸದಲ್ಲೂ ಇದೇ ರೀತಿ ಹಲವು ವಿಚಾರಗಳು ಮುನ್ನಲೆಗೆ ಬಂದಿದ್ದು, ರಾಜಕೀಯ ಚಟುವಟಿಕೆ, ಆಕಾಂಕ್ಷಿಗಳ ಆಸೆಗಳಿಗೆ ರೆಕ್ಕೆಪುಕ್ಕ ಬಂದಿದೆ.

ರಾಜ್ಯ ಕಮಲ ಮನೆಯಲ್ಲಿ ಸಿಎಂ ಸರಣಿ ದೆಹಲಿ ಯಾತ್ರೆಗಳು ಸಾಕಷ್ಟೂ ಚರ್ಚೆಗೂ ಕಾರಣವಾಗಿದೆ. ದೊಡ್ಡ ಬೆಳವಣಿಗೆಗಳಿಲ್ಲದೇ ಸುಖಾಸುಮ್ಮನೆ ಹೋಗೋದಿಲ್ಲ. ಹಾಗಾದ್ರೆ ಕಾರಣ ಏನಾಗಿರಬಹುದು ಅನ್ನೋ ಕುತೂಹಲವಂತೂ ಇದ್ದೇ ಇದೆ.

ಸಿಎಂ ದೆಹಲಿ ಯಾತ್ರೆ
ಕಾರಣ 1 : ಇತ್ತೀಚೆಗೆ ಮುಗಿದ ಅಧಿವೇಶನ ಬಗ್ಗೆ ಮಾಹಿತಿ ನೀಡಬೇಕು
ಕಾರಣ 2 : ವಿಧಾನಸಭಾ ಉಪ ಚುನಾವಣೆಯ ಸಿದ್ಧತೆ ಬಗ್ಗೆ ಮಾಹಿತಿ
ಕಾರಣ 3 : ಬಿಎಸ್​​ವೈ ರಾಜ್ಯ ಪ್ರವಾಸ ಬಗ್ಗೆ ಪಕ್ಷದಲ್ಲಿ ಎದ್ದಿರುವ ಚರ್ಚೆ
ಕಾರಣ 4 : ಹಾಲಿ ಖಾಲಿಯಿರುವ 4 ಸಚಿವ ಸ್ಥಾನಗಳ ಭರ್ತಿ ಯಾವಾಗ?
ಕಾರಣ 5 : ನಿಗಮ ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷ ಮರು ಹಂಚಿಕೆ ಚರ್ಚೆ

ಬೊಮ್ಮಾಯಿಗೆ ರಾಜ್ಯದಲ್ಲಿ ಸಾಲು ಸಾಲು ಸವಾಲುಗಳಿವೆ. ಅವುಗಳನ್ನ ಎದುರಿಸುವುದು ಹಾಗೂ ಎಲ್ಲರನ್ನ ಒಟ್ಟಾಗಿ ಕರೆದುಕೊಂಡು ಹೋಗುವುದು ಅಷ್ಟು ಸುಲಭದ ಕೆಲಸವಲ್ಲ. ರಾಜ್ಯದಲ್ಲಿ ಪಕ್ಷದೊಳಗೆ ಏಳುವ ಧ್ವನಿ ಅಡಗಿಸಲು ಹೈಕಮಾಂಡ್​​​​​​​​ ಹತ್ತಿರವಾಗಬೇಕು ಅನ್ನೋದು ಬೊಮ್ಮಾಯಿ ಅರಿತುಕೊಂಡಿದ್ದಾರೆ. ಇದೇ ಕಾರಣಕ್ಕೆ ಪದೇ ಪದೇ ಡೆಲ್ಲಿ ಟ್ರಿಪ್ ಮಾಡುತ್ತಿರುವ ಸಿಎಂ ಈ ಬಾರಿ ಅದ್ಯಾವ ಸಂದೇಶ ಹೊತ್ತು ಬರ್ತಾರೋ ಅನ್ನೋ ಕುತೂಹಲವಂತೂ ಕಮಲ ಮನೆಯಲ್ಲಿ ಇದ್ದೇ ಇದೆ.

ವಿಶೇಷ ವರದಿ: ಮಧುಸೂದನ್, ಪೊಲಿಟಿಕಲ್ ಬ್ಯೂರೋ, ನ್ಯೂಸ್​​ಫಸ್ಟ್​​​

News First Live Kannada

Leave a comment

Your email address will not be published. Required fields are marked *