34 ವರ್ಷಗಳಿಂದ ನೌಟಂಕಿ ಆಟ.. ಕೊನೆಗೂ ದರೋಡೆಕೋರ ಅರೆಸ್ಟ್..!


ಕೊಪ್ಪಳ: 34 ವರ್ಷದಿಂದ ತಲೆ‌ಮರೆಸಿಕೊಂಡಿದ್ದ ಆರೋಪಿ ಬಂಧಿಸುವಲ್ಲಿ ವಿಜಯನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕು ಬಿತ್ಯಾನ ತಾಂಡಾದಲ್ಲಿ ಆರೋಪಿಯನ್ನ ಬಂಧಿಸಲಾಗಿದೆ.

1987ರ ಸೆಪ್ಟೆಂಬರ್ 19 ರಂದು ಕೊಪ್ಪಳ ಜಿಲ್ಲೆಯ ಅಳವಂಡಿ ಗ್ರಾಮದ ವೆಂಕಟರೆಡ್ಡಿ ಗೆದಿಗೆರಿ ಅವರ ಹೊಲದಲ್ಲಿಯೇ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಬಳಿಕ ದರೋಡೆ ಮಾಡಿಕೊಂಡು ಆರೋಪಿ ಪರಾರಿಯಾಗಿದ್ದರು.

ಬರೋಬ್ಬರಿ 34 ವರ್ಷಗಳಿಂದ ತಲೆ‌ಮರೆಸಿಕೊಂಡಿದ್ದ ಆರೋಪಿಯನ್ನು ವಿಜಯನಗರ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಆರೋಪಿಯನ್ನು ಪೊಲೀಸರು ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಬಿತ್ಯಾನ ತಾಂಡಾದಲ್ಲಿ ಬಂಧಿಸಲಾಗಿದೆ.

ಈ ಹಿಂದೆ ಘಟನೆಯ ಕುರಿತು ವೆಂಕಟರೆಡ್ಡಿ ಪೊಲೀಸರಿಗೆ ದೂರು ನೀಡಿದ್ದರು. ಆದರೆ ಆರೋಪಿ ತೆಲೆಮಾರಿಕೊಂಡಿದ್ದು, ವರ್ಷಗಟ್ಟಲೇ ಪೊಲೀಸರಿಗೆ ಸಿಕ್ಕಿರಲಿಲ್ಲ. ಇತ್ತೀಚೆಗೆ ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಂಗಕ್ಕೆ ಒಪ್ಪಿಸಿದ್ದಾರೆ.

News First Live Kannada


Leave a Reply

Your email address will not be published.