30 ವರ್ಷಗಳ ಪ್ರೀತಿ ಈಗ ಸಕ್ಸಸ್ ಆದ ಘಟನೆ ಮಂಡ್ಯದಲ್ಲಿ ನಡೆದಿದೆ. ಇಂಥದ್ದೊಂದು ಸಕ್ಸಸ್ ಲವ್ ಸ್ಟೋರಿಗೆ ಸಾಕ್ಷಿಯಾಗಿದ್ದು ಪಾಂಡವಪುರ ತಾಲೂಕಿನ ಮೇಲುಕೋಟೆ.
ಹೌದು, ಯತಿರಾಜದಾಸರ ಗುರುಪೀಠದಲ್ಲಿ 30 ವರ್ಷಗಳ ಹಳೇ ಪ್ರೇಮಿಗಳಾದ ಚಿಕ್ಕಣ್ಣ ಮತ್ತು ಜಯಮ್ಮ ಮದುವೆ ಆಗುವ ಮೂಲಕ ಈಗ ಒಂದಾಗಿದ್ದಾರೆ. ಚಿಕ್ಕಣ್ಣಗೆ 65 ವರ್ಷ, ಜಯಮ್ಮಗೆ 58.
ಇಳಿವಯಸ್ಸಿನ ಜೋಡಿ ಈಗ ಮದುವೆ ಆಗಿ ತಮ್ಮ ಅಪರೂಪದ ಪ್ರೀತಿಯನ್ನು ಸಕ್ಸಸ್ ಮಾಡಿದೆ. 35 ವರ್ಷ ತನ್ನ ಪ್ರೇಯಸಿಗಾಗಿ ಕಾದ ಚಿಕ್ಕಣ್ಣಗೆ ಕೊನೆಗೂ ಮದುವೆ ಆಗಿದೆ.
ಚಿಕ್ಕಣ್ಣ ಸದ್ಯ ಮೈಸೂರಿನಲ್ಲಿ ಕೂಲಿ ಮಾಡಿಕೊಂಡು ಬದುಕು ಸಾಗಿಸುತ್ತಿದ್ದಾರೆ. ತನ್ನ ಅತ್ತೆ ಮಗಳಾದ ಜಯಮ್ಮಳನ್ನು ಪ್ರೀತಿಸುತ್ತಿದ್ದ ಇವರು ಈಗ ಹಸೆಮಣೆ ಏರಿದ್ದಾರೆ.