43 ಕೋಟಿ ಬಡವರ ಅಕೌಂಟ್​ನಿಂದ ತಲಾ ₹2 ಎಗರಿಸಿದ್ದಾನಂತೆ ಶ್ರೀಕಿ.. ಅಯ್ಯೋ ಏನಪ್ಪ ನಿನ್ನ ಲೀಲೆ?!


ಬೆಂಗಳೂರು: ಬಿಟ್​ ಕಾಯಿನ್ ಪ್ರಕರಣದ ಪ್ರಮುಖ ಆರೋಪಿ ಶ್ರೀಕಿ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ಶ್ರೀಮಂತರ ಖಾತೆಗೆ ಕನ್ನ ಹಾಕಿದ್ದೂ ಮಾತ್ರವಲ್ಲದೇ 80 ಕೋಟಿ ಕಡುಬಡವರ ಹಣವನ್ನೂ ಯಾಮಾರಿಸಿದ್ದಾನೆ ಅನ್ನೋ ದೂರು ಬೆಳಕಿಗೆ ಬಂದಿದೆ.

ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರವೊಂದು ಬಂದಿದ್ಯಂತೆ. ನೇರವಾಗಿ ಬಡವರ ಖಾತೆಗೆ ಕೈಹಾಕಿ ಪ್ರತಿ ತಿಂಗಳು ನೂರಾರು ಕೋಟಿ ಹಣ ಲೂಟಿ ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಲಾಗಿದೆ ಅನ್ನೋ ಮಾಹಿತಿ ಲಭ್ಯವಾಗಿದೆ.

ಏನಿದು ಬಡವರ ಖಾತೆಗೆ ಕನ್ನ ಹಾಕಿದ ಪ್ರಕರಣ..?
ಬಿಟ್ ಕಾಯಿನ್ ಹಗರಣ ಶ್ರೀಮಂತರ ದುಡ್ಡು ಆದರೆ, ಈ ಪ್ರಕರಣ ಕಡುಬಡವರ ದುಡ್ಡನ್ನ ಗುಳಂ ಮಾಡಿರೋದು. ಕೇಂದ್ರ ಸರ್ಕಾರ ಕಡುಬಡವರ ಜೀವನಕ್ಕಾಗಿ ಜನ್​ಧನ್ ಯೋಜನೆಯನ್ನ ಜಾರಿಗೆ ತಂದಿದೆ. ಜನರ ಜನ್​ಧನ್ ಖಾತೆಗೆ ಕೇಂದ್ರ ಸರ್ಕಾರ ಜಮೆ ಮಾಡುತ್ತಿದ್ದ ಸಹಾಯಧನದ ಹಣಕ್ಕೇ ಶ್ರೀಕಿ ಕನ್ನ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ. ಸುಮಾರು 80 ಕೋಟಿ ಜನ್​ಧನ್ ಅಕೌಂಟ್ ಹ್ಯಾಕ್ ಮಾಡಿ, ಪ್ರತಿ ತಿಂಗಳು ಎರಡೆರಡೇ ರುಪಾಯಿ ಎತ್ತುತ್ತಿದ್ದ ಅನ್ನೋ ಆರೋಪ ಕೇಳಿಬಂದಿದೆ.

News First Live Kannada


Leave a Reply

Your email address will not be published.