ಯಾದಗಿರಿ: ಮನೆಯೊಳಗೆ ನುಗ್ಗುತ್ತಿದ್ದ ಹಾವನ್ನು ಹಿಡಿಯಲು ಹೋಗಿ ಕಚ್ಚಿಸಿಕೊಂಡು ವೃದ್ಧನೊಬ್ಬ ಸಾವನ್ನಪ್ಪಿದ ಘಟನೆ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗೋಡಿಹಾಳ ಗ್ರಾಮದಲ್ಲಿ ನಡೆದಿದೆ.
ಬಸವರಾಜ್ ಪೂಜಾರ್ ಹಾವಿನಿಂದ ಕಚ್ಚಿಸಿಕೊಂಡು ಸಾವನ್ನಪ್ಪಿದ ವೃದ್ಧ. ಹಾವು ಕಚ್ಚುತ್ತಿದ್ದರೂ ಕೈಯಲ್ಲಿ ಹಾವನ್ನು ಹಿಡಿದುಕೊಂಡೆ ಸಾವನ್ನಪ್ಪಿದ್ದಾನೆ. ಈ ಹಿಂದೆ ಹಾವುಗಳು ಗ್ರಾಮದಲ್ಲಿ ಕಾಣಿಸಿಕೊಂಡಾಗ ಅವುಗಳನ್ನ ಹಿಡಿದು ದೂರ ಬಿಟ್ಟು ಬರುತ್ತಿದ್ದರು. ಈ ಬಾರಿ ಹಾವು ಹಿಡಿದಾಗ 5ಕ್ಕೂ ಹೆಚ್ಚು ಬಾರಿ ಹಾವು ಕಚ್ಚಿದೆ. ಇವರೆಗೆ ಗ್ರಾಮದಲ್ಲಿ 300 ಕ್ಕೂ ಹೆಚ್ಚು ಹಾವುಗಳನ್ನ ಹಿಡಿದು ಬಿಟ್ಟು ಬಂದಿದ್ದರು.
ಹಾವಿನ ಗಾತ್ರ ದೊಡ್ಡದಿರುವ ಕಾರಣ ಹಿಡಿತ ತಪ್ಪಿ ಹಾವಿನಿಂದ ಕಚ್ಚಿಸಿಕೊಂಡಿದ್ದಾನೆ. ಕೊನೆಗೆ ತಾನು ಸಾವನ್ನಪ್ಪಿದ ಬಳಿಕ ಹಾವನ್ನ ಕೈಯಿಂದ ಬಿಟ್ಟಿದ್ದಾನೆ. ವಡಗೇರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.