ಬೆಂಗಳೂರು: ಆನ್​ಲೈನ್​ನಲ್ಲಿ ಈಗ ಜನರು ಡಿಫರೆಂಟ್ ಆಗಿ ಮೋಸ ಹೋಗ್ತಿದ್ದಾರೆ. ಮೋಸ ಮಾಡುವವರೂ ಸಹ ಹೊಸ ಹೊಸ ಮಾರ್ಗಗಳನ್ನ ಹುಡುಕಿ ಜನರಿಗೆ ಉಂಡೇನಾಮ ಬಳಿಯುತ್ತಿದ್ದಾರೆ. ತಾಜಾ ಉದಾಹರಣೆ ಎಂಬಂತೆ ನಗರದಲ್ಲಿ ಮಹಿಳೆಯೊಬ್ಬಳು ಬರೋಬ್ಬರಿ 36 ಸಾವಿರ ಕಳೆದುಕೊಂಡಿದ್ದಾರೆ.

ಸ್ನೇಹಿತಯನ್ನೇ ನಂಬಿ ಮೋಸ ಹೋದ ಮಹಿಳೆ..
ಕೊರೊನಾ ಲಾಕ್​ಡೌನ್​ ಇದ್ದಿದ್ರಿಂದ ಆನ್​ಲೈನ್​ ಕೆಲಸ ಮಾಡೋಣ ಅಂದುಕೊಂಡಿದ್ದ ಮಹಿಳೆಯೋರ್ವರಿಗೆ ಆಕೆಯ ಸ್ನೇಹಿತೆ ಲಿಂಕ್ ಒಂದನ್ನ ಕಳುಹಿಸಿದ್ದಾರೆ. ಇದರಿಂದ ಆನ್​ಲೈನ್​ನಲ್ಲಿ ಹಣ ಮಾಡಬಹುದು ಅಂತ ಹೇಳಿದ್ದಾರೆ. ಲಿಂಕ್ ಓಪನ್ ಮಾಡಿದ ಮಹಿಳೆಗೆ ನೀವು 3 ಸಾವಿರ ಹಣ ಡೆಪಾಸಿಟ್ ಮಾಡಿ, ನಿಮಗೆ 30 ವಿಡಿಯೋಗಳನ್ನ ಕಳುಹಿಸುತ್ತೇವೆ. ಅದನ್ನ ನೀವು ಪೂರ್ತಿ ನೋಡಬೇಕು. ನೋಡಿದ ಮೇಲೆ ನಿಮಗೆ ಡಬಲ್ ಹಣ ಕೊಡ್ತೇವೆ ಅಂತ ಏಜೆಂಟ್​ಗಳು ನಂಬಿಸಿದ್ದಾರೆ.

ಇದನ್ನ ನಂಬಿದ ಮಹಿಳೆ 3 ಸಾವಿರ ಹಣ ಡೆಪಾಸಿಟ್ ಮಾಡಿ 30 ವೀಡಿಯೋ ನೋಡಿದ್ದಕ್ಕೆ ಸಾಕ್ಷಿಯಾಗಿ ಸ್ಕ್ರೀನ್ ಶಾಟ್ ಕಳುಹಿಸಿದ್ದಾರೆ. ಏಜೆಂಟ್​​ಗಳು ಮತ್ತೆ 30 ವಿಡಿಯೋ ಹಾಕಿ 3 ಸಾವಿರ ಡೆಪಾಸಿಟ್ ಮಾಡಲು ಹೇಳಿದ್ದಾರೆ. ಹೀಗೆ ಹಂತಹಂತವಾಗಿ ಮಹಿಳೆ 36 ಸಾವಿರ ಹಣ ಡೆಪಾಸಿಟ್​ ಮಾಡಿದ್ದು ನಯಾಪೈಸೆಯೂ ವಾಪಸ್ ಬಂದಿಲ್ಲ.

ಈ ಮಧ್ಯೆ ಮಹಿಳೆ ಸ್ನೇಹಿತೆಗೆ ವಿಷಯ ತಿಳಿಸಿದ್ದಾರೆ.. ಈ ವೇಳೆ ಆಕೆಯ ಸ್ನೇಹಿತೆಯೂ ಸಹ ತಾನೂ ಮೋಸ ಹೋಗಿರುವುದಾಗಿ ಹೇಳಿದ್ದಾರೆ. ಈ ವೇಳೆ ಏಜೆಂಟ್​ಗಳು ವಾಟ್ಸಾಪ್​ ಗ್ರೂಪ್​ಗಳನ್ನ ಮಾಡಿ ಅನೇಕರಿಗೆ ಮೋಸ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಸದ್ಯ ಈ ಏಜೆಂಟ್​ಗಳ ವಿರುದ್ಧ ಸೈಬರ್​ ಠಾಣೆಗೆ ದೂರು ನೀಡಿದ್ದಾರೆ.

ಇನ್ನು ನ್ಯೂಸ್ ಫಸ್ಟ್​ಗೆ ದೂರುದಾರೆ ಹೇಳಿಕೆ ನೀಡಿದ್ದು.. ಟಿಟಿ ಆ್ಯಪ್ ಅದು ಪ್ಲೇ ಸ್ಟೋರ್ ನಲ್ಲಿ ಸಿಗುವುದಿಲ್ಲ.. ಫಾರಿನ್ ಬೇಸ್ಡ್​ನವರು ಇದನ್ನ ಶುರು ಮಾಡಿದ್ದಾರೆ.. ಒಂದು ವಾಟ್ಸ್ಯಾಪ್ ಗ್ರೂಪ್ ಕೂಡ ರೆಡಿ ಮಾಡಿದ್ದಾರೆ.. ಅವರು ಕಳಿಸುವ ಲಿಂಕ್ ಮಾತ್ರ ಓಪನ್‌ಆಗುತ್ತೆ.. ಆ ಲಿಂಕ್ ಮೂಲಕವೇ ಆ್ಯಪ್ ಹಾಕಿಕೊಳ್ಳಬೇಕು.. ಇದೊಂದು ರೀತಿ ಸ್ಕೀಮ್ ಟೈಪ್ ಬ್ಯುಸಿನೆಸ್ ಎಂದಿದ್ದಾರೆ.

ನನ್ನ ಪತಿ ಹಾಗೂ ತಮ್ಮನ ಮೂಲಕ ಸಹ ಹಣ ಹಾಕಿಸಿದೆ..
ಅಲ್ಲದೇ ಮೊದಲು 500 ರೂಪಾಯಿಯಿಂದ ಶುರುವಾಗುತ್ತೆ.. 500 ರೂಪಾಯಿಯಿಂದ ಶುರುವಾಗಿ 5-10 ವಿಡಿಯೋ ಕಳಿಸುತ್ತಾರೆ. ಒಂದು ವಿಡಿಯೋಗೆ 5 ರೂಪಾಯಿ ಹಣ ನೀಡುತ್ತಾರೆ.. ಮೊದಲು ಹಣ ಕೊಟ್ಟು ಯಾಮಾರಿಸುತ್ತಾರೆ.. ನಂತರ 3 ಸಾವಿರ ಹಣ ಡೆಪಾಸಿಟ್ ಮಾಡಿ ಅಂತ ಹೇಳುತ್ತಾರೆ.. ಹಣ ಬಂತು ಎನ್ನುವ ನಂಬಿಕೆಯಲ್ಲಿ ಕೊಟ್ಟುಬಿಟ್ಟೆ.. ಅಲ್ಲದೆ ನನ್ನ ಪತಿ ಹಾಗೂ ತಮ್ಮನ ಮೂಲಕ ಸಹ ಹಣ ಹಾಕಿಸಿದೆ. ಇದುವರೆಗೂ ಯಾವುದೇ ಹಣ ಬಂದಿಲ್ಲ.. ಹೀಗಾಗಿ ದೂರು ನೀಡಿದ್ದೇನೆ ಎಂದಿದ್ದಾರೆ.

The post 3,000 ಡೆಪಾಸಿಟ್ ಮಾಡಿ 30 ವಿಡಿಯೋ ನೋಡಿದ್ರೆ ಡಬಲ್ ಹಣ ಕೊಡ್ತೀವಿ ಅಂದವ್ರು ಉಂಡೇನಾಮ ಬಳಿದ್ರು appeared first on News First Kannada.

Source: newsfirstlive.com

Source link