ನವದೆಹಲಿ: ಕೊರೊನಾ ವೈರಸ್​ ದೇಶದ ಆರ್ಥಿಕತೆ ಮೇಲೆ ಗಂಭೀರವಾದ ಪರಿಣಾಮ ಬೀರಿದೆ. 2020-21ರ ಜನವರಿಯಿಂದ ಮಾರ್ಚ್​​ ತಿಂಗಳ ವರೆಗಿನ ತ್ರೈಮಾಸಿಕ ಜಿಡಿಪಿ (ಒಟ್ಟು ದೇಶಿಯ ಉತ್ಪನ್ನ) ದರಕ್ಕೆ ಭಾರೀ ಹೊಡೆತ ಕೊಟ್ಟಿದೆ.

ದೇಶದ ಆರ್ಥಿಕತೆಯು ಶೇಕಡಾ ಮೈನಸ್​​ 7.3ಕ್ಕೆ ನಿಂತಿದ್ದು, 4 ದಶಕಗಳಲ್ಲಿಯೇ 2021ರ ಆರ್ಥಿಕ ವರ್ಷವು ಅತ್ಯಂತ ಕೆಟ್ಟ ಸ್ಥಿತಿಗೆ ತಲುಪಿದೆ ಎನ್ನಲಾಗಿದೆ. ಇನ್ನು ನಾಲ್ಕನೇ ತ್ರೈಮಾಸಿಕದಲ್ಲಿ ಜಿಡಿಪಿ ದರ ಶೇಕಡಾ 1.6 ರಷ್ಟು ಮಾತ್ರ ಏರಿಕೆ ಕಂಡಿದೆ. ಇದೇ 2019-20ರ ಅವಧಿಯಲ್ಲಿ ಜಿಡಿಪಿ ಬೆಳವಣಿಗೆ ಶೇಕಡ 4 ರಷ್ಟಿತ್ತು. ಇನ್ನು ಕೈಗಾರಿಕೆಗಳ ಬೆಳವಣಿಗೆ ಶೇಕಡ 3.1ರಷ್ಟು ಏರಿಕೆಯಾಗಿದೆ. ಅಂದರೆ  ಕಳೆದ ಏಪ್ರಿಲ್​​ನಲ್ಲಿ ದೇಶದ 8 ಕೋಟಿ ಸೆಕ್ಟರ್​​ಗಳಲ್ಲಿ ಉತ್ಪಾದನೆಯು ಶೇಕಡ 56.1ರಷ್ಟು ಏರಿಕೆಯಾಗಿದೆ. ಲಾಕ್​ಡೌನ್​ ಇದ್ದರೂ ಕೈಗಾರಿಕ ಉತ್ಪಾದನೆಯು ಹೆಚ್ಚಿದೆ.

ಇನ್ನು ಜಿಡಿಪಿ ಕುಸಿತಕ್ಕೆ ಕೊರೊನಾ ಸಾಂಕ್ರಾಮಿಕವೇ ಕಾರಣವಾಗಿದೆ ಅಂತಾ ಸೆಂಟ್ರಲ್ ಸ್ಟ್ಯಾಟಿಸ್ಟಿಕ್ಸ್​ ಆಫೀಸ್ (ಸಿಎಸ್​ಒ)​ ತಿಳಿಸಿದೆ. 2021ರ ಜನವರಿಯಿಂದ ನಿನ್ನೆ ಸಂಜೆವರೆಗಿನ ಬೆಳವಣಿಗೆ ಜಿಡಿಪಿ ದರವನ್ನ ಬಿಡುಗಡೆ ಮಾಡಿದೆ.

ಕೊರೊನಾ ಸೋಂಕು ನಿಯಂತ್ರಣಕ್ಕೆ ತರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್​ಡೌನ್ ವಿಧಿಸಲಾಗಿದೆ. ಹೀಗಾಗಿ 2021ರ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಜಿಡಿಪಿ ದರ ಸಂಕುಚಿತಗೊಂಡಿದೆ. ಕಳೆದ ಅಕ್ಟೋಬರ್, ಡಿಸೆಂಬರ್​​ ತ್ರೈಮಾಸಿಕದಲ್ಲಿ ಶೇಕಡ 0.4 ರಷ್ಟು ಬೆಳವಣಿಗೆಯೊಂದಿಗೆ ಸಕರಾತ್ಮಕ ಮುನ್ಸೂಚನೆ ಸಿಕ್ಕಿತ್ತು.

ಇನ್ನು ಷೇರು ಮಾರುಕಟ್ಟೆಯಲ್ಲಿ ಸೂಚ್ಯಾಂಕ ಏರುತ್ತಲೇ ಇದೆ. ಸೆನ್ಸೆಕ್ಸ್​ ಮತ್ತು ನಿಫ್ಟಿಯಲ್ಲಿ ನಿರಂತರ ಏರಿಕೆಯಾಗುತ್ತಿದೆ. ದೊಡ್ಡ ಮಟ್ಟದಲ್ಲಿ ಜನರು ಹೂಡಿಕೆ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಆರ್​ಬಿಐ ಗವರ್ನರ್​ ಶಕ್ತಿಕಾಂತ್ ದಾಸ್ ಎಚ್ಚರಿಕೆಯನ್ನ ನೀಡಿದ್ದಾರೆ. ಸ್ಟಾಕ್ ಮಾರ್ಕೆಟ್ ಬಬಲ್ ಕ್ರಿಯೇಟ್ ಆಗ್ತಿದೆ. ಎಚ್ಚರಿಕೆಯಿಂದ ಹೂಡಿಕೆ ಮಾಡಿ ಅಂತ ಗವರ್ನರ್ ಸೂಚನೆ ನೀಡಿದ್ದಾರೆ.

ಯಾಕಂದ್ರೆ ಈ ಎಲ್ಲಾ ಹೂಡಿಕೆ ಸೇಫ್​ ಆಗಿದ್ರೆ, ಹೂಡಿಕೆ ಮಾಡಿರುವ ಹಣ ಸುರಕ್ಷಿತವಾಗಿರುತ್ತದೆ. ಇಲ್ಲ ಅಂದ್ರೆ ಭಾರೀ ನಷ್ಟವಾಗುವ ಸಾಧ್ಯತೆ ಇದೆ. ಆದರೆ ಇಂದಿನ ಜಿಡಿಪಿ ಬೆಳವಣಿಗೆ ಕೊಂಚ ಸುಧಾರಿಸಿದ್ದರೂ ಅಶಾದಾಯಕವಾಗಿಲ್ಲ ಅನ್ನೋ ವಿಶ್ಲೇಷಣೆಗಳು ಇವೆ.

The post 4ನೇ ತ್ರೈಮಾಸಿಕ ಜಿಡಿಪಿ ದರ ಶೇ 1.6ರಷ್ಟು ಏರಿಕೆ, ಶೇ -7.3ಕ್ಕೆ ನಿಂತ ದೇಶದ ವಾರ್ಷಿಕ ಆರ್ಥಿಕ ಪ್ರಗತಿ appeared first on News First Kannada.

Source: newsfirstlive.com

Source link