3 ಬೇಡಿಕೆ ಮುಂದಿಟ್ಟು ಇಂದು ರೈತರಿಂದ ರಾಜಭವನ್ ಚಲೋ

3 ಬೇಡಿಕೆ ಮುಂದಿಟ್ಟು ಇಂದು ರೈತರಿಂದ ರಾಜಭವನ್ ಚಲೋ

ಬೆಂಗಳೂರು: ಇಂದು ನಗರದಲ್ಲಿ ರೈತರು ರಾಜಭವನ್ ಚಲೋ ನಡೆಸುತ್ತಿದ್ದಾರೆ. ಸಂಯುಕ್ತ ಹೋರಾಟ ಕರ್ನಾಟಕ ಸಮಿತಿಯಿಂದ ಮೌರ್ಯ ವೃತ್ತದಲ್ಲಿ ಧರಣಿ ಹಾಗೂ ಜಾಥಾ ಆರಂಭವಾಗಿದ್ದು,ರಾಜ್ಯದ ವಿವಿಧ ಭಾಗಗಳಿಂದ ರೈತರು ರಾಜಧಾನಿಗೆ ಆಗಮಿಸಿದ್ದಾರೆ.

ಕೃಷಿ ಉಳಿಸಿ, ಪ್ರಜಾಪ್ರಭುತ್ವ ರಕ್ಷಿಸಿ ಅನ್ನೋ ಘೋಷವಾಕ್ಯದಡಿ ಧರಣಿ ನಡೆಸಲಾಗ್ತಿದೆ. ಈ ಸಂಬಂಧ ರಾಜ್ಯದ ಎಲ್ಲ ಜಿಲ್ಲೆ ಮತ್ತು ತಾಲ್ಲೂಕುಗಳಿಂದ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಗಿದೆ. ಸಂಯುಕ್ತ ಕಿಸಾನ್ ಮೋರ್ಚಾದಿಂದ ಧರಣಿಗೆ ಕರೆ ನೀಡಲಾಗಿದೆ.

ರೈತ ಮುಖಂಡ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ರೈತರ ಬೇಡಿಕೆಗಳ ಕುರಿತು ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗಿದೆ.

ಬೇಡಿಕೆಗಳು:

  • ಕೃಷಿ ವಿರೋಧಿ ಕಾನೂನುಗಳ ರದ್ದು
  • ಬೆಳೆ ವಿಮೆ ನೀಡ್ಬೇಕು
  •  ಪೆಟ್ರೋಲ್, ಡಿಸೇಲ್ ಬೆಲೆ ಇಳಿಕೆ.

ದೆಹಲಿಯಲ್ಲಿ‌ ಕಿಸಾನ್ ಸಂಯುಕ್ತ ಮೋರ್ಚಾ ಅಡಿಯಲ್ಲಿ ರೈತರು ಹೋರಾಟ ಮಾಡ್ತಾ ಇದ್ದಾರೆ. ಅದನ್ನ ಬೆಂಬಲಿಸಿ, ರಾಜ್ಯದ ರೈತರು ರಾಜ್ಯಪಾಲರಿಗೆ ಮನವಿ ಕೊಡಲು ನಿರ್ಧಾರ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿದ ಕುರುಬೂರು ಶಾಂತಕುಮಾರ್, ಕೊರೊನಾ‌ ರೂಲ್ಸ್ ನೊಂದಿಗೆ ನಾವು ಇವತ್ತು ಪ್ರತಿಭಟನೆ ಮಾಡ್ತೀವಿ. ಕೃಷಿ ವಿರೋಧಿ ಕಾನೂನುಗಳನ್ನು ರದ್ದುಗೊಳಿಸಬೇಕು ಅಂತಾ ರಾಜ್ಯಪಾಲರಿಗೆ‌ ಮನವಿ ಮಾಡ್ತೀವಿ. ರಾಜ್ಯಪಾಲರ ಮೂಲಕ, ರಾಷ್ಟ್ರಪತಿಗಳಿಗೆ ಅವರು ಮನವಿ ಮಾಡಬೇಕು. ರೈತರ ಬಲಿದಾನ ಮಾಡಿ, ಸತತವಾಗಿ ಹೋರಾಟ ಮಾಡ್ತಾ ಇದ್ರೂ ಸರ್ಕಾರ ಮಣಿತಾ ಇಲ್ಲ ಎಂದರು.

The post 3 ಬೇಡಿಕೆ ಮುಂದಿಟ್ಟು ಇಂದು ರೈತರಿಂದ ರಾಜಭವನ್ ಚಲೋ appeared first on News First Kannada.

Source: newsfirstlive.com

Source link