ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ತಮ್ಮ ನಿವಾಸದಲ್ಲಿ ಸಚಿವರು ಹಾಗೂ ಅಧಿಕಾರಿಗಳ ಜೊತೆ ಕೋವಿಡ್ -19 ನಿಯಂತ್ರಣದ ಕುರಿತು ಚರ್ಚೆ ನಡೆಸಿದರು. ಈ ವೇಳೆ ಕೋವಿಡ್ -19 ನಿಯಂತ್ರಿಸಲು ಸಚಿವರುಗಳಿಗೆ ನೀಡಿರುವ ಜವಾಬ್ದಾರಿಯ ಅನುಸಾರ ಎಲ್ಲಿಯೂ ಯಾವುದೇ ರೀತಿಯ ಕೊರತೆ ಆಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ಸಿಎಂ ನೇತೃತ್ವದ ಸಭೆಯ ಹೈಲೈಟ್ಸ್..

  1. ಪ್ರಮುಖವಾಗಿ ಕಟ್ಟುನಿಟ್ಟಿನ ರೂಲ್ಸ್ ಗಳನ್ನು ಜಾರಿಗೆ ತಂದಿದ್ದು ಜನರು ಅನಗತ್ಯವಾಗಿ ಓಡಾಡುವುದನ್ನು‌ ತಪ್ಪಿಸಬೇಕು.
  2. ತುರ್ತು ಅಗತ್ಯವಿರುವ ರೋಗಿಗಳಿಗೆ ಬೆಡ್ ಹಂಚಿಕೆಗೆ ಕ್ರಮವಹಿಸುವುದು ಮತ್ತು ರೆಮಿಡಿಸಿವಿರ್ ಡ್ರಗ್ ಪೂರೈಕೆಯನ್ನು ಅಗತ್ಯತೆಗನುಸಾರವಾಗಿ ಸರಬರಾಜು ಮಾಡಲು ಕ್ರಮ ತೆಗೆದುಕೊಳ್ಳಲು ಎಂದರು.
  3. ಖಾಸಗಿ ಆಸ್ಪತ್ರೆ ಗಳ ಬೆಡ್ ಗಳ ಬಗ್ಗೆ ನಿಗಾ ಇಡಬೇಕು ಅಲ್ಲದೆ ಆಕ್ಸಿಜನ್, ರೆಮಿಡಿಸಿವಿರ್ ಹಾಗು ಬೆಡ್ ಸೇರಿದಂತೆ ಇತರೆ ವಿಷಯಗಳಲ್ಲಿ ಅಕ್ರಮ ಉಂಟಾದರೆ ಕೂಡಲೇ ಕ್ರಮ ಕೈಗೊಳ್ಳಬೇಕು.
  4. ವಾರ್ ರೂಮ್ ಗಳು ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುವಂತೆ ಮಾಡಬೇಕು.
  5. ಹಂತ ಹಂತವಾಗಿ ವೈದ್ಯಕೀಯ ಕಾಲೇಜುಗಳಿಗೆ ಮತ್ತು ಆಸ್ಪತ್ರೆ ಗಳಿಗೆ ಆಕ್ಸಿಜನ್ ಜನರೇಟರ್ ಪ್ಲಾಂಟ್ ಹಾಕಲು ಈಗಿನಿಂದಾನೆ ಕೆಲಸ ಶುರು ಮಾಡಲು ಸೂಚಿಸಲಾಯಿತು.
  6. 3 ನೇ‌ ಅಲೆಗೆ  ಈಗಿನಿಂದಾನೆ ಸಿದ್ದರಾಗಬೇಕಿದ್ದು ಅದಕ್ಕೊಂದು‌ ಟಾಸ್ಕ್ ಫೋರ್ಸ್ ಕಮಿಟಿ ಮಾಡಲು ಸೂಚಿಸಲಾಯಿತು.
  7. ಶಾಸಕರು ಹಾಗು ಸಚಿವರು ತಮ್ಮ ತಮ್ಮ ಕ್ಷೇತ್ರದಲ್ಲಿ ವಾಸ್ತವ್ಯ ಮಾಡಿ‌  ಜಿಲ್ಲೆಗಳ ಕರೋನ‌ ಪರಿಸ್ಥಿತಿ ಹತೋಟಿಗೆ ತರಲು‌ ಶ್ರಮಿಸಬೇಕು ಎಂದು ಕರೆ ನೀಡಿದರು.

The post 3 ನೇ‌ ಅಲೆಗೆ ಈಗಿನಿಂದಾನೇ ಸಿದ್ದರಾಗಿ.. ಅದಕ್ಕಾಗಿ ಟಾಸ್ಕ್​ಫೋರ್ಸ್ ರಚಿಸಿ- ಸಿಎಂ ಸೂಚನೆ appeared first on News First Kannada.

Source: newsfirstlive.com

Source link