3 ನಾಗಾ ಗುಂಪುಗಳೊಂದಿಗೆ ಕದನ ವಿರಾಮ ಒಪ್ಪಂದ ವಿಸ್ತರಿಸಿದ ಕೇಂದ್ರ ಸರ್ಕಾರ | Centre extends ceasefire agreement with three different Naga groups for one more year


3 ನಾಗಾ ಗುಂಪುಗಳೊಂದಿಗೆ ಕದನ ವಿರಾಮ ಒಪ್ಪಂದ ವಿಸ್ತರಿಸಿದ ಕೇಂದ್ರ ಸರ್ಕಾರ

ಗೃಹ ಸಚಿವಾಲಯ

ದೆಹಲಿ: ಮೂರು ವಿಭಿನ್ನ ನಾಗಾ ಗುಂಪುಗಳೊಂದಿಗೆ (Naga group) ಕದನ ವಿರಾಮ ಒಪ್ಪಂದವನ್ನು ಕೇಂದ್ರವು ಇನ್ನೂ ಒಂದು ವರ್ಷಕ್ಕೆ ವಿಸ್ತರಿಸಿದೆ. ನಾಗಾಲ್ಯಾಂಡ್/ಎನ್‌ಕೆ (ಎನ್‌ಎಸ್‌ಸಿಎನ್/ಎನ್‌ಕೆ), ನ್ಯಾಶನಲ್ ಸೋಷಿಯಲಿಸ್ಟ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್/ ರಿಫಾರ್ಮ್ (ಎನ್‌ಎಸ್‌ಸಿಎನ್/ಆರ್) ಮತ್ತು ನ್ಯಾಷನಲ್ ಸೋಷಿಯಲಿಸ್ಟ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್/ಕೆ-ಖಾಂಗೋ (ಎನ್‌ಎಸ್‌ಸಿಎನ್/ಕೆ-ಖಾಂಗೋ) ಈ ಮೂರು ಗುಂಪುಗಳೊಂದಿಗೆ ಸರ್ಕಾರ ಕದನ ವಿರಾಮ ಒಪ್ಪಂದ (ceasefire agreement) ವಿಸ್ತರಿಸಿದೆ.  ಎಲ್ಲಾ ಮೂರು ಗುಂಪುಗಳು ಎನ್‌ಎಸ್‌ಸಿಎನ್ ಐಎಂ ಮತ್ತು ಎನ್‌ಎಸ್‌ಸಿಎನ್/ಕೆನ ಒಡೆದ ಬಣಗಳಾಗಿದ್ದು ವರ್ಷಗಳಿಂದ ಸರ್ಕಾರದೊಂದಿಗೆ ಕದನ ವಿರಾಮ ಒಪ್ಪಂದಗಳಿಗೆ ಸಹಿ ಹಾಕಿವೆ. ಎನ್‌ಎಸ್‌ಸಿಎನ್ /ಎನ್ ಕೆ ಮತ್ತು ಎನ್‌ಎಸ್‌ಸಿಎನ್ /ಆರ್ ಜೊತೆಗೆ ಏಪ್ರಿಲ್ 28, 2022 ರಿಂದ ಏಪ್ರಿಲ್ 27, 2023 ರವರೆಗೆ ಮತ್ತು ಎನ್‌ಎಸ್‌ಸಿಎನ್ /ಕೆ ಖಾಂಗೊ ನೊಂದಿಗೆ ಏಪ್ರಿಲ್ 18, 2022 ರಿಂದ ಏಪ್ರಿಲ್ 17, 2023 ರವರೆಗೆ ಕದನ ವಿರಾಮ ಒಪ್ಪಂದಗಳನ್ನು ವಿಸ್ತರಿಸಲಾಗಿದೆ ಎಂದು ಗೃಹ ವ್ಯವಹಾರಗಳ ಸಚಿವಾಲಯದ ಹೇಳಿಕೆ ತಿಳಿಸಿದೆ. ಒಪ್ಪಂದಗಳಿಗೆ ಏಪ್ರಿಲ್ 19 ರಂದು ಸಹಿ ಹಾಕಲಾಯಿತು. ಎನ್‌ಎಸ್‌ಸಿಎನ್-ಐಎಂ ನಾಯಕರು, ಪ್ರಧಾನ ಕಾರ್ಯದರ್ಶಿ ಥ್ ಮುಯಿವಾ ನೇತೃತ್ವದಲ್ಲಿ ಮಂಗಳವಾರ ನಾಗಾ ಶಾಂತಿ ಮಾತುಕತೆಗಾಗಿ ಕೇಂದ್ರದ ಪ್ರತಿನಿಧಿ ಎ ಕೆ ಮಿಶ್ರಾ ಅವರನ್ನು ದಿಮಾಪುರ್ ಬಳಿಯ ಕ್ಯಾಂಪ್ ಹೆಬ್ರಾನ್‌ನ ಕೇಂದ್ರ ಕಚೇರಿಯಲ್ಲಿ ಭೇಟಿಯಾದ ಹೊತ್ತಲ್ಲಿ ಈ ಬೆಳವಣಿಗೆ ನಡೆದಿದೆ.  ಕೇಂದ್ರದ ಪ್ರತಿನಿಧಿಯಾಗಿ ಆರ್ ಎನ್ ರವಿ ಅವರ ಬದಲಿಗೆ ಗುಪ್ತಚರ ಬ್ಯೂರೋದ ಮಾಜಿ ವಿಶೇಷ ನಿರ್ದೇಶಕ ಮಿಶ್ರಾ ಅವರು ನಾಗಾ ರಾಜಕೀಯ ವಿಷಯದ ಬಗ್ಗೆ ಚರ್ಚಿಸಲು ಸೋಮವಾರ ನಾಗಾಲ್ಯಾಂಡ್‌ಗೆ ಆಗಮಿಸಿದರು. ಅವರು ತಮ್ಮ ವಾಸ್ತವ್ಯದ ಅವಧಿಯಲ್ಲಿ ರಾಜ್ಯ ಸರ್ಕಾರದ ಕೋರ್ ಕಮಿಟಿ ಮತ್ತು ನಾಗಾ ರಾಷ್ಟ್ರೀಯ ರಾಜಕೀಯ ಗುಂಪುಗಳನ್ನು (NNPG) ಭೇಟಿ ಮಾಡುವ ನಿರೀಕ್ಷೆಯಿದೆ.

ಎನ್‌ಎಸ್‌ಸಿಎನ್-ಐಎಂ ಪ್ರಧಾನ ಕಛೇರಿಯಲ್ಲಿ ನಾಗಾ ಸಮಸ್ಯೆಯ ಕುರಿತು ಮಾತುಕತೆ ನಡೆದಿರುವುದು ಇದೇ ಮೊದಲು. ಮಂಗಳವಾರದ ಚರ್ಚೆಗಳು ಎರಡು ಗಂಟೆಗಳಿಗಿಂತ ಸ್ವಲ್ಪ ಹೆಚ್ಚು ಕಾಲ ನಡೆಯಿತು.
ನಾಗಾಲ್ಯಾಂಡ್ ಮುಖ್ಯಮಂತ್ರಿ ನೆಫಿಯು ರಿಯೊ, ಉಪಮುಖ್ಯಮಂತ್ರಿ ವೈ ಪ್ಯಾಟನ್ ಮತ್ತು ಮಾಜಿ ಮುಖ್ಯಮಂತ್ರಿ ಟಿಆರ್ ಝೆಲಿಯಾಂಗ್ ಅವರು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಶಾಂತಿ ಮಾತುಕತೆಗಳ ಸ್ಥಿತಿಗತಿ ಕುರಿತು ಚರ್ಚಿಸಿದ ಒಂದು ವಾರದ ನಂತರ ಸಭೆ ನಡೆದಿದೆ.

ನಾಗಾ ಶಾಂತಿ ಒಪ್ಪಂದವನ್ನು ಅಂತಿಮಗೊಳಿಸಲು ಸರ್ಕಾರವು ಎನ್‌ಎಸ್‌ಸಿಎನ್-ಐಎಂ ಮಾತ್ರವಲ್ಲದೆ ವಿವಿಧ ನಾಗಾ ಗುಂಪುಗಳೊಂದಿಗೆ ತೊಡಗಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ನಾಗಾ ಶಾಂತಿ ಒಪ್ಪಂದವು ಎನ್‌ಎಸ್‌ಸಿಎನ್-ಐಎಂ ನೊಂದಿಗೆ ಅಥವಾ ಇಲ್ಲದೆಯೇ ನಡೆಯುತ್ತದೆ ಎಂದು ಮಾಜಿ ನಾಗಾ ಸಂವಾದಕ ರವಿ ಹೇಳಿದಾಗಿನಿಂದ ಎನ್‌ಎಸ್‌ಸಿಎನ್-ಐಎಂ ಅನುಕೂಲಕರವಾಗಿಲ್ಲ.

ಕಳೆದ ಸೆಪ್ಟೆಂಬರ್‌ನಲ್ಲಿ, ಸರ್ಕಾರವು ಎನ್‌ಎಸ್‌ಸಿಎನ್ ಕೆಯ ನಿಕಿ ಸುಮಿ ಬಣದೊಂದಿಗೆ ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕಿತ್ತು. ಎನ್‌ಎಸ್‌ಸಿಎನ್ ಕೆ 2001 ರಲ್ಲಿ ಸರ್ಕಾರದೊಂದಿಗೆ ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕಿತ್ತು, ಆದರೆ 2015 ರಲ್ಲಿ ಎಸ್ಎಸ್ ಖಪ್ಲಾಂಗ್ ನೇತೃತ್ವದಲ್ಲಿ ಹಿಂತೆಗೆದುಕೊಂಡಿತು. ಖಪ್ಲಾಂಗ್ ಈಗ ಇಲ್ಲ.

TV9 Kannada


Leave a Reply

Your email address will not be published. Required fields are marked *