3 ಪಂದ್ಯ, 384 ರನ್.. 34 ಬೌಂಡರಿ, 11 ಸಿಕ್ಸರ್‌! ಬೌಲರ್‌ಗಳ ನಿದ್ದೆಗೆಡಿಸಿದ ಸ್ಟಾರ್ ಓಪನರ್..! | Stephen Eskinazi breaks Middlesex record again and this time its Surrey to suffer in royal london cup 2022


Royal London Cup 2022: ಮೊದಲ ಪಂದ್ಯದಲ್ಲಿ 56 ರನ್ ಗಳಿಸಿದ್ದ ಸ್ಟೀಫನ್ ಸತತ ಪಂದ್ಯಗಳಲ್ಲಿ 146 ಹಾಗೂ 182 ರನ್ ಗಳಿಸಿದ್ದರು. ಒಟ್ಟಾರೆ 3 ಪಂದ್ಯಗಳಲ್ಲಿ ಸ್ಟೀಫನ್ 384 ರನ್ ಗಳಿಸಿದ್ದಾರೆ.

ರಾಯಲ್ ಲಂಡನ್ ಕಪ್ 2022 (Royal London Cup 2022)ರಲ್ಲಿ ಮಿಡ್ಲ್‌ಸೆಕ್ಸ್ ತಂಡವು ಸರಣಿ ಗೆಲುವಿನೊಂದಿಗೆ ಮತ್ತೆ ಫಾರ್ಮ್​ಗೆ ಮರಳಿದೆ. ಮೊದಲ ಪಂದ್ಯದಲ್ಲಿ ಲೀಸೆಸ್ಟರ್‌ಶೈರ್ ಎದುರು ಸೋತಿದ್ದ ತಂಡ. ನಂತರದ ಎರಡು ಪಂದ್ಯಗಳಲ್ಲಿ ಅದ್ಭುತ ಗೆಲುವು ದಾಖಲಿಸಿತ್ತು. ಈ ಟೂರ್ನಿಯ ಮೂರೂ ಪಂದ್ಯಗಳಲ್ಲಿ ತಂಡದ ಆರಂಭಿಕ ಆಟಗಾರ ಸ್ಟೀಫನ್ ಎಸ್ಕಿನಾಜಿ ನಿರ್ಣಾಯಕ ಇನಿಂಗ್ಸ್ ಆಡಿದ್ದು ತಂಡದ ಗೆಲುವಿಗೆ ಸಹಕಾರಿಯಾಗಿತ್ತು. ಅದರಲ್ಲೂ ಕಳೆದೆರಡು ಪಂದ್ಯಗಳಲ್ಲಿ ತಂಡ ಗೆಲುವು ಸಾಧಿಸಲು ಅವರ ಮಿಂಚಿನ ಬ್ಯಾಟಿಂಗ್​ಗೆ ಕಾರಣವಾಗಿತ್ತು. ನಿನ್ನೆ (ಆಗಸ್ಟ್ 10) ಸರ್ರೆ ತಂಡದ ವಿರುದ್ಧ ಸ್ಟೀಫನ್ ಎಸ್ಕಿನಾಜಿ (136 ಎಸೆತಗಳಲ್ಲಿ 182; 17 ಬೌಂಡರಿ, 6 ಸಿಕ್ಸರ್) ಬಿರುಸಿನ ಶತಕ ಸಿಡಿಸಿದ್ದರು. ಇದರೊಂದಿಗೆ ಮಿಡ್ಲ್‌ಸೆಕ್ಸ್ ತಂಡ ಸರ್ರೆ ವಿರುದ್ಧ 102 ರನ್‌ಗಳಿಂದ ಅದ್ಭುತ ಜಯ ದಾಖಲಿಸಿತು.

ಈ ಪಂದ್ಯದಲ್ಲಿ ಟಾಸ್ ಗೆದ್ದ ಸರ್ರೆ ತಂಡ ಮೊದಲು ಮಿಡ್ಲ್‌ಸೆಕ್ಸ್ ತಂಡವನ್ನು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಸ್ಟೀಫನ್ ಎಸ್ಕಿನಾಜಿ (136 ಎಸೆತಗಳಲ್ಲಿ 182; 17 ಬೌಂಡರಿ, 6 ಸಿಕ್ಸರ್) ಬಿರುಸಿನ ಶತಕ ಗಳಿಸಿದರೆ, ಪೀಟರ್ ಮಲಾನ್ (60 ಎಸೆತಗಳಲ್ಲಿ 64; 5 ಬೌಂಡರಿ, 3 ಸಿಕ್ಸರ್) ಅರ್ಧಶತಕದೊಂದಿಗೆ ಜವಾಬ್ದಾರಿಯುತ ಇನಿಂಗ್ಸ್ ಆಡಿದರು. ಇದರೊಂದಿಗೆ ತಂಡ ನಿಗದಿತ 50 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 351 ರನ್​ಗಳ ಬೃಹತ್ ಮೊತ್ತ ಗಳಿಸಿತು. ಸರ್ರೆ ತಂಡದ ಪರ ಮೆಕೇರ್ 3, ಮಜಿದ್ ಮತ್ತು ಸ್ಟೀಲ್ ತಲಾ 2 ವಿಕೆಟ್ ಪಡೆದರು.

ಉಮೇಶ್ ಯಾದವ್ (3/52), ಬಾಂಬರ್ (3/46) ಮತ್ತು ಆಂಡರ್ಸನ್ (2/48) ಅಬ್ಬರದ ಬೌಲಿಂಗ್​ ಮುಂದೆ, ಗುರಿ ಬೆನ್ನತ್ತಲು ಕಣಕ್ಕೆ ಇಳಿದ ಸರ್ರೆ ತಂಡವು ನಿಗದಿತ ಓವರ್‌ಗಳಲ್ಲಿ 249 ರನ್‌ಗಳಿಗೆ ಆಲೌಟಾಯಿತು. ಆ ತಂಡದಲ್ಲಿ ರಿಯಾನ್ ಪಟೇಲ್ (118) ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಇದರೊಂದಿಗೆ ಮಿಡ್ಲ್‌ಸೆಕ್ಸ್ 102 ರನ್‌ಗಳ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಮಿಡ್ಲ್‌ಸೆಕ್ಸ್ ತಂಡ ಗ್ರೂಪ್-ಎ ಪಾಯಿಂಟ್ಸ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಏರಿತು.

3 ಪಂದ್ಯಗಳಲ್ಲಿ 384 ರನ್.. 34 ಬೌಂಡರಿ, 11 ಸಿಕ್ಸರ್..

ಸ್ಟೀಫನ್ ಎಸ್ಕಿನಾಜಿ.. ಈ ಟೂರ್ನಿಯಲ್ಲಿ ಮಿಡ್ಲ್‌ಸೆಕ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಜೊತೆಗೆ ಪ್ರತಿ ಪಂದ್ಯದಲ್ಲೂ ನಿರ್ಣಾಯಕ ಇನ್ನಿಂಗ್ಸ್ ಆಡುತ್ತಿದ್ದಾರೆ. ತಂಡಕ್ಕೆ ಗೆಲುವು ತಂದುಕೊಡುವುದಷ್ಟೇ ಅಲ್ಲ.. ಮಿಂಚಿನ ಬ್ಯಾಟಿಂಗ್ ಮೂಲಕ ಎದುರಾಳಿಗಳನ್ನು ಕಂಗೆಡಿಸುತ್ತಿದ್ದಾರೆ. ಮೊದಲ ಪಂದ್ಯದಲ್ಲಿ 56 ರನ್ ಗಳಿಸಿದ್ದ ಸ್ಟೀಫನ್ ಸತತ ಪಂದ್ಯಗಳಲ್ಲಿ 146 ಹಾಗೂ 182 ರನ್ ಗಳಿಸಿದ್ದರು. ಒಟ್ಟಾರೆ 3 ಪಂದ್ಯಗಳಲ್ಲಿ ಸ್ಟೀಫನ್ 384 ರನ್ ಗಳಿಸಿದ್ದಾರೆ. ಈ ವೇಳೆ ಅವರು 34 ಬೌಂಡರಿ ಮತ್ತು 11 ಸಿಕ್ಸರ್‌ಗಳೊಂದಿಗೆ ಅರ್ಧ ಶತಕ ಮತ್ತು 2 ಶತಕಗಳನ್ನು ದಾಖಲಿಸಿದರು.

ತಾಜಾ ಸುದ್ದಿ

TV9 Kannada


Leave a Reply

Your email address will not be published. Required fields are marked *