ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧದ ಸಿಡಿ ಬಹಿರಂಗ ಪ್ರಕರಣದಲ್ಲಿ ಆರೋಪಿಯಾಗಿರುವ ನರೇಶ್​ ಗೌಡನ ವಿಚಾರಣೆ ಇಂದು ಕೂಡ ನಡೆಯಿತು.

ಐದು ಗಂಟೆಗಳ ಕಾಲ ನಡೆದ ಇಂದಿನ ಎಸ್ಐಟಿ ವಿಚಾರಣೆ ಅಂತ್ಯವಾಗಿದೆ. ಅದರಂತೆ 2ನೇ ದಿನದ ವಿಚಾರಣೆ ಮುಗಿಸಿ ವಕೀಲರೊಂದಿಗೆ ನರೇಶ್ ಗೌಡ ತೆರಳಿದ್ದಾರೆ. ಸದಾಶಿವನಗರದಲ್ಲಿ ರಮೇಶ್ ಜಾರಕಿಹೊಳಿ ದಾಖಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನರೇಶ್​​ನನ್ನ ವಿಚಾರಣೆಗೆ ಕರೆಯಲಾಗಿತ್ತು. ಅಗತ್ಯವಿದ್ದಲ್ಲಿ‌ ವಿಚಾರಣೆಗೆ ಕರೆಯುವುದಾಗಿ ಹೇಳಿ ಎಸ್ಐಟಿ ಅಧಿಕಾರಿಗಳ ತಂಡ ವಾಪಸ್ ಕಳುಹಿಸಿದೆ.

ನಾಳೆ ಶ್ರವಣ್​ ವಿಚಾರಣೆ
ಇಂದು ಬೆಳಗ್ಗೆ 11:30ಕ್ಕೆ ಆಡುಗೋಡಿ ಟೆಕ್ನಿಕಲ್ ಸೆಲ್​​ನಲ್ಲಿ ನರೇಶ್ ಗೌಡ ವಿಚಾರಣೆ ನಡೆಯಿತು. ಮತ್ತೊಬ್ಬ ಆರೋಪಿತ ಶ್ರವಣ್ ಕೊಟ್ಟಿರೋ ಹೇಳಿಕೆ ಆಧಾರದ ಮೇಲೆ‌ ತನಿಖಾಧಿಕಾರಿಗಳು ವಿಚಾರಣೆ ನಡೆಸಿದರು. ಮೂಲಗಳ ಪ್ರಕಾರ ಎಸ್​ಐಟಿ ಅಧಿಕಾರಿಗಳು ಸ್ಟಿಂಗ್ ಬಗ್ಗೆ ಹೆಚ್ಚು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಯುವತಿ ಬಗ್ಗೆಯೂ ಶ್ರವಣ್​ನನ್ನ ವಿಚಾರಣೆ ಮಾಡಲಾಗಿದ್ದು, ಸ್ಟಿಂಗ್ ಕ್ಯಾಮೆರಾ ಬಗ್ಗೆ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ. ಸ್ಟಿಂಗ್ ಮಾಡಲು ಯುವತಿಗೆ ಕ್ಯಾಮೆರಾ ಕೊಡಿಸಿದ್ದು, ಜೊತೆಗೆ ಯುವತಿಗೆ ಬೆದರಿಕೆಯೊಡ್ಡಿ ಸ್ಟಿಂಗ್ ಮಾಡಲು ಹೇಳಿರೋದು ಶ್ರವಣ್ ಅಂತಾ ಹೇಳಲಾಗಿದೆ. ಈ ಬಗ್ಗೆಯೇ ತನಿಖಾಧಿಕಾರಿಗಳು ಆರೋಪಿಗೆ ಪ್ರಶ್ನೆ ಮಾಡಿದ್ದಾರೆ.

ಮೊನ್ನೆ ವಕೀಲರ ಸಲಹೆಯಂತೆ ಉತ್ತರಿಸಿದ್ದ ನರೇಶ್ ಇವತ್ತೂ ಕೂಡ ವಕೀಲರ ಜೊತೆಗೆ ವಿಚಾರಣೆಗೆ ಆಗಮಿಸಿದ್ದ. ಇನ್ನು ನಾಳೆ ಮತ್ತೊಬ್ಬ ಆರೋಪಿ ಶ್ರವಣ್ ವಿಚಾರಣೆ ನಡೆಯಲಿದೆ ಎನ್ನಲಾಗಿದೆ.

The post 5 ಗಂಟೆ ವಿಚಾರಣೆ ಎದುರಿಸಿದ ನರೇಶ್; ಇಂದು ಏನೆಲ್ಲಾ ನಡೀತು? appeared first on News First Kannada.

Source: newsfirstlive.com

Source link