ಬೆಂಗಳೂರು: ಮೂರನೇ ಕೊರೊನಾ ಅಲೆಯಲ್ಲಿ‌‌ ಮಕ್ಕಳು ಟಾರ್ಗೆಟ್ ಆಗಲಿದ್ದಾರೆ ಎಂಬ ತಜ್ಞರ ವರದಿ ಬೆನ್ನಲ್ಲೇ ಕೇಂದ್ರ ಸರ್ಕಾರ ಮತ್ತು ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿವೆ. ಮಕ್ಕಳಿಗೂ ವ್ಯಾಕ್ಸಿನ್ ನೀಡೋ‌ ನಿಟ್ಟಿನಲ್ಲಿ ಟ್ರಯಲ್ ರನ್ ಮಾಡಲು ಮುಂದಾಗಿದ್ದು ರಾಜ್ಯದಲ್ಲೂ ಮಕ್ಕಳ ಮೇಲೆ ಕೋವ್ಯಾಕ್ಸಿನ್ ಟ್ರಯಲ್ ರನ್ ನಡೆಯಲಿದೆ.

2 ರಿಂದ 18 ವರ್ಷದ ವಯಸ್ಸಿನವರ ಮೇಲೆ ಟ್ರಯಲ್ ರನ್ ನಡೆಯಲಿದ್ದು 2 ಹಾಗೂ 3 ಹಂತದ ಮಕ್ಕಳ ಮೇಲಿನ ಟ್ರಯಲ್ ಗೆ DGCI ಅನುಮತಿ ನೀಡಿದೆ. ಮೊದಲ ಹಂತದ ಟ್ರಯಲ್ ಹೈದರಾಬಾದ್ ನ ನಿಜಾಮ್ ಇನ್ಸ್​ಟಿಟ್ಯೂಟ್​ನಲ್ಲಿ ಆರಂಭವಾಗಲಿದೆ. ಇನ್ನು ರಾಜ್ಯದಲ್ಲಿ ಕೆಲವು ಸೆಂಟರ್​ಗಳನ್ನ ಗುರುತಿಸಲಾಗಿದೆ. ವೈದೇಹಿ ಮೆಡಿಕಲ್ ಕಾಲೇಜು, ಕ್ಲೌಡ್ ನೈನ್ ಆಸ್ಪತ್ರೆ, ರೈನ್ ಬೋ ಆಸ್ಪತ್ರೆ, ಅಪೊಲೋ ಗ್ರೂಪ್ಸ್, ಮಣಿಪಾಲ್ ಗ್ರೂಪ್ಸ್, JSS ಮೆಡಿಕಲ್ ಕಾಲೇಜಿನಿಂದಲೂ ಟ್ರಯಲ್ ನಡೆಸಲು ಭಾರತ್ ಬಯೋಟೆಕ್ ಗೆ ಮನವಿ ಮಾಡಿಕೊಂಡಿದೆ. ಭಾರತ್ ಬಯೋಟೆಕ್ ಇನ್ನೂ ಅಧಿಕೃತವಾಗಿ ಯಾವುದೇ ಸಂಸ್ಥೆಯನ್ನ ಅಂತಿಮಗೊಳಿಸಿಲ್ಲ.. ಒಟ್ಟಾರೆ 5 ರಿಂದ 6 ಸಾವಿರ ಮಕ್ಕಳ ಮೇಲೆ ಕೋವ್ಯಾಕ್ಸಿನ್ ಟ್ರಯಲ್ ನಡೆಯಲಿದೆ ಎನ್ನಲಾಗಿದೆ.

The post 3 ನೇ ಅಲೆಯಲ್ಲಿ ಮಕ್ಕಳೇ ಟಾರ್ಗೆಟ್: ಎಚ್ಚೆತ್ತ ಕೇಂದ್ರ ಸರ್ಕಾರದಿಂದ ಶೀಘ್ರವೇ ವ್ಯಾಕ್ಸಿನ್ ಟ್ರಯಲ್ ರನ್ appeared first on News First Kannada.

Source: newsfirstlive.com

Source link