ಬೆಳಗಾವಿ: ಚಿಕ್ಕೋಡಿ – ಸದಲಗಾ ಕ್ಷೇತ್ರದ ಕಾಂಗ್ರೆಸ್​ ಶಾಸಕ ಗಣೇಶ್ ಹುಕ್ಕೇರಿ, ಕಾರ್ಮಿಕರ ದಿನಾಚರಣೆಯಾದ ಇಂದು ಕೋವಿಡ್ ವಾರಿಯರ್​​ಗಳಿಗೆ  ನೆರವಿನ ಹಸ್ತ ಚಾಚಿದ್ದಾರೆ. ತಮ್ಮ ಮೂರು ತಿಂಗಳ ಸಂಬಳವನ್ನ ಆಶಾ ಕಾರ್ಯಕರ್ತೆಯರಿಗೆ ನೀಡೋದಾಗಿ ಅವರು ಘೋಷಣೆ ಮಾಡಿದ್ದಾರೆ.

ಮುಖ್ಯಮಂತ್ರಿಗಳ ಮನವಿಯಂತೆ ಗಣೇಶ್, ಒಂದು ತಿಂಗಳ ಸಂಬಳವನ್ನ ಕೋವಿಡ್ ನಿಧಿಗೆ ನೀಡಿದ್ದಾರೆ. ಅದರ ಜೊತೆಗೆ ತಮ್ಮ ಕ್ಷೇತ್ರದ ಫ್ರಂಟ್​​ ಲೈನ್ ಕೊರೊನಾ ವಾರಿಯರ್ಸ್​ ಆದ ಆಶಾ ಕಾರ್ಯಕರ್ತೆಯರಿಗೆ ತಮ್ಮ ಮೂರು ತಿಂಗಳ ಸಂಬಳ ನೀಡೋದಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ. ತಮ್ಮ ಅನ್ನಪೂರ್ಣೇಶ್ವರಿ ಫೌಂಡೇಶನ್ ವತಿಯಿಂದ ಸಂಬಳ ನೀಡಿ ಕೊರೊನಾ ಸಂಕಷ್ಟ ಪರಿಹಾರಕ್ಕೆ ಕೈಜೋಡಿಸಿದ್ದಾರೆ.

ರಾಜ್ಯ ಸರ್ಕಾರ‌ ನನಗೆ ನೀಡುವ ಸಂಬಳದಲ್ಲಿ ಒಂದು ತಿಂಗಳ ಸಂಬಳವನ್ನು ಮುಖ್ಯಮಂತ್ರಿಗಳ ಮನವಿಯಂತೆ ಕೋವಿಡ್ ನಿಧಿಗೆ ನೀಡುತ್ತಿದ್ದೇನೆ.
ಅದನ್ನು…

Posted by Ganesh Hukkeri on Friday, 30 April 2021

The post 3 ತಿಂಗಳ ಸಂಬಳ ಆಶಾ ಕಾರ್ಯಕರ್ತೆಯರಿಗೆ ನೀಡೋದಾಗಿ ಶಾಸಕ ಗಣೇಶ್ ಹುಕ್ಕೇರಿ ಘೋಷಣೆ appeared first on News First Kannada.

Source: newsfirstlive.com

Source link