ಉತ್ತರಾಖಂಡ್: ಉತ್ತರಾಖಂಡ್ ರಾಜಕಾರಣ ಹಲವು ತಿರುವುಗಳಿಗೆ ಸಾಕ್ಷಿಯಾಗುತ್ತಿದ್ದು ಇದೀಗ ಬಿಜೆಪಿ ಮುಖಂಡ ಪುಷ್ಕರ್ ಧಾನಿಯವರನ್ನ ಉತ್ತರಾಖಂಡ್ ನೂತನ ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ.

ಈ ಹಿಂದೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದ ತೀರಥ್ ಸಿಂಗ್ ರಾವತ್ 4 ತಿಂಗಳ ಅಂತರದಲ್ಲೇ ರಾಜೀನಾಮೆ ನೀಡಿದ ಹಿನ್ನೆಲೆ ಇದೀಗ ಪುಷ್ಕರ್ ಧಾನಿಯವರನ್ನ ನೂತನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ.

ತೀರಥ್ ಸಿಂಗ್ ಅವರಿಗೂ ಮುನ್ನ ತ್ರಿವೇಂದ್ರ ಸಿಂಗ್ ರಾವತ್ ಮುಖ್ಯಮಂತ್ರಿಯಾಗಿದ್ದರು.. ಬದಲಾದ ರಾಜಕೀಯ ಸನ್ನಿವೇಶದಲ್ಲಿ ತ್ರಿವೇಂದ್ರ ಸಿಂಗ್ ರಾವತ್ ಅವರನ್ನ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ತೀರಥ್ ಸಿಂಗ್ ಅವರಿಗೆ ಸಿಎಂ ಪಟ್ಟ ಕಟ್ಟಲಾಗಿತ್ತು. ಇನ್ನು ತೀರಥ್ ಸಿಂಗ್ ರಾವತ್ ಅವರ ರಾಜೀನಾಮಗೆ ಕುಂಭಮೇಳದ ಸಮಯದಲ್ಲಿ ಕೇಳಿಬಂದ ನಕಲಿ ಆರ್​ಟಿಪಿಸಿಆರ್ ಟೆಸ್ಟ್​ ಆರೋಪ ಕಾರಣ ಎಂದು ರಾಷ್ಟ್ರೀಯ ರಾಜಕಾರಣದಲ್ಲಿ ಚರ್ಚೆಗಳು ನಡೆಯುತ್ತಿವೆ.

The post 4 ತಿಂಗಳ ಅಂತರದಲ್ಲಿ 3 CM ಕಂಡ ಉತ್ತರಾಖಂಡ್​ -ನೂತನ ಮುಖ್ಯಮಂತ್ರಿ ಯಾರು ಗೊತ್ತಾ? appeared first on News First Kannada.

Source: newsfirstlive.com

Source link