4 ಸಾವಿರ ಕೋಟಿ ಸಾರಿಗೆ ಇಲಾಖೆಗೆ ನಷ್ಟ ಉಂಟಾಗಿದೆ: ಡಿಸಿಎಂ

ಬೆಳಗಾವಿ: ಕಳೆದ ಮಾರ್ಚ ನಿಂದ ಸುಮಾರ 4 ಸಾವಿರ ಕೋಟಿ ಸಾರಿಗೆ ಇಲಾಖೆಗೆ ನಷ್ಟ ಉಂಟಾಗಿದೆ. ಅದಕ್ಕೆ ಮುಖ್ಯ ಕಾರಣ, 20 ಜಿಲ್ಲೆಯಲ್ಲಿ ಅತೀವೃಷ್ಟಿ ಹಾಗೂ ಕೋವಿಡ್ ಪ್ರಕರಣಗಳು ಎಂದು ಸಾರಿಗೆ ಸಚಿವರು ಮತ್ತು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.

ಬೆಳಗಾವಿ ತಮ್ಮ ನಿವಾಸದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಸಾರಿಗೆ ಇಲಾಖೆಯ ಕಾರ್ಯಚರಣೆ ಕುಂಟಿತ ಆಗಿದೆ, ಅತಿವೃಷ್ಠಿ ಬಳಿಕ ಕೊರೊನಾ ಸಮಸ್ಯೆ, ಬಳಿಕ ಇಲಾಖೆ ಸಿಬ್ಬಂದಿ ಪ್ರತಿಭಟನೆ, ಬಳಿಕ ಮತ್ತೆ ಕೊರೊನಾ ಎರಡನೇ ಅಲೆ ಬಂದಿದ್ದರಿಂದ, ಸರ್ಕಾರದಲ್ಲಿ ಹೆಚ್ಚು ನಷ್ಟ ಸಾರಿಗೆ ಇಲಾಖೆಗೆ ಆಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ರೈತರಿಗೆ ಪರಿಹಾರ ನೀಡಿದ ನಂತರ ನಿವೇಶನ ಹಂಚಿಕೆ: ವಿಶ್ವನಾಥ್

ಸಾರಿಗೆ ಇಲಾಖೆಗೆ ನಷ್ಟ ಇದ್ದರು 2600 ಕೋಟಿ ಸಂಬಳ ಸಿಬ್ಬಂದಿಗೆ ನೀಡಲಾಗಿದೆ. 50 ಪ್ರತಿಶತ ಈಗ ಸಾರಿಗೆಯಲ್ಲಿ ಜನ ಪ್ರಯಾಣಿಸಲು ಅವಕಾಶ ಇರುವುದರಿಂದ ಬರುವ ಆದಯಾಕ್ಕೆ ಸಂಬಳ ಮತ್ತು ಇಂದನಕ್ಕೆ ಸಾಲುತ್ತಿಲ್ಲ. ಮೂರು ನಾಲ್ಕು ತಿಂಗಳು ಹೆಚ್ಚು ಜನರಿಗೆ ಪ್ರಯಾಣಕ್ಕೆ ಅವಕಾಶ ಇಲ್ಲ. ನಮ್ಮ ಸರ್ಕಾರಕ್ಕೆ ನಷ್ಟ ಆದರು ಜನರ ಆರೋಗ್ಯ ಮುಖ್ಯ ಎಂದು ತಿಳಿಸಿದರು.

ಜುಲೈ 5ರ ಬಳಿಕ ಸಾರಿಗೆ ಇಲಾಖೆಯ ಸಿಬ್ಬಂದಿಯಿಂದ ಮತ್ತೆ ಮುಷ್ಕರ ವಿಚಾರವಾಗಿ ಮಾತನಾಡಿದ ಅವರು, ಹಿಂದೆ ಸಾರಿಗೆ ಇಲಾಖೆ ಸಿಬ್ಬಂದಿಗೆ ಲೋಪ ಮಾಡೊರುವುದು ತಿಳಿದಿದೆ. ಅವರ ವಿರುದ್ಧ ಹುನ್ನಾರ ಮಾಡಿದ್ದು, ಅವರ ಹುನ್ನಾರಕ್ಕೆ ನಾವು ಒಳಗಾಗಾಗಿದ್ದೆವೆ ಎಂದು ಸಾರಿಗೆ ಸಿಬ್ಬಂದಿಗೆ ತಿಳಿದಿದೆ. ಸರ್ಕಾರದ ಎಳಿಗೆ ಸಹಿಸಲು ಆಗದ ಪಟ್ಟಭದ್ರ ಹಿತಾಸಕ್ತಿಗಳು ಹುನ್ನಾರ ಮಾಡಿದ್ದಾರೆ. ಹುನ್ನಾರ ಮಾಡಿದ್ದು, ಯಾರು ಎಂದು ನಾ ಹೇಳಲ್ಲ ಅದು ನಿಮಗೆ ಗೊತ್ತಾಗಲಿದೆ ಎಂದಿದ್ದಾರೆ.

ಈ ಕೊರೊನಾ ಅಲೆಗಳು ಸಾಕಷ್ಟು ಅನುಭವ ಕೊಟ್ಟಿದೆ. ವಿಷೇಶವಾಗಿ ಮಹಾರಾಷ್ಟ್ರದಲ್ಲಿ ಮತ್ತೆ ಕೊರೊನಾ ಹೊಸ ರೂಪ ಪಡೆದುಕೊಂಡಿದೆ. ಎರಡನೆಯ ಅಲೆಯಲ್ಲಿ ಬ್ಲ್ಯಾಕ್, ಯೆಲ್ಲೋ, ಗ್ರಿನ್ ಫಂಗಸ್ಸ್ ಸೇರಿದಂತೆ ಅನೇಕ ಪ್ರಕರಣಗಳು ಪತ್ತೆ ಆಗಿದ್ದವು. ಆದರೆ ಈಗ ಮಹಾರಾಷ್ಟ್ರದಲ್ಲಿ ಈಗ ಡೆಲ್ಟಾ ಫ್ಲಸ್ ಎಂಬ ರೂಪಾಂತರಿ ಕೊರೊನಾ ಪ್ರಕರಣ ಪತ್ತೆ ಆಗುತ್ತಿದೆ. ಅಂತರರಾಜ್ಯ ಸಾರಿಗೆ ಪ್ರಾರಂಭ ಮಾಡಿದ್ದೇವೆ. ಬೇರೆ ರಾಜ್ಯದಿಂದ ಕರ್ನಾಟಕಕ್ಕೆ ಬರುವವರು ಕೋವಿಡ್ ನೇಗೆಟಿವ್ ರೀಪೊರ್ಟ ಕಡ್ಡಾಯವಾಗಿ ಇರಬೇಕು ಎಂದು ಹೇಳಿದ್ದಾರೆ.

ಕೋವಿಡ್ ರೀಪೊರ್ಟ ಇದ್ರೆ ಮಾತ್ರ ಗಡಿ ಪ್ರವೇಶಕ್ಕೆ ಅವಕಾಶ ಇರುತ್ತದೆ. ಬೀದರ, ಗುಲ್ಬರ್ಗಾ ಬೆಳಗಾವಿ ಜಿಲ್ಲೆಗೆ ಮಹಾರಾಷ್ಟ್ರದ ಹೆಚ್ಚು ಸಂಪರ್ಕ ಇರುವುದರಿಂದ ಅಂತಹ ಗಡಿಗಳಲ್ಲಿ ನೇಗಟಿವ್ ರೀಪೊರ್ಟ ಕಡ್ಡಾವಾಗಿ ಪರಿಶೀಲನೆ ನಡೆಸಬೇಕು ಎಂದು ಡಿಸಿಗಳಿಗೆ ಸೂಚನೆ ನೀಡಿದ್ದೇವೆ. ಬೆಳಗಾವಿ ಜಿಲ್ಲೆಯ ಅಥಣಿ, ನಿಪ್ಪಾಣಿ, ಕಾಗವಾಡ ಗಡಿಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದೇವೆ. ಮೂರನೆ ಅಲೆಗೆ ಈಗಿನಿಂದಲೆ ಜಾಗೃತಿ ವಹಿಸುತ್ತಿದ್ದೇವೆ ಎಂದು ತಿಳಿಸಿದರು.

The post 4 ಸಾವಿರ ಕೋಟಿ ಸಾರಿಗೆ ಇಲಾಖೆಗೆ ನಷ್ಟ ಉಂಟಾಗಿದೆ: ಡಿಸಿಎಂ appeared first on Public TV.

Source: publictv.in

Source link