405 players competing for 87 slots in ipl 2023 mini auction – 87 ಸ್ಲಾಟ್​ಗಳಿಗೆ 405 ಆಟಗಾರರ ಹರಾಜು; ಯಾವ ತಂಡಕ್ಕೆ ಎಷ್ಟು ಆಟಗಾರರು ಬೇಕು? ಇಲ್ಲಿದೆ ವಿವರ


IPL 2023 Mini Auction: ಮಿನಿ ಹರಾಜಿಗೆ ಆಯ್ಕೆಯಾದ 405 ಮಂದಿಯಲ್ಲಿ 273 ಮಂದಿ ಭಾರತೀಯ ಆಟಗಾರರಾಗಿದ್ದರೆ, 132 ಮಂದಿ ವಿದೇಶಿ ಆಟಗಾರರಾಗಿದ್ದಾರೆ.

87 ಸ್ಲಾಟ್​ಗಳಿಗೆ 405 ಆಟಗಾರರ ಹರಾಜು; ಯಾವ ತಂಡಕ್ಕೆ ಎಷ್ಟು ಆಟಗಾರರು ಬೇಕು? ಇಲ್ಲಿದೆ ವಿವರ

ಐಪಿಎಲ್ ಟ್ರೋಫಿ

ಐಪಿಎಲ್ ಮಿನಿ ಹರಾಜಿಗೆ ಇನ್ನ ಕೇವಲ ಒಂದು ದಿನ ಮಾತ್ರ ಉಳಿದಿದೆ. ಡಿಸೆಂಬರ್ 23ರಂದು ಮಧ್ಯಾಹ್ನ 2.30ರಿಂದ ಹರಾಜು ಪ್ರಕ್ರಿಯೆ ಆರಂಭವಾಗಲಿದೆ. ಈ ಬಾರಿ ಹರಾಜಿನಲ್ಲಿ 405 ಆಟಗಾರರು ಹರಾಜಾಗಲಿದ್ದು, ಈ ಪೈಕಿ ಗರಿಷ್ಠ 87 ಆಟಗಾರರು ಖರೀದಿದಾರರನ್ನು ಪಡೆಯಲಿದ್ದಾರೆ. ಈ ಬಾರಿ ವಿಶ್ವದಾದ್ಯಂತ 991 ಆಟಗಾರರು ಈ ಹರಾಜಿಗೆ ತಮ್ಮ ಹೆಸರನ್ನು ನೋಂದಣಿ ಮಾಡಿಕೊಂಡಿದ್ದರು. ಆದರೆ ಅಂತಿಮ ಪಟ್ಟಿಯಲ್ಲಿ 405 ಆಟಗಾರರು ಮಾತ್ರ ಸ್ಥಾನ ಪಡೆದಿದ್ದಾರೆ. ಮಿನಿ ಹರಾಜಿಗೆ ಆಯ್ಕೆಯಾದ 405 ಮಂದಿಯಲ್ಲಿ 273 ಮಂದಿ ಭಾರತೀಯ ಆಟಗಾರರಾಗಿದ್ದರೆ, 132 ಮಂದಿ ವಿದೇಶಿ ಆಟಗಾರರಾಗಿದ್ದಾರೆ. 132 ವಿದೇಶಿ ಆಟಗಾರರ ಪೈಕಿ 4 ಆಟಗಾರರು ಅಸೋಸಿಯೇಟ್ ನೇಷನ್‌ನವರು. ಒಟ್ಟು 119 ಕ್ಯಾಪ್ಡ್ ಅಂದರೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರರು ಮತ್ತು 282 ಅನ್ ಕ್ಯಾಪ್ಡ್ ಆಟಗಾರರಿದ್ದಾರೆ.

87 ಸ್ಲಾಟ್​ಗಳನ್ನು ತುಂಬಬೇಕಿದೆ

ಆರಂಭದಲ್ಲಿ, 10 ಫ್ರಾಂಚೈಸಿಗಳು 991 ಆಟಗಾರರ ಪೈಕಿ 369 ಆಟಗಾರರನ್ನು ಶಾರ್ಟ್‌ಲಿಸ್ಟ್ ಮಾಡಿದ್ದವು. ಆದರೆ ನಂತರ ತಂಡದ ಇಚ್ಛೆಯ ಮೇರೆಗೆ 36 ಆಟಗಾರರನ್ನು ಈ ಪಟ್ಟಿಗೆ ಸೇರಿಸಲಾಯಿತು. ಈ ಮೂಲಕ ಒಟ್ಟು 405 ಆಟಗಾರರು ಈ ಬಾರಿಯ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ 405 ಆಟಗಾರರಲ್ಲಿ ಖಾಲಿ ಇರುವ 87 ಸ್ಲಾಟ್​ಗಳನ್ನು ತುಂಬಬೇಕಿದೆ. ಹೀಗಾಗಿ ಯಾವ ತಂಡಕ್ಕೆ ಎಷ್ಟು ಆಟಗಾರರು ಬೇಕಾಗಿದ್ದಾರೆ. ಅವರ ಬಳಿ ಎಷ್ಟು ಹಣವಿದೆ ಎಂಬುದರ ವಿವರ ಇಲ್ಲಿದೆ.

IPL: ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್​ನ ಬ್ರಾಂಡ್ ಮೌಲ್ಯ ಎಷ್ಟು ಸಾವಿರ ಕೋಟಿ ಗೊತ್ತಾ? ಇಲ್ಲಿದೆ ವಿವರ

ಎಲ್ಲಾ ತಂಡಗಳ ವಿವರ ಇಲ್ಲಿದೆ

ಫ್ರಾಂಚೈಸಿ

ಬಾಕಿ ಉಳಿದಿರುವ ಹಣ ಖರೀದಿಸಬೇಕಾದ ಆಟಗಾರರ ಸಂಖ್ಯೆ ಖಾಲಿ ಇರುವ ವಿದೇಶಿ ಆಟಗಾರರ ಸ್ಲಾಟ್
ಚೆನ್ನೈ ಸೂಪರ್ ಕಿಂಗ್ಸ್ 20.45 ಕೋಟಿ. ರೂ 7

2

ದೆಹಲಿ ಕ್ಯಾಪಿಟಲ್ಸ್

19.45 ಕೋಟಿ. ರೂ 5 2
ಗುಜರಾತ್ ಟೈಟಾನ್ಸ್ 19.25 ಕೋಟಿ. ರೂ 7

3

ಕೋಲ್ಕತ್ತಾ ನೈಟ್ ರೈಡರ್ಸ್

7.05 ಕೋಟಿ. ರೂ 11 3
ಲಕ್ನೋ ಸೂಪರ್ ಜೈಂಟ್ಸ್ 23.35 ಕೋಟಿ. ರೂ 10

4

ಮುಂಬೈ ಇಂಡಿಯನ್ಸ್

20.55 ಕೋಟಿ. ರೂ 9 3
ಪಂಜಾಬ್ ಕಿಂಗ್ಸ್ 32.2 ಕೋಟಿ. ರೂ 9

3

ರಾಯಲ್ ಚಾಲೆಂಜರ್ಸ್ ಬೆಂಗಳೂರು

8.75 ಕೋಟಿ. ರೂ 7 2
ರಾಜಸ್ಥಾನ್ ರಾಯಲ್ಸ್ 13.2 ಕೋಟಿ. ರೂ 9

4

ಸನ್​ರೈಸರ್ಸ್​ ಹೈದರಾಬಾದ್

42.25 ಕೋಟಿ. ರೂ 13

4

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

TV9 Kannada


Leave a Reply

Your email address will not be published. Required fields are marked *