36ನೇ ವಯಸ್ಸಿನಲ್ಲೂ ಎಂಥಾ ಫೀಲ್ಡಿಂಗ್! ಒನ್ ಹ್ಯಾಂಡೆಡ್ ಕ್ಯಾಚ್​ಗೆ ಇಡೀ ಲಾರ್ಡ್ಸ್‌ ಮೈದಾನವೇ ಸ್ಟನ್ | Ben Stokes Wont Stop Hugging Stuart Broad After He Takes One Handed Screamer In ENG vs SA 1st Test


ಬೌಲಿಂಗ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಬ್ರಾಡ್ ಲಾರ್ಡ್ಸ್‌ನಲ್ಲಿ 100 ಟೆಸ್ಟ್ ವಿಕೆಟ್‌ಗಳನ್ನು ಪಡೆದ ಸಾಧನೆ ಮಾಡಿದರು. ಜೊತೆಗೆ ಮೈದಾನವೊಂದರಲ್ಲಿ 100 ವಿಕೆಟ್ ಪಡೆದ ನಾಲ್ಕನೇ ಬೌಲರ್ ಎನಿಸಿಕೊಂಡರು.

ಲಾರ್ಡ್ಸ್‌ನ ಐತಿಹಾಸಿಕ ಮೈದಾನದಲ್ಲಿ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ (England and South Africa) ನಡುವೆ ಮೊದಲ ಟೆಸ್ಟ್ ಪಂದ್ಯ ನಡೆಯುತ್ತಿದೆ. ಮೊದಲ ಟೆಸ್ಟ್‌ನಲ್ಲಿ ಆತಿಥೇಯರ ಮೇಲೆ ದಕ್ಷಿಣ ಆಫ್ರಿಕಾ ಮೇಲುಗೈ ಸಾಧಿಸಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಅಬ್ಬರಿಸಿದ ದಕ್ಷಿಣ ಆಫ್ರಿಕಾ 161 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿತು. ಮೂರನೇ ದಿನದಂತ್ಯಕ್ಕೆ ಆಫ್ರಿಕಾ ತಂಡ 326 ರನ್‌ಗಳಿಗೆ ಆಲೌಟ್ ಆಗಿತ್ತು. ಆದಾಗ್ಯೂ, ಈ ಸಮಯದಲ್ಲಿ ಇಂಗ್ಲೆಂಡ್‌ನ ವೇಗದ ಬೌಲರ್ ಸ್ಟುವರ್ಟ್ ಬ್ರಾಡ್ (Stuart Broad) ಹಿಡಿದ ಅದ್ಭುತ ಕ್ಯಾಚ್​ನಿಂದ ಎಲ್ಲರನ್ನೂ ಬೆರಗುಗೊಳಿಸಿದ್ದಾರೆ.

ಅತ್ಯುತ್ತಮ ಕ್ಯಾಚ್ ಹಿಡಿದ ಬ್ರಾಡ್

ದಕ್ಷಿಣ ಆಫ್ರಿಕಾದ ಮೊದಲ ಇನ್ನಿಂಗ್ಸ್‌ನಲ್ಲಿ ಸ್ಟುವರ್ಟ್ ಬ್ರಾಡ್ ಅದ್ಭುತ ಕ್ಯಾಚ್ ಪಡೆಯುವ ಮೂಲಕ ಎಲ್ಲರ ಗಮನ ಸೆಳೆದರು. ಬ್ರಾಡ್ 78ನೇ ಓವರ್‌ನಲ್ಲಿ ರಬಾಡ ಅವರ ಅತ್ಯುತ್ತಮ ಕ್ಯಾಚ್ ಪಡೆದರು. ಮ್ಯಾಥ್ಯೂ ಪಾಟ್ಸ್ ಅವರ ಶಾರ್ಟ್ ಬಾಲ್​ಗೆ ರಬಾಡ ಪುಲ್ ಶಾಟ್ ಆಡಲು ಯತ್ನಿಸಿದರಾದರೂ ಚೆಂಡನ್ನು ಸರಿಯಾಗಿ ಟೈಂ ಮಾಡಲು ಸಾಧ್ಯವಾಗಲಿಲ್ಲ. ಚೆಂಡು ಗಾಳಿಯಲ್ಲಿ ಹೋಯಿತು, ವೈಡ್ ಲಾಂಗ್ ಆನ್‌ನಲ್ಲಿ ನಿಂತಿದ್ದ ಸ್ಟುವರ್ಟ್ ಬ್ರಾಡ್ ಗಾಳಿಯಲ್ಲಿ ಜಿಗಿದು ಒಂದು ಕೈಯಿಂದ ಅದ್ಭುತ ಕ್ಯಾಚ್ ಹಿಡಿದರು. ಕ್ಯಾಚ್ ತೆಗೆದುಕೊಳ್ಳುವಾಗ ಬ್ರಾಡ್ ಕೆಳಗೆ ಬಿದ್ದರೂ ಚೆಂಡನ್ನು ಮಾತ್ರ ತನ್ನ ಕೈಯಿಂದ ಬೀಳಲು ಬಿಡಲಿಲ್ಲ. 36ರ ಹರೆಯದ ಬ್ರಾಡ್ ಹಿಡಿದ ಈ ಕ್ಯಾಚ್ ನೋಡಿದವರೆಲ್ಲ ಬೆಚ್ಚಿಬಿದ್ದರು. ಕ್ಯಾಪ್ಟನ್ ಬೆನ್ ಸ್ಟೋಕ್ಸ್ ತುಂಬಾ ಖುಷಿಯಿಂದ ಬ್ರಾಡ್ ಅವರನ್ನು ಬಹಳ ಹೊತ್ತು ಅಪ್ಪಿಕೊಂಡರು.

ಅಂದಹಾಗೆ, ಬೌಲಿಂಗ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಬ್ರಾಡ್ ಲಾರ್ಡ್ಸ್‌ನಲ್ಲಿ 100 ಟೆಸ್ಟ್ ವಿಕೆಟ್‌ಗಳನ್ನು ಪಡೆದ ಸಾಧನೆ ಮಾಡಿದರು. ಜೊತೆಗೆ ಮೈದಾನವೊಂದರಲ್ಲಿ 100 ವಿಕೆಟ್ ಪಡೆದ ನಾಲ್ಕನೇ ಬೌಲರ್ ಎನಿಸಿಕೊಂಡರು. ಇದಕ್ಕೂ ಮುನ್ನ ಜೇಮ್ಸ್ ಆಂಡರ್ಸನ್ ಕೂಡ ಲಾರ್ಡ್ಸ್‌ನಲ್ಲಿ ಶತಕ ಬಾರಿಸಿದ್ದರು. ಮುರಳೀಧರನ್ ಗಾಲೆ ಮತ್ತು ಕ್ಯಾಂಡಿಯಲ್ಲಿ 100ಕ್ಕೂ ಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಎಸ್‌ಎಸ್‌ಸಿಯಲ್ಲಿ ಮುರಳೀಧರನ್ 166 ವಿಕೆಟ್ ಪಡೆದರೆ, ರಂಗನಾ ಹೆರಾತ್ ಕೂಡ ಗಾಲೆಯಲ್ಲಿ 102 ವಿಕೆಟ್ ಪಡೆದಿದ್ದಾರೆ.

ದಕ್ಷಿಣ ಆಫ್ರಿಕಾದ ಮುಂದೆ ಇಂಗ್ಲೆಂಡ್ ಸ್ಥಿತಿ ಹದಗೆಟ್ಟಿದೆ

ಬೌಲರ್‌ಗಳ ನಂತರ ದಕ್ಷಿಣ ಆಫ್ರಿಕಾದ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಇಂಗ್ಲೆಂಡ್ ಸ್ಥಿತಿಯನ್ನು ಹಾಳು ಮಾಡಿದರು. ಕೇಶವ್ ಮಹಾರಾಜ್ 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ 49 ಎಸೆತಗಳಲ್ಲಿ 41 ರನ್​ಗಳ ಇನ್ನಿಂಗ್ಸ್ ಆಡಿದರು. ಅದೇ ಸಮಯದಲ್ಲಿ, 10 ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿದ ಎನ್ರಿಕ್ ನಾರ್ಖಿಯಾ ಅಜೇಯ 28 ರನ್ ಗಳಿಸಿದರು, ಈ ಕಾರಣದಿಂದಾಗಿ ದಕ್ಷಿಣ ಆಫ್ರಿಕಾ ತಂಡವು 326 ರನ್ ಗಳಿಸಲು ಸಾಧ್ಯವಾಯಿತು.

ತಾಜಾ ಸುದ್ದಿ

TV9 Kannada


Leave a Reply

Your email address will not be published.