420, ಕಳ್ಳ ಯೋಗೇಶ್ವರ್‍ರನ್ನು ವಜಾ ಮಾಡಬೇಕು, ನಾಯಕತ್ವ ಬದಲಾವಣೆ ಸುಳ್ಳು: ರೇಣುಕಾಚಾರ್ಯ

ಬೆಂಗಳೂರು: ಸಚಿವ ಯೋಗೇಶ್ವರ್ 420, ಮೆಗಾ ಸಿಟಿ ಕಳ್ಳ, ಅವರ ರಾಜೀನಾಮೆ ಪಡೆದು, ವಜಾ ಮಾಡಬೇಕು ಎಂದು ರೇಣುಕಾಚಾರ್ಯ ಕಿಡಿಕಾರಿದ್ದಾರೆ.

ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ ರಾಜ್ಯದ ನಾಯಕರು, ಅಧ್ಯಕ್ಷರು ಆ ರೀತಿ ಇಲ್ಲ. ಕೊರೊನಾ ಸಂದರ್ಭದಲ್ಲಿ ಜನ ಸಾಯುತ್ತಿದ್ದಾರೆ. ಈ ಸಂದರ್ಭದಕಲ್ಲಿ ರಾಜಕೀಯ ಮಾತನಾಡಲು ನನಗೆ ನಾಚಿಕೆಯಾಗುತ್ತದೆ ಎಂದರು.

 

ಯಾರೀ 420 ಸಿ.ಪಿ. ಯೋಗೇಶ್ವರ್, ಯಾರೀ ಅವರು ಬಿಜೆಪಿಗೆ, ನಾವು ಮೂಲತಃ ಬಿಜೆಪಿಯವರು ಹೋರಾಟದಿಂದ ಬಂದಿದ್ದೇವೆ. ಇವರು ಕಾಂಗ್ರೆಸ್‍ನಿಂದ ಬಂದು ಅರಣ್ಯ ಸಚಿವರಾದರು, ಲೂಟಿ ಹೊಡೆದರು. ಅಲ್ಲದೆ ಸದಾನಂದಗೌಡರಿಗೂ ಮೋಸ ಮಾಡಿದರು. ಅವರು ಪಕ್ಷಾಂತರ, ಮೆಗಾ ಸಿಟಿ ದೊಡ್ಡ ಕಳ್ಳ. ಮುಖ್ಯಮಂತ್ರಿಗಳು ಅಂದೇ ಕಠಿಣ ನಿರ್ಧಾರ ತೆಗೆದುಕೊಂಡು ಅವನನ್ನು ಹೊರಗೆ ಹಾಕಬಹುಸದಿತ್ತು. ಈರೀತಿ ನಾಟಕ ಆಡುತ್ತಿದ್ದಾರೆ ಎಂದರೆ ಸಹಿಸಲು ಸಾಧ್ಯವಿಲ್ಲ ಎಂದು ಯೋಗೇಶ್ವರ್ ವಿರುದ್ಧ ಕಿಡಿಕಾರಿದರು.

ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಇವರ ರಾಜೀನಾಮೆ ಪಡೆದು, ವಜಾ ಮಾಡಬೇಕು. ನಾನು ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಂಬುಲೆನ್ಸ್, ಬೆಡ್, ಆಹಾರ ಸೇರಿದಂತೆ ವಿವಿಧ ಕೆಲಸಗಳನ್ನು ಮಾಡುತ್ತಿದ್ದೇನೆ, ಒಂದು ನಿಮಿಷ ಸಹ ಬಿಡುವಿಲ್ಲ ಎಂದರು.

 

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿ.ಎಲ್.ಸಂತೋಷ್, ಅರುಣ್ ಸಿಂಗ್ ಸೇರಿದಂತೆ ಬಹುತೇಕ ಬಿಜೆಪಿ ನಾಯಕರು ಮುಖ್ಯಮಂತ್ರಿಗಳನ್ನು ಒಳ್ಳೆಯ ಕೆಲಸ ಮಾಡುತ್ತಿದ್ದೀರಿ ಎಂದು ಹೊಗಳಿದ್ದಾರೆ. ಆದರೆ ಇದೀಗ ಇವರು ಪ್ರಹ್ಲಾದ್ ಜೋಷಿ ಹೆಸರು ಹೇಳಿಕೊಂಡು ವಿವಾದ ಸೃಷ್ಟಿಸುತ್ತಿದ್ದಾರೆ. ಪ್ರಹ್ಲಾದ್ ಜೋಷಿಯವರನ್ನು ನಾವೂ ಭೇಟಿ ಮಾಡಿದ್ದವು. ನಾನು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ 24ಗಂಟೆ ಕೆಲಸ ಮಾಡಿ, ರಾಜ್ಯಕ್ಕೆ ಸೇತುವೆಯಾಗಿ ಕೆಲಸ ಮಾಡುತ್ತಿದ್ದೇನೆ, ರಾಜ್ಯ ರಾಜಕಾರಣ ನನಗೆ ಭೇಡ ಎಂದು ಅವರು ನನ್ನ ಬಳಿ ಹೇಳಿದ್ದಾರೆ. ಇದೀಗ ಅವರ ಹೆಸರು ಹೇಳಿಕೊಂಡು ವಿವಾದ ಸೃಷ್ಟಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈಶ್ವರಪ್ಪ ತಮ್ಮ ಇಲಾಖೆ ಬಗ್ಗೆ ಮಾತ್ರ ಪತ್ರ ಬರೆದಿದ್ದರು. ನಾಯಕತ್ವ, ಸಂಘಟನೆ ಬಗ್ಗೆ ಅವರ ತಕರಾರಿಲ್ಲ. ಬಸನಗೌಡ ಪಾಟೀಲ್ ಬೇರೆ ಅವರ ಬಗ್ಗೆ ಮಾತನಾಡುವುದಿಲ್ಲ. ಆದರೆ ಯೋಗೇಶ್ವರ್ ಯಾರೀ 420, ಮೆಗಾ ಸಿಟಿ ಕಳ್ಳರನ್ನು ಮಂತ್ರಿ ಮಾಡಬೇಡಿ ಎಂದು ಹೇಳಿದ್ದೆವು. ಗೇಟ್ ಹತ್ತಿರ ಹೋಗಿ ಫೋಟೋ ತೆಗೆಸಿ, ವೀಡಿಯೋ ಮಾಡಿಕೊಂಡು ಬಿಡುತ್ತಿದ್ದಾರೆ. ಅವರು ಯಾವ ನಾಯಕರನ್ನೂ ಭೇಟಿ ಮಾಡಿರುವುದಿಲ್ಲ. ಅವರಿಗೆ ಯೋಗ್ಯತೆ ಇದೆ ಏನ್ರಿ, ಚೆನ್ನಪಟ್ಟಣ್ಣದಲ್ಲಿ ಸೋತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು. ನಾವು ದೆಹಲಿಗೆ ಹೋದಾಗ ಬಹುತೇಕ ನಾಯಕರನ್ನು ಭೇಟಿ ಮಾಡಿದ್ದೇವೆ. ನಾಯತ್ವ ಬದಲಾವಣೆ ಸುಳ್ಳು, ಸಾಧ್ಯವಿಲ್ಲ ಎಂದು ರೇಣುಕಾಚಾರ್ಯ ಹೇಳಿದರು.

 

ಕೋವಿಡ್ ವಿಚಾರದಲ್ಲಿ ಯಾವುದೇ ರಾಜಕೀಯ ಮಾಡಬಾರದು. ನನ್ನ ಕಣ್ಣೆದುರಿಗೇ ಹಲವು ಜನರು ಸಾವನ್ನಪ್ಪುತ್ತಿದ್ದಾರೆ. ಕಣ್ಣಲ್ಲಿ ನೀರು ಬರುತ್ತಿದೆ, ಕ್ಷೇತ್ರದ ಜನತೆಗೆ ವೆಂಟಿಲೇಟರ್, ಆಕ್ಸಿನ್ ಕೊರತೆಯನ್ನು ನೀಗಿಸುತ್ತಿದ್ದೇನೆ. ನಾನು ರಾತ್ರಿ 1 ಗಂಟೆಗೆ ಮಲಗಿ ಈಗ ತಿಂಡಿ ತಿಂದು ಮತ್ತೆ ಕೆಲಸಕ್ಕೆ ತೆರಳುತ್ತಿದ್ದೇನೆ ಎಂದರು.

The post 420, ಕಳ್ಳ ಯೋಗೇಶ್ವರ್‍ರನ್ನು ವಜಾ ಮಾಡಬೇಕು, ನಾಯಕತ್ವ ಬದಲಾವಣೆ ಸುಳ್ಳು: ರೇಣುಕಾಚಾರ್ಯ appeared first on Public TV.

Source: publictv.in

Source link