400 ಎಪಿಸೋಡ್​ ಕಂಪ್ಲೀಟ್​ ಮಾಡಿದ ಸಂಭ್ರಮದಲ್ಲಿ ನಾಗಿಣಿ-2

ಕಿರುತೆರೆಯಲ್ಲಿ ಅದೆಷ್ಟೇ ಧಾರಾವಾಹಿಗಳು ಬಂದ್ರೂ ಕೂಡ ರೋಚಕತೆ ಹುಟ್ಟಿಸುವ ಕಥೆಗಳಲ್ಲೊಂದು ನಾಗಿಣಿ. ಯಾವುದೇ ಭಾಷೆ, ಸಿನಿಮಾ, ಸೀರಿಯಲ್​ ಆದ್ರೂ ಅಲ್ಲಿ ನಾಗಿಣಿ ಇದಾಳೆ ಅಂದ್ರೆ ಅದ್ರ ಸಂಚಲನವೇ ಬೇರೆ.

ಇನ್ನು ನಾಗಿಣಿ ಸೀರಿಯಲ್​ಗೆ ಫಿದಾ ಅಗದವ್ರೇ ಇಲ್ಲ. ಅದೇ ಹಾದಿಯಲ್ಲಿ ಬಂದ ನಾಗಿಣಿ-2 ಕೂಡ ಅದೇ ಹವಾ ಕ್ರಿಯೇಟ್​ ಮಾಡಿದೆ. ಸದ್ಯ ನಾಗಿಣಿ ಟೀಮ್​ 400 ಎಪಿಸೋಡ್​ ಕಂಪ್ಲೀಟ್​ ಮಾಡಿರುವ ಸಂಭ್ರಮದಲ್ಲಿದೆ. ಇಡೀ ಕತೆ ಶಿವಾನಿ ಹಾಗೂ ತ್ರಿಶೂಲ್​ ಸುತ್ತ ಹೆಣೆಯಲಾಗಿದ್ದು, ಜನ್ಮ ಜನ್ಮಾಂತರದ ಬಂಧವನ್ನ ಬಿಚ್ಚಿಡುವ ಬ್ಯೂಟಿಫುಲ್​ ಲವ್​ ಸ್ಟೋರಿ ಇದೆ.

ಸದ್ಯ ಶಿವಾನಿಗೆ ತ್ರಿಶೂಲ್​ನೇ ಆದಿಶೇಶ ಅಂತ ಗೊತ್ತಾಗಿದ್ದು, ತ್ರಿಶೂಲ್​ಗೆ ಹಳೆಯ ನೆನಪುಗಳು ಮರುಕಳಿಸುತ್ತಿವೆ. ಆದರೆ ಶಿವಾನಿಯ ಪ್ರೀತಿ ಅರ್ಥ ಮಾಡಿಕೊಳ್ಳದ ತ್ರಿಶೂಲ್​ ತಾನು ನೋವುಂಡು ಶಿವಾನಿಗೂ ನೋವು ನೀಡುತ್ತಿದ್ದು, ಕತೆ ಸಖತ್​ ಇಂಟ್ರಸ್ಟಿಂಗ್​ ಆಗಿ ಸಾಗುತ್ತಿದೆ.

ಮೊನ್ನೆ ಮೊನ್ನೆಯಷ್ಟೇ ನಾಗಿಣಿ 2 ಬಗ್ಗೆ ಇಂಪಾರ್ಟೆಂಟ್​ ವಿಷ್ಯ ಹೇಳಿದ್ವಿ. ಅದೇನಂದ್ರೆ ಹಿಂದಿ ಭಾಷೆಗೆ ನಾಗಿಣಿ ಡಬ್ಬಿಂಗ್​ ಆಗುತ್ತಿದ್ದು, ​ ಟಿವಿಯಲ್ಲಿ ಪ್ರಸಾರವಾಗಲು ಸಜ್ಜಾಗಿದೆ. ಈ ಹೆಮ್ಮೆಯ ಜೊತೆ 400 ಎಪಿಸೋಡ್​ಗಳನ್ನ ಪೂರೈಸಿರುವ ಖುಷಿ ಮತ್ತೊಂದು ಕಡೆ. ಒಟ್ನಲ್ಲಿ ನಾಗಿಣಿ ಟೀಮ್​ ಡಬಲ್​ ಧಮಾಕಾದ ಸಂಭ್ರಮದಲ್ಲಿದ್ದು, ಹೀಗೆ ಸೀರಿಯಲ್​ ಯಶಸ್ವಿಯಾಗಿ ಸಾಗಲಿ. ನಮ್ಮ ಕಡೆಯಿಂದಲು ಆಲ್​ ದಿ ಬೆಸ್ಟ್​.

News First Live Kannada

Leave a comment

Your email address will not be published. Required fields are marked *