ಕ್ಯಾಪ್ಟನ್ಸಿ ಆಯ್ಕೆಗಾಗಿ ಬಿಗ್​ಬಾಸ್​ ನೀಡಿದ್ದ ಬದುಕಿದು ರೈಲುಬಂಡಿ ಆಟದಲ್ಲಿ ಸದಸ್ಯರಿಗೆ ಬಿಗ್​ ಬಾಸ್​ ಬೋಗಿಗಳನ್ನು ಬದಲಾಯಿಸಿಕೊಳ್ಳಲು ಟಾಸ್ಕ್​ ಒಂದನ್ನು ನೀಡಿದ್ದರು. ಇದರಲ್ಲಿ ನುಸುಳಿದ ಚೆಂಡು, ಆಟದಲ್ಲಿ ಭಾಗವಹಿಸುವ ಸದಸ್ಯರ ಕೈಗಳು ಹಾಗೂ ಕಾಲುಗಳಲ್ಲ ಕಟ್ಟಲಾಗಿರುತ್ತದೆ..ಅವರು ತಮ್ಮ ತಲೆಯ ಸಹಾಯದಿಂದ ಚೆಂಡನ್ನು ಮತ್ತೊಂದು ಭಾಗದಲ್ಲಿರುವ ಕೆಂಪು ಗೆರೆಯನ್ನು ದಾಟಸಿಬೇಕು.

ಜೊತೆಗೆ ಸ್ಪರ್ಧಿಗಳು ಕೂಡಾ ಸಂಪೂರ್ಣವಾಗಿ ದಾಟಬೇಕು.. ಹೀಗೆ ಯಾರು ಮೊದಲು ದಾಟುತ್ತಾರೋ ಅವರು ಮೊದಲ ಬೋಗಿಗೆ ಹೋಗುವ ಅವಕಾಶ ದೊರೆಯುತ್ತದೆ.. ಇನ್ನು ಈ ಟಾಸ್ಕ್​ ಅನ್ನು ಎರಡನೇ ಬೋಗಿಯಲ್ಲಿದ್ದವರು ಆಡಬೇಕು ಎಂದು ಬಿಗ್​ಬಾಸ್​ ತಿಳಿಸಿದಾಗ ಪ್ರಶಾಂತ್​ ಸಂಬರಗಿ, ಪ್ರಿಯಾಂಕಾ, ಹಾಗೂ ಅರವಿಂದ್​ ಪಾಲ್ಗೊಂಡರು..

ಹೀಗೆ ಆಟವೇನೋ ಆರಂಭವಾಯ್ತು.. ಮೂರು ಜನರು ಕೂಡಾ ತಮ್ಮ ಟ್ರ್ಯಾಕ್​ನಲ್ಲಿ ಹೋಗುತ್ತಿರುವಾಗ ಅರವಿಂದ್​ ಅವರ ಚಂಡು ಪ್ರಶಾಂತ್​ ಸಂಬರಿಗಿಯವರ ಟ್ರ್ಯಾಕ್​ಗೆ ಬಂತು.. ಆಗ ಅರವಿಂದ್​ ತಮ್ಮ ಬಾಲ್​ಅನ್ನು ತಮ್ಮ ಟ್ರ್ಯಾಕ್​ಗೆ ತರಲು ಪ್ರಯತ್ನಿಸಿದಾಗ ಪ್ರಿಯಾಂಕ ಅವರ ಚೆಂಡನ್ನು ಟ್ರ್ಯಾಕ್​ಯಿಂದ ಹೊರ ತಳ್ಳಿದ್ರು.. ಆಗ ಪ್ರಿಯಾಂಕ ಕೋಪಗೊಂಡು ನನ್ನ ಬಾಲ್​ ಬೇರೆಯವರು ತಳ್ಳಿದ್ರೆ ನಾನ್​ ಹೇಗೆ ಆಡೋದು ಅಂತಾ ಆಟವನ್ನು ಅರ್ಧದಲ್ಲಿ ನಿಲ್ಲಿಸಿದ್ರು.. ಕೊನೆಯಲ್ಲಿ ಆರವಿಂದ್​ ಟ್ರ್ಯಾಕ್​ನಿಂದ ಹೊರಗೆ ಆಟ ಮುಗಿಸಿದ್ರು.. ಆದ್ರೆ ಪ್ರಶಾಂತ್​ ಸಂಬರಗಿ ತಮ್ಮ ಟ್ರ್ಯಾಕ್​ನಲ್ಲಿ ಸರಿಯಾಗಿ ಹೋಗಿ ಆಟ ಮುಗಿಸಿದ್ರು.

ನಂತ್ರ ಮೊದಲ ಬೋಗಿಯಲ್ಲಿದ್ದ, ಲ್ಯಾಗ್​ಮಂಜು, ಚಕ್ರವರ್ತಿ ಚಂದ್ರಚೂಡ್​ ಹಾಗೂ ವೈಷ್ಣವಿ ಸೇರಿ, ಅರವಿಂದ್​ ಮೊದಲು ಸ್ಥಾನ, ಪ್ರಶಾಂತ್​ ಸೆಕೆಂಡ್​ ಹಾಗೂ ಪ್ರಿಯಾಂಕಾ ಮೂರನೇ ಸ್ಥಾನ ಎಂದು ರಿಸಲ್ಟ್​ ನೀಡಿದ್ರು.

ನೀವು ಸರಿಯಾದ ಡಿಸಿಷನ್​ ನೀಡಲಿಲ್ಲ

ಆದ್ರೆ ಪ್ರಿಯಾಂಕ, ಅರವಿಂದ್​ ಟ್ರ್ಯಾಕ್​ಯಿಂದ ಹೊರಗೆ ಆಟ ಮುಗಿಸಿದ್ದಾರೆ.. ಹಾಗೂ ನನ್ನ ಬಾಲ್​ ಅನ್ನು ಟ್ರ್ಯಾಕ್​ನಿಂದ ಹೊರ ಹಾಕಿದ್ದಾರೆ.. ನಾನು ನೀವು ನೀಡಿದ ಡಿಸಿಷನ್​ ಒಪ್ಪುವುದಿಲ್ಲ ಎಂದು ಹೇಳಿದ್ರು.. ಇದೇ ವಿಷಯದ ಕುರಿತು, ಪ್ರಿಯಾಂಕ ಲ್ಯಾಗ್​ ಮಂಜು ವೈಷ್ಣವಿ ಹಾಗೂ ಚಕ್ರವರ್ತಿ ನಡುವೆ ಚರ್ಚೆಗಳು ನೆಡೆದ್ವು.. ನೀವು ಸರಿಯಾದ ಡಿಸಿಷನ್​ ನೀಡಲಿಲ್ಲ ಎಂದು ಪ್ರಿಯಾಂಕ ವಾದಿಸಿದ್ರು.. ಆದ್ರೆ ಮೊದಲ ಬೋಗಿಯಲ್ಲಿದ್ದವರ ಡಿಸಿಷನ್ ಅನ್ನು ನೀವು ಗೌರವಿಸಬೇಕು ಹಾಗೂ ಕೇಳಬೇಕು ಎಂದು ಇನ್ನುಳಿದವರು ಹೇಳಿದ್ರು.
ಬಳಿಕ ಪ್ರಿಯಾಂಕ ನಾನು ಆಟ ಆಡೋದಿಲ್ಲ.. ಬಿಗ್​ಬಾಸ್ ಇದಕ್ಕೆ ಸರಿಯಾದ ಡಿಸಿಷನ್​ ನೀಡಬೇಕು ಅಂತ ಆಟದಿಂದ ಹೊರಗೆ ಉಳಿದ್ರು. ಸುಮಾರು ಸಮಯದ ಚರ್ಚೆಗಳ ನಂತರ ಪ್ರಿಯಾಂಕ ಈ ಮನೆಯಲ್ಲಿ ಯಾರೂ ಒಗ್ಗಟ್ಟಿಲ್ಲಿ ಅಂತಾ ಮೂರನೇ ಬೋಗಿಯಲ್ಲಿ ಹೋಗಿ ಕುಳಿತುಕೊಂಡ್ರು.

ಲ್ಯಾಗ್​ಮಂಜು, ಚಕ್ರವರ್ತಿ ಚಂದ್ರಚೂಡ್​ ಹಾಗೂ ಅರವಿಂದ್​ ಕ್ಯಾಪ್ಟನ್ಸಿ ಆಟಕ್ಕೆ ಆಯ್ಕೆ

ಈ ವಾರದ ಕ್ಯಾಪ್ಟನ್ಸಿ ಆಟಕ್ಕೆ ಮೊದಲ ಬೋಗಿಯಲ್ಲಿದ್ದ.. ಲ್ಯಾಗ್​ಮಂಜು, ಚಕ್ರವರ್ತಿ ಚಂದ್ರಚೂಡ್​ ಹಾಗೂ ಅರವಿಂದ್​ ಆಯ್ಕೆಯಾಗಿದ್ದಾರೆ. ಮೂರನೇ ಬೋಗಿಯಲ್ಲಿದ್ದ ದಿವ್ಯಾ ಸುರೇಶ್​ ಹಾಗೂ ಪ್ರಿಯಾಂಕಾ ಡೈರೆಕ್ಟ್​ ನಾಮಿನೇಟ್​ ಆಗಿದ್ದಾರೆ.

ಆಟವೆಲ್ಲಾ ಮುಗಿದ ಬಳಿಕಾ ಪ್ರಶಾಂತ್​ ಸಂಬರಗಿ ಚಂದ್ರಚೂಡ್​ ಬಳಿ ನೀವು ಡಿಸಿಷನ್​ ಸರಿಯಾಗಿ ತೆಗೆದುಕೊಳ್ಳಲಿಲ್ಲ. ನಿಮ್ಮ ಡಿಸಿಷನ್​ ಸರಿಯಿದ್ದಿದ್ದರೆ ನನಗೆ ಕ್ಯಾಪ್ಟನ್ಸಿ ಟಾಸ್ಕ್​ ಆಡುವ ಅವಕಾಶವಿತ್ತು. ಅರವಿಂದ್​ ಅವರು ಮುಖವನ್ನು ಬಳಸಿದ್ರು.. ಟ್ರಾಕ್​ನಿಂದ ಹೊರಗಿದ್ರು.. ಅವರನ್ನ ಮೊದಲು ಎಂದು ಅನೌನ್ಸ್​ ಮಾಡಿದ್ರಿ ಎಂದು ಹೇಳುತ್ತಾರೆ.. ಈ ಚರ್ಚೆಯ ಬಳಿಕ ಪ್ರಶಾಂತ್​ ಸಂಬರಗಿ ಒಂದು ಷಡ್ಯಂತ್ರ ರೂಪದಲ್ಲಿ ನನ್ನನ್ನು ಎರಡನೇ ಸ್ಥಾನದಲ್ಲಿ ನಿಲ್ಲಿಸಿ.. ಕ್ಯಾಪ್ಟನ್ಸಿ ಟಾಸ್ಕ್​ ಆಡುವ ಹಕ್ಕನ್ನ ಕಿತ್ತುಕೊಂಡಿದ್ದಾರೆ.. ಹಾಗಾಗಿ ನಾನು 36 ಗಂಟೆಗಳ ಕಾಲ ಉಪವಾಸ ಇರ್ತೀನಿ ಅಂತ ಬಿಗ್​ಬಾಸ್​​ ಬಳಿ ಹೇಳಿದ್ದಾರೆ.

The post 36 ಗಂಟೆಗಳ ಕಾಲ ಉಪವಾಸ.. ಬಿಗ್​​ಬಾಸ್​ ಮನೆಯಲ್ಲೇನು ಸಂಬರಗಿ ಸತ್ಯಾಗ್ರಹ..? appeared first on News First Kannada.

Source: newsfirstlive.com

Source link