ಬೆಳಗಾವಿ: ಜಿಲ್ಲೆಯಲ್ಲಿ ಕಳೆದ ಮೂರು ದಿನಗಳ ಹಿಂದೆ ಬಳ್ಳಾರಿ ನಾಲಾ ಬಳಿಯ ಮಾರ್ಕಂಡೇಯ ನದಿಯಲ್ಲಿ ಕೊಚ್ಚಿ ಹೋಗಿದ್ದ ರೈತನ ಮೃತದೇಹ ಇಂದು ಪತ್ತೆಯಾಗಿದೆ.

ಕಾಕತಿ ಗ್ರಾಮದ ಸಿದ್ರಾಯ ಸುತಗಟ್ಟಿ(65) ಹೋಲಕ್ಕೆ ಹೋಗಿ ವಾಪಸ್ ಬರುವಾಗ ಕೈಕಾಲು ತೊಳೆದುಕೊಳ್ಳಲು ಹೋಗಿ‌ ನೀರು ಪಾಲಾಗಿದ್ದರು. ಜೂನ್ 18ರಂದು ನದಿಯಲ್ಲಿ ಕೊಚ್ಚಿಹೋಗಿದ್ದ ರೈತನ ಪತ್ತೆಗಾಗಿ ಕಳೆದ ಮೂರು ದಿನಗಳಿಂದ ಎಸ್ಡಿಆರ್​​ಎಫ್, ಅಗ್ನಿಶಾಮಕದಳದ ತಂಡ ಕಾರ್ಯಾಚರಣೆ ನಡೆಸಿದ್ದವು. ಇಂದು ಸಿದ್ರಾಯ ಅವರ ಶವ ಸಿಕ್ಕಿದೆ.

The post 3 ದಿನಗಳ ಹಿಂದೆ ಮಾರ್ಕಂಡೇಯ ನದಿಯಲ್ಲಿ ಕೊಚ್ಚಿಹೋದ ರೈತನ ಮೃತದೇಹ ಪತ್ತೆ appeared first on News First Kannada.

Source: newsfirstlive.com

Source link