ವಿಜಯನಗರ: ಐತಿಹಾಸಿಕ ಹಂಪಿಯ ಬಡವಿಲಿಂಗ ದೇವಾಲಯದ ಅರ್ಚಕ ಕಾಸರವಳ್ಳಿ ಕೃಷ್ಣ ಭಟ್ (89) ವಯೋಸಹಜ ಕಾಯಿಲೆಯಿಂದಾಗಿ ವಿಧಿವಶರಾಗಿದ್ದಾರೆ.

ಕೃಷ್ಣ ಭಟ್ ಅವರು ಸತತ 40 ವರ್ಷಗಳ ಕಾಲ ಹಂಪಿಯಲ್ಲಿನ ಅತೀದೊಡ್ಡ ಬಡವಿಲಿಂಗ-ಏಕಶಿಲಾ ಶಿವಲಿಂಗಕ್ಕೆ ಸೇವೆ ಸಲ್ಲಿಸಿದ್ದಾರೆ. 1979 ರಿಂದಲೂ ಬಡವಿಲಿಂಗದ ಪೂಜೆ ಮಾಡುತ್ತಾ ಬಂದಿರುವ ಕೃಷ್ಣ ಭಟ್ ಅವರಿಗೆ ಶ್ರೀ ಕೃಷ್ಣದೇವರಾಯರ ತಂದೆ ಹಾಗೂ ಆನೆಗುಂದಿಯ ರಾಜ ಅಚ್ಯುತದೇವರಾಯರು ಆಗಲೇ ತಿಂಗಳ 300 ಮಾಶಾಸನ ನೀಡುತ್ತಿದ್ದರು ಎನ್ನಲಾಗಿದೆ.

ಶಿವನ ಆರಾಧಕರಾಗಿದ್ದ ಕೃಷ್ಣ ಭಟ್ ಪ್ರತಿನಿತ್ಯ ಲಿಂಗಕ್ಕೆ ಪೂಜೆ ಮಾಡುತ್ತಿದ್ದರು, ಮೂಲತಃ ತೀರ್ಥಹಳ್ಳಿ ತಾಲೂಕಿನ ಕಾಸವಳ್ಳಿಯವರಾದ ಇವರು ಹಂಪಿಯ ಶ್ರೀ ವಿರೂಪಾಕ್ಷ ದೇವಾಯಲದ ಸಹಾಯಕ ಅರ್ಚಕರಾಗಿ ಕೆಲಸ ಮಾಡಿದ್ದಾರೆ. ಕೃಷ್ಣ ಭಟ್ ಅವರ ಸಾವಿಗೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

The post 40 ವರ್ಷಗಳಿಂದ ಹಂಪಿಯ ಬಡವಿಲಿಂಗಕ್ಕೆ ಪೂಜಿಸುತ್ತಿದ್ದ ಕಾಸರವಳ್ಳಿ ಕೃಷ್ಣ ಭಟ್ ವಿಧಿವಶ appeared first on News First Kannada.

Source: News First Kannada
Read More