30 ವರ್ಷಗಳ ಹಿಂದೆ ಐಶ್ವರ್ಯಾ ರೈ ಹೇಗಿದ್ರು ಗೊತ್ತಾ? ಇಲ್ಲಿದೆ ಫೋಟೋ | Aishwarya Rai 30 year Old Photo goes viral In social media


30 ವರ್ಷಗಳ ಹಿಂದೆ ಐಶ್ವರ್ಯಾ ರೈ ಹೇಗಿದ್ರು ಗೊತ್ತಾ? ಇಲ್ಲಿದೆ ಫೋಟೋ

ಐಶ್ವರ್ಯಾ ರೈ

1992ರಲ್ಲಿ ಐಶ್ವರ್ಯಾ ರೈ ಅವರು ಮ್ಯಾಗಜಿನ್ ಒಂದರ ಫೋಟೋಶೂಟ್​ನಲ್ಲಿ ಭಾಗಿಯಾಗಿದ್ದರು. ಈ ಫೋಟೋಶೂಟ್​ ಸಂದರ್ಭದಲ್ಲಿ ತೆಗೆದ ಫೋಟೋ ಈಗ ವೈರಲ್ ಆಗಿದೆ.

ಸೆಲೆಬ್ರಿಟಿಗಳು ಬಾಲ್ಯದಲ್ಲಿ (Childhood Photo) ಹೇಗಿದ್ದರು ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಅಭಿಮಾನಿಗಳಲ್ಲಿ ಇರುತ್ತದೆ. ಈ ಕಾರಣಕ್ಕೆ ಸೆಲೆಬ್ರಿಟಿಗಳೇ ಆಗಾಗ ತಮ್ಮ ಬಾಲ್ಯದ ಚಿತ್ರಗಳನ್ನು ಹಂಚಿಕೊಳ್ಳುತ್ತಾರೆ. ಈ ಫೋಟೋಗಳು ಸಾಕಷ್ಟು ವೈರಲ್ ಆಗುತ್ತವೆ. ಈಗ ಒಂದು ಫೋಟೋ ವೈರಲ್ ಆಗಿದೆ. ಈ ಫೋಟೋದಲ್ಲಿರೋದು ಬಾಲಿವುಡ್​ನ ಸ್ಟಾರ್ ನಟಿ. ಈ ಚಿತ್ರ ಸಖತ್ ವೈರಲ್ ಆಗುತ್ತಿದೆ. ಅಂದಹಾಗೆ, ಈ ಫೋಟೋ ಬೇರಾರದ್ದೂ ಅಲ್ಲ ನಟಿ ಐಶ್ವರ್ಯಾ ರೈ (Aishwarya Rai) ಅವರದ್ದು. ಈ ಚಿತ್ರಕ್ಕೆ ನಾನಾ ಕಮೆಂಟ್​ಗಳು ಬರುತ್ತಿವೆ.

ಐಶ್ವರ್ಯಾ ರೈ ಅವರಿಗೆ 1994ರಲ್ಲಿ ವಿಶ್ವ ಸುಂದರಿ ಪಟ್ಟ ಸಿಕ್ಕಿತು. ಇದು ಅವರ ಜೀವನವನ್ನೇ ಬದಲಿಸಿತು. ಸಿನಿಮಾ ಆಫರ್​ಗಳು ಅವರನ್ನು ಹುಡುಕಿ ಬಂದವು. ಅವರು ಕೆಲ ವರ್ಷ ಬಿಟ್ಟು ಚಿತ್ರರಂಗಕ್ಕೆ ಕಾಲಿಟ್ಟು ಸ್ಟಾರ್ ನಟಿ ಆದರು. 1992ರಲ್ಲಿ ಐಶ್ವರ್ಯಾ ರೈ ಅವರು ಮ್ಯಾಗಜಿನ್ ಒಂದರ ಫೋಟೋಶೂಟ್​ನಲ್ಲಿ ಭಾಗಿಯಾಗಿದ್ದರು. ಈ ಫೋಟೋಶೂಟ್​ ಸಂದರ್ಭದಲ್ಲಿ ತೆಗೆದ ಫೋಟೋ ಈಗ ವೈರಲ್ ಆಗಿದೆ.

1992ಅಂದರೆ, 30 ವರ್ಷಗಳ ಹಿಂದೆ ತೆಗೆದ ಫೋಟೋ ಈಗ ವೈರಲ್ ಆಗುತ್ತಿದೆ. ಈ ಫೋಟೋಗೆ ಅಭಿಮಾನಿಗಳು ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ರೆಟ್ರೋ ಲುಕ್​ನಲ್ಲಿ ಐಶ್ವರ್ಯಾ ಅವರನ್ನು ನೋಡಿ ಫ್ಯಾನ್ಸ್ ನಿಜಕ್ಕೂ ಖುಷಿಪಟ್ಟಿದ್ದಾರೆ. ಸದ್ಯ ಕುಟುಂಬದ ಆರೈಕೆಯಲ್ಲಿ ಬ್ಯುಸಿ ಇರುವ ಅವರಿಗೆ ಅಭಿಮಾನಿ ಬಳಗ ಕಿರಿದಾಗಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಅವರನ್ನು ಈಗಲೂ ದೊಡ್ಡ ಸಂಖ್ಯೆಯಲ್ಲಿ ಫಾಲೋ ಮಾಡಲಾಗುತ್ತಿದೆ.

1200 ರೂ ಸಂಭಾವನೆ ಪಡೆದಿದ್ದ ಐಶ್ವರ್ಯಾ

ವೃತ್ತಿ ಜೀವನದ ಆರಂಭದಲ್ಲಿ ಐಶ್ವರ್ಯಾ ರೈ ತುಂಬಾನೇ ಕಷ್ಟಪಟ್ಟಿದ್ದರು. ಅವರು ಕಡಿಮೆ ಸಂಭಾವನೆ ಪಡೆಯುತ್ತಿದ್ದರು. 1992ರಲ್ಲಿ ಐಶ್ವರ್ಯಾ ಅವರು ಪಡೆದ ಸಂಭಾವನೆಯ ವಿಚಾರ ಇತ್ತೀಚೆಗೆ ಸುದ್ದಿ ಆಗಿತ್ತು. ಫೋಟೋಶೂಟ್​ಗಾಗಿ ಐಶ್ವರ್ಯಾ ರೈ ಅವರು ಕೇವಲ 1500 ರೂಪಾಯಿ ಪಡೆದಿದ್ದರು. ಇತ್ತೀಚೆಗೆ ಫ್ರಾನ್ಸ್​ನಲ್ಲಿ ‘ಕಾನ್ ಸಿನಿಮೋತ್ಸವ’ ನಡೆದಿತ್ತು. ಈ ಫಿಲ್ಮ್​ ಫೆಸ್ಟಿವಲ್​ನಲ್ಲಿ ನಟಿ ಐಶ್ವರ್ಯಾ ರೈ ಕೂಡ ಭಾಗಿ ಆಗಿದ್ದರು. ಅವರು ಕೆಂಪು ಹಾಸಿನ ಮೇಲೆ ಹೆಜ್ಜೆ ಹಾಕಿದ್ದರು. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

TV9 Kannada


Leave a Reply

Your email address will not be published. Required fields are marked *