ಬೆಕ್ಕೊಂದು ಐದು ಅಂತಸ್ತಿನ ಮಹಡಿಯಿಂದ ಜಿಗಿದು ತನಗೇನೂ ಗೊತ್ತೇ ಇಲ್ಲ ಎಂಬಂತೆ ನಡೆದುಕೊಂಡು ಹೋದ ಅದ್ಭುತ, ಅಪರೂಪದ ಘಟನೆ ಚಿಕಾಗೋದಲ್ಲಿ ನಡೆದಿದೆ. ಇಂಥ ದೃಶ್ಯ ಬಹುಶಃ ಹಿಂದೆಂದೂ ಕಂಡುಬಂದಿಲ್ಲ ಅಂತಲೇ ಹೇಳಬಹುದು.

ಚಿಕಾಗೋದ ಕಟ್ಟಡವೊಂದರಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ಆರಿಸಲು ಕಾರ್ಯಪ್ರವೃತ್ತರಾಗ್ತಾ ಇದ್ರು. ಈ ಮಧ್ಯೆ ಸಿಬ್ಬಂದಿಯೋರ್ವ ಕಟ್ಟಡದಲ್ಲಿ ಬೆಂಕಿ ಉರಿಯುತ್ತಿರುವುದನ್ನ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿಯುತ್ತಿದ್ದರು. ಈ ವೇಳೆ ಬೆಂಕಿಯಿಂದ ತಪ್ಪಿಸಿಕೊಳ್ಳಲು ಬೆಕ್ಕೊಂದು 5ನೇ ಅಂತಸ್ತಿನ ಕಟ್ಟಡದಿಂದ ಕೆಳಗೆ ಹಾರಿರೋದನ್ನ ಕಾಣಬಹುದು.

ಅದೃಷ್ಟವಶಾತ್ ಬೆಕ್ಕು ಗರಿಕೆ ಹಾಸಿನ ಮೇಲೆ ಬಿದ್ದಿದೆ. ಒಂದೆರಡು ಇಂಚು ಹಿಂದಕ್ಕೆ ಬಿದ್ದಿದ್ದರೂ ಕಾಂಕ್ರೀಟ್ ಗೋಡೆಗೆ ಬಡಿದು ಪ್ರಾಣವನ್ನೇ ಕಳೆದುಕೊಳ್ತಾ ಇತ್ತು. ಹುಲ್ಲು ಹಾಸಿನ ಮೇಲೆ ಬಿದ್ದ ಬೆಕ್ಕು ಒಮ್ಮೆ ಮೇಲಕ್ಕೆ ಪುಟಿದಿದೆ. ಮತ್ತೆ ನೆಲಕ್ಕೆ ಲ್ಯಾಂಡ್ ಆಗಿ ನನಗೇನೂ ಗೊತ್ತೇ ಇಲ್ಲ.. ನಾನೇನೂ ಮಾಡೇ ಇಲ್ಲ ಎಂಬಂತೆ ತನ್ನ ಪಾಡಿಗೆ ತಾನು ನಡೆದುಕೊಂಡು ಹೋಗಿದೆ.

ಈ ವಿಡಿಯೋವನ್ನ ಚಿಕಾಗೋ ಫೈರ್ ಮೀಡಿಯಾ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಡಿದೆ. ಸೋಷಿಯಲ್ ಮೀಡಿಯಾದಲ್ಲಿ ಜನರು ಬೆಕ್ಕಿನ ರಿಯಲ್ ಸ್ಟಂಟ್ ಕಂಡು ಏಕಕಾಕಲದಲ್ಲಿ ಅಚ್ಚರಿ ಮತ್ತು ಗಾಬರಿಗೊಂಡಿದ್ದಾರೆ.

The post 5ನೇ ಮಹಡಿಯಿಂದ ಹಾರಿ ಬೆಂಕಿಯಿಂದ ಪಾರಾದ ಬೆಕ್ಕು, ಅಚ್ಚರಿಯ ದೃಶ್ಯ ಸೆರೆ appeared first on News First Kannada.

Source: newsfirstlive.com

Source link