3 ನೇ ಅಲೆಗೆ ಕಡಿವಾಣ ಹಾಕಲು ತಯಾರಾಯ್ತು ಹೈ ಲೆವೆಲ್ ಕಮಿಟಿ.. ದೇವಿಪ್ರಸಾದ್ ಶೆಟ್ಟಿ ನೇತೃತ್ವ

3 ನೇ ಅಲೆಗೆ ಕಡಿವಾಣ ಹಾಕಲು ತಯಾರಾಯ್ತು ಹೈ ಲೆವೆಲ್ ಕಮಿಟಿ.. ದೇವಿಪ್ರಸಾದ್ ಶೆಟ್ಟಿ ನೇತೃತ್ವ

ಬೆಂಗಳೂರು: ರಾಜ್ಯ ಸರ್ಕಾರದಿಂದ ರಾಜ್ಯದಲ್ಲಿ ಕೊರೊನಾ 3ನೇ ಅಲೆಗೆ ಸಿದ್ಧತೆ ನಡೆಯುತ್ತಿದ್ದು ಡಾ. ದೇವಿ ಪ್ರಸಾದ್ ಶೆಟ್ಟಿ ನೇತೃತ್ವದಲ್ಲಿ ಉನ್ನತ ಮಟ್ಟದ ಕಮಿಟಿಯೊಂದನ್ನ ಸರ್ಕಾರ ರಚನೆ ಮಾಡಿದೆ. ಈ ಕಮಿಟಿ ಒಟ್ಟು 13 ಮಂದಿ ಸದಸ್ಯರನ್ನ ಒಳಗೊಂಡಿದೆ. ಇದರಲ್ಲಿ ಬಹುತೇಕರು ತಜ್ಞ ವೈದ್ಯರಿದ್ದಾರೆ.

ಹೈ ಲೆವೆಲ್ ಕಮಿಟಿಯ ಸದಸ್ಯರು

 1. ಚೇರ್​ಮೆನ್ ಆಗಿ ನಾರಾಯಣ ಹೃದಯಾಲಯದ ಡಾ. ದೇವಿ ಪ್ರಸಾದ್ ಶೆಟ್ಟಿ
 2. ಸದಸ್ಯರಾಗಿ ಬೆಂಗಳೂರು ನಿಮ್ಹಾನ್ಸ್​ನ ನಿರ್ದೇಶಕ ಡಾ. ಸತೀಶ್ ಗಿರಿಮಜಿ,
 3. ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಕೇಂದ್ರದ ಮೆಡಿಕಲ್ ಸೂಪರಿಂಟೆಂಟ್ ಡಾ.ಬಸವರಾಜ್ ಬಿ.ವಿ,
 4. WHO ಸಂಸ್ಥೆಯ ಪ್ರಾದೇಶಿಕ ಕೇಂದ್ರ ಮುಖ್ಯಸ್ಥ ಡಾ.ಆಶಿಶ್ ಸಥಪತಿ,
 5. ಹೆಚ್​ಸಿಜಿ ಅನ್​​ಕೋಲಾಜಿಸ್ಟ್ ಡಾ. ಅಜಯ್​ ಕುಮಾರ್,
 6. ಪ್ಯಾಡಿಯೋಟ್ರಿಕ್ ಕ್ಲೌಡ್​​ನೈನ್ ಡಾ.ಅರವಿಂದ್ ಶೆಣೈ,
 7. ಸಾಗರ್ ಆಸ್ಪತ್ರೆಯ ಪ್ಯಾಡಿಯೋಟ್ರಿಕ್ ಇಂಟೆನ್ಸೀವ್ ಡಾ. ರಘುನಾಥ್ ಯು,
 8. ಮಣಿಪಾಲ್ ಆಸ್ಪತ್ರೆಯ ಪ್ಯಾಡಿಯೋಟ್ರಿಕ್ ಕ್ಲಸ್ಟರ್ ಹೆಡ್ ಡಾ. ಜಗದೀಶ್ ಚಿನ್ನಪ್ಪ,
 9. ಆಸ್ಟರ್ ಆಸ್ಪತ್ರೆಯ ಪ್ಯಾಡಿಯೋಟ್ರಿಕ್ ಪಲ್ಮೋನಾಜಿಸ್ಟ್ ಡಾ. ಶ್ರೀಕಾಂತ್ ಜೆ.ಟಿ,
 10. ಬಳ್ಳಾರಿಯ ಮಾಜಿ ಐಎಂಎ ಅಧ್ಯಕ್ಷ ಡಾ.ಯೋಗಾನಂದ ರೆಡ್ಡಿ,
 11. ಹುಬ್ಬಳ್ಳಿ ಕಿಮ್ಸ್​​ನ ಪ್ರೋ ಆಫ್ ಪ್ಯಾಡಿಯಾಟ್ರಿಕ್ಸ್ ಡಾ.ವಿನೋದ್ ಹೆಚ್ ರಥಗೇರಿ,
 12. ಬೆಂಗಳೂರು ಸೆಂಟ್​​ ಜಾನ್ಸ್ ಆಸ್ಪತ್ರೆಯ ಪ್ರೋ ಆಫ್ ಎಪಿಡೆಮಿಯಾಲಜಿ & ಕಮ್ಯುನಿಟಿ ಹೆಲ್ತ್​​ನ ಡಾ. ಪ್ರೇಮ್ ಕೆ ಮೋನಿ ಸದಸ್ಯರಾಗಿ ನೇಮಕ
 13. ಸಮಿತಿಯ ಕಾರ್ಯದರ್ಶಿಯಾಗಿ ಮೆಡಿಕಲ್ ಎಜುಕೇಷನ್ ನಿರ್ದೇಶಕ ಡಾ.ಪಿ ಜಿ ಗಿರೀಶ್

The post 3 ನೇ ಅಲೆಗೆ ಕಡಿವಾಣ ಹಾಕಲು ತಯಾರಾಯ್ತು ಹೈ ಲೆವೆಲ್ ಕಮಿಟಿ.. ದೇವಿಪ್ರಸಾದ್ ಶೆಟ್ಟಿ ನೇತೃತ್ವ appeared first on News First Kannada.

Source: newsfirstlive.com

Source link