ಮಡಿಕೇರಿ: ದೇಶದಲ್ಲಿ ವ್ಯಾಕ್ಸಿನ್ ಕೊರತೆ ಇರುವ ಹಿನ್ನೆಲೆಯಲ್ಲಿ ಸದ್ಯಕ್ಕೆ 30 ವರ್ಷದ ಮೇಲ್ಪಟ್ಟವರಿಗೆ ಮಾತ್ರ ವ್ಯಾಕ್ಸಿನ್ ವಿತರಣೆ ಮಾಡಲಿ ಎಂದು ಅರೋಗ್ಯ ಸಚಿವರಿಗೆ ಮನವಿ ಮಾಡುವುದಾಗಿ ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ತಿಳಿಸಿದ್ದಾರೆ.

ಮಡಿಕೇರಿಯಲ್ಲಿ ಮಾತಾನಾಡಿದ ಅವರು, ದೇಶದಲ್ಲಿ ವ್ಯಾಕ್ಸಿನೇಷನ್ ಕೊರತೆ ಇದೆ. ನಮ್ಮ ರಾಜ್ಯದ 3 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಕೋವಿಡ್ ಸೋಂಕಿತರಿದ್ದಾರೆ. ಸೋಂಕಿನ ಸಂಖ್ಯೆ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಇದೀಗಾ 18 ರಿಂದ 45 ವರ್ಷದ ಅವರಿಗೆ ಕೋಡಬೇಕು ಎಂದು ಇದೆ.ಅದರೆ ಸದ್ಯಕ್ಕೆ ವ್ಯಾಕ್ಸಿನೇಷನ್ ಕೊರತೆ ಇರುವುದರಿಂದ 30 ವರ್ಷ ಮೇಲ್ಪಟ್ಟವರಿಗೆ ಮಾತ್ರ ವ್ಯಾಕ್ಸಿನ್ ವಿತರಣೆ ಮಾಡಲಿ ಎಂದು ಹೇಳಿದ್ದಾರೆ.

ಸಾಕಷ್ಟು ವ್ಯಾಕ್ಸಿನ್ ಬಂದ ಬಳಿಕ 18 ವರ್ಷದಿಂದ ಮೇಲ್ಪಟ್ಟ ಎಲ್ಲರಿಗೂ ವಿತರಿಸಲಿ ಈಗಾಗಲೇ ನೊಂದಣಿ ಮಾಡಿಕೊಂಡಿದ್ದರೆ ಅದನ್ನು ಸದ್ಯಕ್ಕೆ ತಡೆಹಿಡಿಯೋದು ಒಳ್ಳೆಯದು. ಈಗಾಗಲೇ ನೊಂದಣಿ ಮಾಡಿದವರಿಗೆ ವ್ಯಾಕ್ಸಿನೇಷನ್ ತಡೆಯಿಡಿಯಲಾಗಿದೆ. ಬಳಿಕ ವ್ಯಾಕ್ಸಿನೇಷನ್ ಹೆಚ್ಚಾಗಿ ಬಂದ ಬಳಿಕ ಮೊದಲ ಆದ್ಯತೆಯಾಗಿ ನೊಂದಣಿ ಮಾಡಿಕೊಂಡ ಯುವ ಸಮೂಹಕ್ಕೆ ನೀಡುವಂತೆ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.

The post 30ವರ್ಷ ಮೇಲ್ಪಟ್ಟವರಿಗೆ ಮಾತ್ರ ವ್ಯಾಕ್ಸಿನ್ ವಿತರಣೆ ಮಾಡಲಿ: ಅಪ್ಪಚ್ಚು ರಂಜನ್ appeared first on Public TV.

Source: publictv.in

Source link