ಬೆಂಗಳೂರು: ರೌಡಿಗಳಿಗೆ ಪಿಸ್ತೂಲ್ ಸಪ್ಲೆ ಮಾಡ್ತಿದ್ದ ಮೂವರು ಆರೋಪಿಗಳನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕಾಡುಬೀಸನಹಳ್ಳಿ ಸೋಮನ ಕೊಲೆ ಸ್ಕೆಚ್​ಗೆ ಗನ್ ಸಪ್ಲೈ ಮಾಡಿದ್ದ ಎನ್ನಲಾಗಿರುವ ಪ್ರಮುಖ ಆರೋಪಿ ಕಲಬುರಗಿ ಸತೀಶ್ ಸೇರಿ ಮೂವರು ಆರೋಪಿಗಳನ್ನ ಅಂದರ್ ಆಗಿದ್ದಾರೆ.

ಗನ್ ಸಪ್ಲೈಯರ್ ಸತೀಶ್ ಮೂಲತಃ ಕಲಬುರಗಿಯವ. ನಾಲ್ಕು ಕೊಲೆ ಕೇಸ್ ಸೇರಿ 30ಕ್ಕೂ ಹೆಚ್ಚು ವಿವಿಧ ಅಪರಾಧ ಮಾಡಿರುವ ಆರೋಪ ಈತನ ಮೇಲಿದೆ. ಉತ್ತರ ಪ್ರದೇಶ, ಬಿಹಾರ್ ಹಾಗೂ ಮಧ್ಯಪ್ರದೇಶದಿಂದ 15 ರಿಂದ 20 ಸಾವಿರಕ್ಕೆ ಕಂಟ್ರಿಮೇಡ್ ಪಿಸ್ತೂಲ್ ಖರೀದಿ ಮಾಡ್ತಿದ್ದ. ಅದನ್ನ ಬೆಂಗಳೂರಿನ ರೌಡಿಗಳಿಗೆ 80 ಸಾವಿರದಿಂದ 1 ಲಕ್ಷ ರೂಪಾಯಿಗೆ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.

ಎರಡು ತಿಂಗಳ ಹಿಂದೆ ಕಾಡುಬೀಸನಹಳ್ಳಿ ಸೋಮನ ಹತ್ಯೆಗೆ ಸ್ಕೆಚ್ ಹಾಕಲಾಗಿರುತ್ತದೆ. ಇದಕ್ಕಾಗಿ ರೋಹಿತ್ ಎಂಬಾತನಿಗೆ ಗನ್ ಸತೀಶ್ ಕಂಟ್ರಿಮೇಡ್ ಪಿಸ್ತೂಲ್ ನೀಡಿದ್ದ. ಬಳಿಕ ರೋಹಿತ್​ ಮಂಗಳೂರಿನಿಂದ ಕಿರಣ್ ಹಾಗೂ ವಿಶ್ವನಾಥ್ ಬಂಡರಿಯನ್ನ ಕರೆಸಿ ಸೋಮನ ಕೊಲೆ ಮಾಡುವಂತೆ ಹೇಳಿದ್ದ. ಇತ್ತ ಸೋಮನ ಹತ್ಯೆಗೆ ಸ್ಕೆಚ್ ಹಾಕಿರೋದು ತಿಳಿಯುತ್ತಿದ್ದಂತೆ ಆರೋಪಿಗಳನ್ನ ಸಿಸಿಬಿ ಪೊಲೀಸರು ಬಂಧಿಸಿದ್ದರು. ಬಂಧಿತ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಹೈದರಾಬಾದ್​​ನಲ್ಲಿ ಸತೀಶ್​​ನನ್ನ ಪೊಲೀಸರು ಬಂಧಿಸಿದ್ದಾರೆ.

The post 4 ಕೊಲೆ.. 30ಕ್ಕೂ ಹೆಚ್ಚು ಕ್ರಿಮಿನಲ್ ಕೇಸ್​.. ಆರೋಪಿ ಗನ್​ ಸತೀಶ್​ ಸಿಕ್ಕಿಬಿದ್ದಿದ್ದು ಹೇಗೆ..? appeared first on News First Kannada.

Source: newsfirstlive.com

Source link