ಆ ವ್ಯಕ್ತಿಗೆ ಬರೋಬ್ಬರಿ 38 ಪತ್ನಿಯರಿದ್ದರು.. 89 ಮಕ್ಕಳನ್ನು ಹೊಂದಿದ್ದ ಆ ವ್ಯಕ್ತಿ ನೂರಾರು ಮೊಮ್ಮಕ್ಕಳನ್ನ ಹೊಂದಿದ್ದರು. ಹೀಗೆ ದೊಡ್ಡಮಟ್ಟದ ಕುಟುಂಬದ ಒಡೆಯ ಎನ್ನಿಸಿಕೊಂಡಿದ್ದ ಮಿಜೋರಾಂನ 76 ವರ್ಷದ ಜಿಯೋನ ಚಾನಾ ಹೆಸರಿನ ವ್ಯಕ್ತಿ ಇಂದು ಕೊನೆಯುಸಿರೆಳೆದಿದ್ದಾರೆ.

ಜಿಯೋನ ಚಾನಾ ಕುಟುಂಬವನ್ನ ಜಗತ್ತಿನಲ್ಲೇ ಅತಿದೊಡ್ಡ ಕುಟುಂಬ ಎನ್ನಿಸಿಕೊಂಡಿದೆ. ಅಲ್ಲದೇ ಜಿಯೋನ ಚಾನಾ ಸಾವಿಗೆ ಮಿಜೋರಾಂ ಮುಖ್ಯಮಂತ್ರಿಯೇ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. ಈ ಕುಟುಂಬದಿಂದಾಗಿಯೇ ಮಿಜೋರಾಂ ಮತ್ತು ಬಕ್ತಂವ್ಗ್ ತ್ಲಂಗ್ನುವಾಮ್ ಗ್ರಾಮ ಪ್ರವಾಸಿಗರ ಆಕರ್ಷಣೆಗೆ ಕಾರಣವಾಗಿತ್ತು ಎಂದು ಹೇಳಿದ್ದಾರೆ.

ಜಿಯೋನಚಾನಾ ಡಯಾಬಿಟೀಸ್ ಹಾಗೂ ರಕ್ತದೊತ್ತಡದಿಂದ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಜಿಯೋನಾ ಚಾನಾ 1945 ರಲ್ಲಿ ತನಗಿಂತಲೂ 3 ವರ್ಷ ಚಿಕ್ಕವಳಾದ ಪತ್ನಿಯನ್ನ ಮೊದಲಿಗೆ ವರಿಸಿದ್ರೆ 2005 ರಲ್ಲಿ ಕೊನೆಯ ಪತ್ನಿಯನ್ನ ವರಿಸಿದ್ದಾರೆ. ಇವರು ತಮ್ಮ ದೊಡ್ಡ ಕುಟುಂಬಕ್ಕಾಗಿ ನಾಲ್ಕು ಅಂತಸ್ತಿನ ಮನೆ ನಿರ್ಮಿಸಿ ಅದಕ್ಕೆ ನ್ಯೂ ಜನರೇಷನ್ ಹೋಮ್ ಎಂದು ಹೆಸರನ್ನೂ ಇಟ್ಟಿದ್ದರು. ಜಿಯೋನಾನ ಎಲ್ಲ ಪತ್ನಿಯರು, ಮಕ್ಕಳು ಒಟ್ಟಾಗಿಯೇ ಇದ್ದು ಅವರ ಹೆಣ್ಣುಮಕ್ಕಳು ಮಾತ್ರ ಮದುವೆಯಾಗಿ ಬೇರೆಡೆ ವಾಸವಾಗಿದ್ದರು ಎನ್ನಲಾಗಿದೆ. 2014 ರಲ್ಲಿ ಈ ಕುಟುಂಬ ಡಿಷ್​ವಾಷಿಂಗ್ ಬ್ರಾಂಡ್​ ಒಂದಕ್ಕೆ ಜಾಹೀರಾತನ್ನೂ ನೀಡಿತ್ತು.

The post 38 ಪತ್ನಿಯರು 89 ಮಕ್ಕಳನ್ನು ಅಗಲಿದ ಈತನದ್ದು ಜಗತ್ತಿನ ಅತಿದೊಡ್ಡ ಸಂಸಾರ appeared first on News First Kannada.

Source: newsfirstlive.com

Source link