3 Idiots: ‘3 ಈಡಿಯಟ್ಸ್​’ ಚಿತ್ರೀಕರಣಗೊಂಡ ಬೆಂಗಳೂರಿನ ಐಐಎಂ ಕ್ಯಾಂಪಸ್​ ಈಗ ಹೇಗಿದೆ? ಇಲ್ಲಿದೆ ನೋಡಿ | How is The original College campus where 3 Idiots shoted looks like now take a tour of Bengaluru IIM Campus with 3 idiots reference


3 Idiots: ‘3 ಈಡಿಯಟ್ಸ್​’ ಚಿತ್ರೀಕರಣಗೊಂಡ ಬೆಂಗಳೂರಿನ ಐಐಎಂ ಕ್ಯಾಂಪಸ್​ ಈಗ ಹೇಗಿದೆ? ಇಲ್ಲಿದೆ ನೋಡಿ

‘3 ಇಡಿಯಟ್ಸ್’ ಚಿತ್ರದಲ್ಲಿ ಬೆಂಗಳೂರಿನ ಐಐಎಮ್​ ಕಾಲೇಜು

IIM Bengaluru | Aamir Khan: ರಾಜ್‌ಕುಮಾರ್ ಹಿರಾನಿ ನಿರ್ದೇಶನದ ‘3 ಈಡಿಯಟ್ಸ್​’ ಚಿತ್ರದಲ್ಲಿ ಅಮೀರ್, ಶರ್ಮಾನ್ ಮತ್ತು ಮಾಧವನ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಾಗಿ ಕಾಣಿಸಿಕೊಂಡಿದ್ದರು. ಕ್ಯಾಂಪಸ್​ ದೃಶ್ಯದ ಚಿತ್ರೀಕರಣವನ್ನು ಬೆಂಗಳೂರಿನ ಖ್ಯಾತ ಐಐಎಂ ಕಾಲೇಜಿನಲ್ಲಿ ಚಿತ್ರೀಕರಿಸಲಾಗಿತ್ತು. ಇದೀಗ ಇನ್​ಸ್ಟಾಗ್ರಾಂನಲ್ಲಿ ನೈಜ ಕಾಲೇಜು ಹಾಗೂ ಚಿತ್ರೀಕರಣಗೊಂಡ ಸ್ಥಳಗಳ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ.

ಬಾಲಿವುಡ್​ನ ‘3 ಈಡಿಯಟ್ಸ್’ (3 Idiots Movie) ಚಿತ್ರ ಸಾರ್ವಕಾಲಿಕ ಹಿಟ್ ಸಿನಿಮಾಗಳಲ್ಲೊಂದು. ಜನರು ಈಗಲೂ ಆ ಚಿತ್ರವನ್ನು ಬಹಳ ಇಷ್ಟಪಟ್ಟು ಮತ್ತೆ ಮತ್ತೆ ವೀಕ್ಷಿಸಿತ್ತಾರೆ. ಆಮಿರ್ ಖಾನ್ (Aamir Khan), ಆರ್ ಮಾಧವನ್ ಮತ್ತು ಶರ್ಮಾನ್ ಜೋಶಿ ಹಾಗೂ ಕರೀನಾ ಕಪೂರ್ ಮೊದಲಾದವರು ನಟಿಸಿದ್ದ ಆ ಚಿತ್ರವನ್ನು ಬೆಂಗಳೂರಿನಲ್ಲೇ ಚಿತ್ರೀಕರಿಸಿದ್ದು ಎನ್ನುವುದು ಕನ್ನಡಿಗರಿಗೆ ಖುಷಿಯ ವಿಚಾರ. ರಾಜ್‌ಕುಮಾರ್ ಹಿರಾನಿ ನಿರ್ದೇಶನದ ಈ ಚಿತ್ರದಲ್ಲಿ ಅಮೀರ್, ಶರ್ಮಾನ್​ ಮತ್ತು ಮಾಧವನ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಾಗಿ ಕಾಣಿಸಿಕೊಂಡಿದ್ದರು. ಕ್ಯಾಂಪಸ್​ ದೃಶ್ಯದ ಚಿತ್ರೀಕರಣವನ್ನು ಬೆಂಗಳೂರಿನ ಖ್ಯಾತ ಐಐಎಂ ಕಾಲೇಜಿನಲ್ಲಿ ಚಿತ್ರೀಕರಿಸಲಾಗಿತ್ತು. ಇದೀಗ ಇನ್​ಸ್ಟಾಗ್ರಾಂನಲ್ಲಿ ಕ್ಯಾಂಪಸ್​ನ ಈಗಿನ ಫೋಟೋಗಳು ಹಾಗೂ ಚಿತ್ರೀಕರಣಗೊಂಡ ಸ್ಥಳಗಳ ಫೋಟೋಗಳನ್ನು ಒಟ್ಟಾಗಿ ಹಂಚಿಕೊಳ್ಳಲಾಗಿದೆ. ಐಐಎಂ ಕಾಲೇಜಿನಿಂದ ಇತ್ತೀಚೆಗೆ ಪದವಿ ಪಡೆದ ಸ್ಟೀವರ್ ರಾಥೋಡ್ ಎಂಬ ವಿದ್ಯಾರ್ಥಿಯೋರ್ವರು ಈ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ‘ಐಐಎಂ ಬೆಂಗಳೂರು ಹಾಗೂ 3 ಈಡಿಯಟ್ಸ್​’ ಎಂಬ ಸರಣಿಯಲ್ಲಿ ಈ ಚಿತ್ರಗಳನ್ನು ಪೋಸ್ಟ್​​ ಮಾಡಲಾಗಿದ್ದು, ವೈರಲ್ ಆಗಿವೆ.

‘3 ಈಡಿಯಟ್ಸ್​’ ಚಿತ್ರೀಕರಣಗೊಂಡ ಸ್ಥಳಗಳು ಹಾಗೂ ಐಐಎಂ ಕ್ಯಾಂಪಸ್​:

ಈ ಪೋಸ್ಟ್​ಗೆ ನೆಟ್ಟಿಗರು ಸಂತಸದಿಂದ ಪ್ರತಿಕ್ರಿಯೆಗಳನ್ನು ಹಂಚಿಕೊಂಡಿದ್ದಾರೆ. ‘ಎಲ್ಲಾ ಚಿತ್ರಗಳು ಎಷ್ಟು ಚೆನ್ನಾಗಿ ಹೊಂದುವಂತೆ ತೆಗೆದಿದ್ದೀರಿ, ಬಹಳ ಒಳ್ಳೆಯ ಪ್ರಯತ್ನ’ ಎಂದು ಓರ್ವರು ಪ್ರತಿಕ್ರಿಯಿಸಿದ್ದಾರೆ. ಸದ್ಯ ಈ ಚಿತ್ರಗಳು ಎಲ್ಲೆಡೆ ವೈರಲ್ ಆಗುತ್ತಿವೆ.

ಆ ಸೀರೀಸ್​ನ ಮತ್ತೊಂದು ಫೋಟೋ ಇಲ್ಲಿದೆ:

‘3 ಈಡಿಯಟ್ಸ್’ ಚಿತ್ರೀಕರಣದ ಸಮಯದಲ್ಲಿ ಸಂಪೂರ್ಣ ಚಿತ್ರತಂಡ ಐಐಎಂ ಕಾಲೇಜಿನ ಹಾಸ್ಟಲ್​ನಲ್ಲಿ ಉಳಿದುಕೊಂಡಿತ್ತು ಎಂದು ವರದಿಗಳು ಹೇಳಿವೆ. ಪಾತ್ರವನ್ನು ಮತ್ತಷ್ಟು ಅರ್ಥ ಮಾಡಿಕೊಳ್ಳಲು ಹಾಗೂ ವಿದ್ಯಾರ್ಥಿಗಳ ದೈನಂದಿನ ಜೀವನವನ್ನು ತಿಳಿದುಕೊಳ್ಳಲು ಆಮಿರ್ ಖಾನ್ ಕೂಡ ಹಾಸ್ಟಲ್​ನಲ್ಲಿ ತಂಗಿದ್ದರು. ಅಲ್ಲದೇ ಐಐಎಂ ಕಾಲೇಜಿನ ವಿದ್ಯಾರ್ಥಿಗಳು ಹೇಗೆ ಯೋಚಿಸುತ್ತಾರೆ ಎನ್ನುವುದು ತಿಳಿದುಕೊಳ್ಳಲು ವಿದ್ಯಾರ್ಥಿಗಳನ್ನು ಸಂಜೆ ಹಾಗೂ ಬೆಳಗ್ಗೆ ಭೇಟಿಯಾಗಿ ಸಂವಹನ ನಡೆಸುತ್ತಿದ್ದರು. ಇದನ್ನು ವಿದ್ಯಾರ್ಥಿಯೋರ್ವರು ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದರು.

ಚಿತ್ರಗಳ ವಿಷಯಕ್ಕೆ ಬಂದರೆ ಆಮಿರ್ ಖಾನ್ ನಟನೆಯ ‘ಲಾಲ್ ಸಿಂಗ್ ಚಡ್ಡಾ’ ಚಿತ್ರದ ಟ್ರೇಲರ್ ಇತ್ತೀಚೆಗೆ ರಿಲೀಸ್ ಆಗಿದೆ. ಆಮಿರ್ ನಟನೆ ಗಮನ ಸೆಳೆದಿದ್ದರೂ ಕೂಡ, ಟ್ರೇಲರ್​ಗೆ ನಿರೀಕ್ಷಿತ ಪ್ರತಿಕ್ರಿಯೆ ಲಭ್ಯವಾಗಿಲ್ಲ. ವಿಶೇಷವೆಂದರೆ ‘3 ಈಡಿಯಟ್ಸ್​’ನಲ್ಲಿ ಆಮಿರ್​ಗೆ ಜತೆಯಾಗಿ ನಟಿಸಿದ್ದ ಕರೀನಾ ಕಪೂರ್ ಈ ಚಿತ್ರದಲ್ಲೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

TV9 Kannada


Leave a Reply

Your email address will not be published. Required fields are marked *