400 ವಿಕೆಟ್‌ ಕಿತ್ತು ಟಿ-20 ಕ್ರಿಕೆಟ್‌ನಲ್ಲಿ ದಾಖಲೆ ಬರೆದ ರಶೀದ್ ​ಖಾನ್​..!


ಟಿ-20 ವಿಶ್ವಕಪ್​​​ನಿಂದ ಆಫ್ಘಾನಿಸ್ತಾನ ಹೊರ ಬಿದ್ದಿದೆ. ಅದರ ನಡುವೆಯೇ ತಂಡದ ಸ್ಪಿನ್ನರ್​ ರಶೀದ್​​ ಖಾನ್ ದಾಖಲೆಯೊಂದನ್ನು ಬರೆದಿದ್ದಾರೆ. ರಶೀದ್ ಟಿ20 ಕ್ರಿಕೆಟ್​​​​​ನಲ್ಲಿ 400 ವಿಕೆಟ್‌ಗಳನ್ನ ಪೂರ್ಣಗೊಳಿಸಿದ್ದಾರೆ. ಅತಿ ವೇಗವಾಗಿ ಈ ದಾಖಲೆ ಬರೆದ ಮೊದಲ ಬೌಲರ್​​​ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಟಿ20 ಕ್ರಿಕೆಟ್​ನ ಎಲ್ಲಾ ಲೀಗ್​​​​​ಗಳಲ್ಲೂ ಇಷ್ಟು ವಿಕೆಟ್​​​​ ಕಬಳಿಸಿದ ಸಾಧನೆ ಮಾಡಿದ್ದಾರೆ. ಹಾಗೇ 400 ವಿಕೆಟ್​​​ಗಳ ಗಡಿ ದಾಡಿದ ವಿಶ್ವದ ನಾಲ್ಕನೇ ಬೌಲರ್​​ ಎಂಬ ದಾಖಲೆಗೂ ಪಾತ್ರರಾದ್ರು. ಟಿ20 ವಿಶ್ವಕಪ್​​​​ನಲ್ಲಿ ನ್ಯೂಜಿಲೆಂಡ್​ ವಿರುದ್ಧದ ಪಂದ್ಯದಲ್ಲಿ ಮಾರ್ಟಿನ್​ ಗಪ್ಟಿಲ್​ರನ್ನ ಔಟ್​ ಮಾಡ್ತಿದ್ದಂತೆ ರಶೀದ್​ ಈ ಸಾಧನೆ ಮಾಡಿದ್ರು.

400ಕ್ಕೂ ಹೆಚ್ಚು ವಿಕೆಟ್​ಗಳನ್ನ ಪಡೆದ ಪಟ್ಟಿಯಲ್ಲಿ ವಿಂಡೀಸ್​ನ ಡ್ವೇನ್​ ಬ್ರಾವೋ ಮೊದಲ ಸ್ಥಾನದಲ್ಲಿದ್ದಾರೆ. ಬ್ರಾವೋ 553 ವಿಕೆಟ್​ ಪಡೆದಿದ್ದಾರೆ. ಇನ್ನ ಎರಡನೇ ಸ್ಥಾನದಲ್ಲಿ ಸುನಿಲ್​ ನರೈನ್​ ಇದ್ದು, 425 ವಿಕೆಟ್​ ಕಬಳಿಸಿದ್ದಾರೆ. ಮೂರನೇ ಸ್ಥಾನದಲ್ಲಿ ಇಮ್ರಾನ್​ ತಾಹೀರ್​ ಇದ್ದು, 420 ವಿಕೆಟ್​ ಪಡೆದ ಸಾಧನೆ ಮಾಡಿದ್ದಾರೆ. ಇನ್ನು ರಶೀದ್​ ನಾಲ್ಕನೇ ಸ್ಥಾನದಲ್ಲಿದ್ರೆ, 5ನೇ ಸ್ಥಾನದಲ್ಲಿ 398 ವಿಕೆಟ್​ ಪಡೆದ ಶಕೀಬ್​ ಅಲ್​ ಹಸನ್ ಇದ್ದಾರೆ. ರಶೀದ್ ಖಾನ್ ಅವರ ಈ ಸಾಧನೆಗೆ ವಿಶ್ವದಾದ್ಯಂತ ಪ್ರಶಂಸೆ ವ್ಯಕ್ತವಾಗ್ತಿದೆ.

News First Live Kannada


Leave a Reply

Your email address will not be published.