ಬಳ್ಳಾರಿ: ಜಿಂದಾಲ್‌ ಕಂಪನಿ ಮೈದಾನದಲ್ಲಿ ಸಾವಿರ ಆಕ್ಸಿಜನ್ ಬೆಡ್‌‌ಗಳ ತಾತ್ಕಾಲಿಕ ಆಸ್ಪತ್ರೆ ನಿರ್ಮಾಣಕ್ಕೆ ಸರ್ಕಾರದ ಸಮ್ಮತಿ ಸಿಕ್ಕಿದೆ. ಇದರ ಬೆನ್ನಲ್ಲೇ ಕೋವಿಡ್‌ ಸೋಂಕಿತರಿಗಾಗಿ ಮೂರು ಪಟ್ಟು ಹೆಚ್ಚಿಗೆ ಆಕ್ಸಿಜನ್ ಉತ್ಪಾದನೆ ಮಾಡಲು ಜಿಂದಾಲ್ ಕಂಪನಿ ಮುಂದಾಗಿದೆ.

ಆಕ್ಸಿಜನ್ ಉತ್ಪಾದಿಸಿ ಕೋವಿಡ್‌ ಸಾವಿನ ಪ್ರಮಾಣ ತಡೆಯಲು ನೆರವಾಗಬೇಕೆಂದು ಕಂಪನಿ  ನಿರ್ಧರಿಸಿದೆ. ಹೀಗಾಗಿ ಹೆಚ್ಚು ಆಕ್ಸಿಜನ್ ಉತ್ಪಾದಿಸಿ ರಾಜ್ಯದಲ್ಲಿ ಅದರ ಪೊರೈಕೆ ಮಾಡಲು ಮುಂದೆ ಬಂದಿದೆ.

ಬಳ್ಳಾರಿಯ ತೋರಣಗಲ್ಲು ಬಳಿ ಇರೋ ಜಿಂದಾಲ್ ಆಕ್ಸಿಜನ್ ಉತ್ಪಾದನಾ ಘಟಕದಲ್ಲಿ ಈ ಮೊದಲು ದಿನಕ್ಕೆ 200 ಟನ್‌ನಷ್ಟು ಆಕ್ಸಿಜನ್ ಉತ್ಪಾದನೆ ಮಾಡಲಾಗ್ತಿತ್ತು. ಕಳೆದೆರಡು ದಿನಗಳಿಂದ ಸಂಸ್ಥೆ 680 ಟನ್ ಆಕ್ಸಿಜನ್ ಉತ್ಪಾದನೆ ಮಾಡ್ತಿದೆ. ಈಗಾಗಲೇ ಕೋವಿಡ್ ಸೋಂಕಿತರ ನೆರವಿಗೆ 11,500 ಟನ್ ಆಕ್ಸಿಜನ್ ಪೊರೈಕೆ ಮಾಡಿದ್ದು, ಇದರ ಬಹುಪಾಲು ಕರ್ನಾಟಕ ರಾಜ್ಯಕ್ಕೆ ನೀಡಲಾಗಿದೆ ಎಂದು ಜಿಂದಾಲ್ ಕಂಪನಿಯ ವರ್ಕ್ಸ್​​ ಅಧ್ಯಕ್ಷ ರಾಜಶೇಖರ್ ಪಟ್ಟಣಶೆಟ್ಟಿ ನ್ಯೂಸ್​​ಫಸ್ಟ್‌ಗೆ ಮಾಹಿತಿ ನೀಡಿದ್ದಾರೆ.

ತುರ್ತು ಸಂದರ್ಭದಲ್ಲಿ ಆಕ್ಸಿಜನ್ ಪೂರೈಕೆ ಮಾಡಲು ಸಿದ್ಧ ಎಂದ ಜಿಂದಾಲ್ ಹೇಳಿದೆ. ಅವಳಿ ಜಿಲ್ಲೆಯಲ್ಲಿರೋ 8 ಆಕ್ಸಿಜನ್ ಉತ್ಪಾದನಾ ಘಟಕಗಳ ಪೈಕಿ ಈಗಾಗಲೇ ಗಣಿನಾಡಿನಲ್ಲಿ ದಿನ 500ಕ್ಕೂ ಅಧಿಕ ಟನ್ ಆಕ್ಸಿಜನ್ ಉತ್ಪಾದನೆಯಾಗುತ್ತದೆ. ವಾರಕ್ಕೆ ಅಂದಾಜು 3500 ಟನ್ ಆಕ್ಸಿಜನ್ ಉತ್ಪಾದಿಸಲಾಗ್ತಿದೆ. ಜಿಲ್ಲೆಯ ಜೀವಾಮೃತಕ್ಕೆ ಈಗ ಮಹಾರಾಷ್ಟ್ರ, ಗೋವಾ ಸೇರಿದಂತೆ ಹಲವು ರಾಜ್ಯಗಳಿಂದ ಬೇಡಿಕೆ ಹೆಚ್ಚಿದೆ.

The post 3 ಪಟ್ಟು ಹೆಚ್ಚು ಆಕ್ಸಿಜನ್ ಉತ್ಪಾದನೆಗೆ ಮಂದಾದ ಜಿಂದಾಲ್ ಕಂಪನಿ appeared first on News First Kannada.

Source: newsfirstlive.com

Source link