380 ಪಂದ್ಯಗಳಲ್ಲಿ ಒಮ್ಮೆಯೂ ಎಲ್​ಬಿಡಬ್ಲ್ಯೂ ಔಟಾಗದೆ ಕ್ರಿಕೆಟ್​ಗೆ ವಿದಾಯ ಹೇಳಿದ ಆಸೀಸ್ ಕ್ರಿಕೆಟರ್..! | Australian cricketer Michael Hogan wraps up his career at 41

ಮೈಕೆಲ್ ಹೊಗನ್ 380 ವೃತ್ತಿಪರ ಪಂದ್ಯಗಳನ್ನು ಆಡಿದ್ದು, ಅವರ ಖಾತೆಯಲ್ಲಿ 930 ವಿಕೆಟ್‌ಗಳು ಸೇರಿವೆ. ತಮ್ಮ ವೃತ್ತಿಜೀವನದಲ್ಲಿ 4 ಅರ್ಧ ಶತಕಗಳನ್ನು ಬಾರಿಸಿರುವ ಹೂಗನ್, ತನ್ನ ಇಡೀ ವೃತ್ತಿಜೀವನದಲ್ಲಿ ಎಂದಿಗೂ ಎಲ್‌ಬಿಡಬ್ಲ್ಯೂ ಔಟಾಗಿಲ್ಲ.

Sep 29, 2022 | 9:04 PM

TV9kannada Web Team

| Edited By: pruthvi Shankar

Sep 29, 2022 | 9:04 PM

ಗ್ಲಾಮೊರ್ಗಾನ್ ತಂಡದ ವೇಗದ ಬೌಲರ್ ಮೈಕೆಲ್ ಹೊಗನ್ ವೃತ್ತಿಪರ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ನ್ಯೂ ಸೌತ್ ವೇಲ್ಸ್‌ನಲ್ಲಿ ಜನಿಸಿದ ಈ 41 ವರ್ಷದ ಆಟಗಾರ ತಮ್ಮ ವೃತ್ತಿಜೀವನವನ್ನು ಇಂಗ್ಲಿಷ್ ಕೌಂಟಿ ತಂಡ ಗ್ಲಾಮೊರ್ಗಾನ್‌ ಪರ ಹೆಚ್ಚಾಗಿ ಕಳೆದರು. ಈ ತಂಡದ ಪರ ಅನೇಕ ದಾಖಲೆಗಳನ್ನು ಮಾಡಿರುವ ಹೊಗನ್  ಒಮ್ಮೆಯೂ ಎಲ್‌ಬಿಡಬ್ಲ್ಯೂ ಔಟ್ ಆಗಿಲ್ಲ ಎಂಬುದು ಅಚ್ಚರಿಯ ಸಂಗತಿಯಾಗಿದೆ.

ಗ್ಲಾಮೊರ್ಗಾನ್ ತಂಡದ ವೇಗದ ಬೌಲರ್ ಮೈಕೆಲ್ ಹೊಗನ್ ವೃತ್ತಿಪರ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ನ್ಯೂ ಸೌತ್ ವೇಲ್ಸ್‌ನಲ್ಲಿ ಜನಿಸಿದ ಈ 41 ವರ್ಷದ ಆಟಗಾರ ತಮ್ಮ ವೃತ್ತಿಜೀವನವನ್ನು ಇಂಗ್ಲಿಷ್ ಕೌಂಟಿ ತಂಡ ಗ್ಲಾಮೊರ್ಗಾನ್‌ ಪರ ಹೆಚ್ಚಾಗಿ ಕಳೆದರು. ಈ ತಂಡದ ಪರ ಅನೇಕ ದಾಖಲೆಗಳನ್ನು ಮಾಡಿರುವ ಹೊಗನ್ ಒಮ್ಮೆಯೂ ಎಲ್‌ಬಿಡಬ್ಲ್ಯೂ ಔಟ್ ಆಗಿಲ್ಲ ಎಂಬುದು ಅಚ್ಚರಿಯ ಸಂಗತಿಯಾಗಿದೆ.

ಮೈಕೆಲ್ ಹೊಗನ್ 380 ವೃತ್ತಿಪರ ಪಂದ್ಯಗಳನ್ನು ಆಡಿದ್ದು, ಅವರ ಖಾತೆಯಲ್ಲಿ 930 ವಿಕೆಟ್‌ಗಳು ಸೇರಿವೆ. ತಮ್ಮ ವೃತ್ತಿಜೀವನದಲ್ಲಿ 4 ಅರ್ಧ ಶತಕಗಳನ್ನು ಬಾರಿಸಿರುವ ಹೂಗನ್, ತನ್ನ ಇಡೀ ವೃತ್ತಿಜೀವನದಲ್ಲಿ ಎಂದಿಗೂ ಎಲ್‌ಬಿಡಬ್ಲ್ಯೂ ಔಟಾಗಿಲ್ಲ.

ಮೈಕೆಲ್ ಹೊಗನ್ 380 ವೃತ್ತಿಪರ ಪಂದ್ಯಗಳನ್ನು ಆಡಿದ್ದು, ಅವರ ಖಾತೆಯಲ್ಲಿ 930 ವಿಕೆಟ್‌ಗಳು ಸೇರಿವೆ. ತಮ್ಮ ವೃತ್ತಿಜೀವನದಲ್ಲಿ 4 ಅರ್ಧ ಶತಕಗಳನ್ನು ಬಾರಿಸಿರುವ ಹೂಗನ್, ತನ್ನ ಇಡೀ ವೃತ್ತಿಜೀವನದಲ್ಲಿ ಎಂದಿಗೂ ಎಲ್‌ಬಿಡಬ್ಲ್ಯೂ ಔಟಾಗಿಲ್ಲ.

ಮೈಕೆಲ್ ಹೊಗನ್ 28 ನೇ ವಯಸ್ಸಿನಲ್ಲಿ ವೆಸ್ಟರ್ನ್ ಆಸ್ಟ್ರೇಲಿಯಾ ಪರ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದರು. ಕೊನೆಯದಾಗಿ 2016 ರಲ್ಲಿ ಆಸ್ಟ್ರೇಲಿಯಾ ಪರ ಆಡಿದ ಹೂಗನ್, ನಂತರ ಇಂಗ್ಲಿಷ್ ಕೌಂಟಿ ತಂಡ ಗ್ಲಾಮೊರ್ಗಾನ್‌ ಪರ ಆಡಲು ಆರಂಭಿಸಿದರು.

ಮೈಕೆಲ್ ಹೊಗನ್ ಎಲ್ಲಾ ಮೂರು ಸ್ವರೂಪಗಳಲ್ಲಿ ಅದ್ಭುತ ಆಟ ಪ್ರದರ್ಶಿಸಿದ್ದು, ಈ ಬಲಗೈ ವೇಗದ ಬೌಲರ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 679 ವಿಕೆಟ್‌ಗಳನ್ನು ಪಡೆದಿದ್ದಾರೆ. ಜೊತೆಗೆ ಲಿಸ್ಟ್ A ನಲ್ಲಿ 118 ವಿಕೆಟ್‌ಗಳನ್ನು ಪಡೆದಿದ್ದರೆ, T20 ನಲ್ಲಿ ಹೊಗನ್ 132 ವಿಕೆಟ್‌ಗಳನ್ನು ಪಡೆದ ದಾಖಲೆ ಮಾಡಿದ್ದಾರೆ.

ಕ್ರಿಕೆಟಿಗನಾಗುವ ಮೊದಲು, ಮೈಕೆಲ್ ಹೋಗನ್ ಟೆಲಿಫೋನ್ ಕೇಬಲ್ ಹಾಕುವ ಕೆಲಸ ಮಾಡುತ್ತಿದ್ದರು ಎಂಬುದನ್ನು ನಾವಿಲ್ಲಿ ಗಮನಿಸಬೇಕಿದೆ. ಆನಂತರ ತನ್ನ ಸಹೋದರನ ಮರಣದ ನಂತರ ಕ್ರಿಕೆಟ್​ ಅನ್ನು ಗಂಭೀರವಾಗಿ ತೆಗೆದುಕೊಂಡ ಹೊಗನ್ ಆ ಬಳಿಕ ತಮ್ಮ ವೃತ್ತಿಬದುಕನ್ನು ಇದರಲ್ಲೇ ಆರಂಭಿಸಿದರು.

Most Read StoriesTV9 Kannada

Leave a Reply

Your email address will not be published.