ಹಿಂದೆಲ್ಲ ರಾಜರು ಡಜನ್‍ಗಟ್ಟಲೆ ಮದುವೆಯಾಗುತ್ತಿದ್ದರು ಎಂಬ ಕತೆಗಳನ್ನು ಓದಿದ್ದೇವೆ. ರಾಜ ಎಷ್ಟೇ ಮದುವೆಯಾದರೂ ಉಳಿದ ಪತ್ನಿಯರು ಅದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿರಲಿಲ್ಲ. ಇಂತಹದ್ದೆ ಒಂದು ಘಟನೆ ಇದೀಗ ಸುದ್ದಿಯಾಗಿದೆ.

21ನೇ ಶತಮಾನದಲ್ಲೂ ವ್ಯಕ್ತಿಯೊಬ್ಬ ಬರೋಬ್ಬರಿ 37 ಮದುವೆಯಾಗಿದ್ದಾನೆ. ಅದೂ, ಉಳಿದ  ಪತ್ನಿಯರ ಎದುರಿಗೇ 37ನೇ ಪತ್ನಿಯನ್ನು ವರಿಸಿದ್ದಾನೆ. ಮದುವೆಯಾಗುತ್ತಿರುವ ವೀಡಿಯೋ ವೈರಲ್ ಆಗಿದೆ. ಇದನ್ನೂ ಓದಿ: ತೆರಿಗೆ ಕಟ್ಟಲು ಆಗ್ತಿಲ್ಲ – ಅಳಲು ತೋಡಿಕೊಂಡ ಕಂಗನಾ

ಇದು ಅವರ 37ನೇ ಮದುವೆ ಎಂದು ಹೇಳಲಾಗಿದ್ದು, ಈ ವಿವಾಹಕ್ಕೆ ಅವರ ಉಳಿದ 28 ಪತ್ನಿಯರು, 35 ಮಕ್ಕಳು ಮತ್ತು 126 ಮರಿಮೊಮ್ಮಕ್ಕಳು ಸಾಕ್ಷಿಯಾಗಿದ್ದಾರೆ. ಈ ವೀಡಿಯೋ ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ.

ಐಪಿಎಸ್ ಅಧಿಕಾರಿ ರುಪಿನ್ ಶರ್ಮಾ ಎಂಬುವರು 45 ಸೆಕೆಂಡ್‍ಗಳ ವೀಡಿಯೋವನ್ನು ಪೋಸ್ಟ್ ಮಾಡಿದ್ದು, ಅತ್ಯಂತ ಧೈರ್ಯಶಾಲಿ ವ್ಯಕ್ತಿ ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. ಆದರೆ ಈ ವೀಡಿಯೋ ಎಲ್ಲಿ, ಯಾವಾಗ ಚಿತ್ರೀಕರಿಸಿದ್ದು ಎಂಬುದು ಗೊತ್ತಾಗಿಲ್ಲ. ಆದರೆ ನೆಟ್ಟಿಗರು ವಿವಿಧ ಕಾಮೆಂಟ್‍ಗಳನ್ನು ಹಾಕಿದ್ದಾರೆ.

ಈ ಹಿಂದೆ ತೈವಾನ್‍ನ ವ್ಯಕ್ತಿಯೊಬ್ಬ ಒಂದೇ ಮಹಿಳೆಯನ್ನು 37 ದಿನಗಳಲ್ಲಿ, ನಾಲ್ಕು ಬಾರಿ ಮದುವೆಯಾಗಿ, ಮೂರು ಬಾರಿ ವಿಚ್ಛೇದನ ನೀಡಿ ಸುದ್ದಿಯಾಗಿದ್ದರು.

The post 36 ಪತ್ನಿಯರ ಎದುರು 37ನೇ ಮದುವೆಯಾದ- ವೀಡಿಯೋ ವೈರಲ್ appeared first on Public TV.

Source: publictv.in

Source link