5 ಮಿಲಿಯನ್​ಗೂ ಅಧಿಕ ವ್ಯೂವ್ಸ್ ಕಂಡು ಓಡ್ತಿದೆ ಕನ್ನಡ ಹುಡುಗೀರ ಹಿಂದಿ ಸಿನಿಮಾ ಟ್ರೇಲರ್

5 ಮಿಲಿಯನ್​ಗೂ ಅಧಿಕ ವ್ಯೂವ್ಸ್ ಕಂಡು ಓಡ್ತಿದೆ ಕನ್ನಡ ಹುಡುಗೀರ ಹಿಂದಿ ಸಿನಿಮಾ ಟ್ರೇಲರ್

ಬಾಲಿವುಡ್​​ನ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದು ಹಂಗಾಮ-2. ಜುಲೈ 1ರಂದು ಬಿಡುಗಡೆಯಾದ ಈ ಸಿನಿಮಾದ ಟ್ರೇಲರ್​ಗೆ ಭರ್ಜರಿ ರೆಸ್ಪಾನ್ಸ್​ ಸಿಕ್ಕಿದೆ. ಈವರೆಗೆ ಟ್ರೇಲರ್​ 5.5 ಮಿಲಿಯನ್​(55 ಲಕ್ಷ)ಕ್ಕೂ ಅಧಿಕ ವ್ಯೂವ್ಸ್​ ಪಡೆದು ಮುನ್ನುಗ್ಗುತ್ತಿದ್ದು, ಸದ್ಯ ಟ್ರೆಂಡಿಂಗ್ ಲಿಸ್ಟ್​ನಲ್ಲಿ 17ನೇ ಸ್ಥಾನದಲ್ಲಿದೆ.

ಕನ್ನಡತಿಯರಾದ ಮಂಗಳೂರು ಬೆಡಗಿ, ಬಳುಕುವ ಬಳ್ಳಿ ಶಿಲ್ಪಾ ಶೆಟ್ಟಿ ಹಾಗೂ ಸಕ್ಕರೆ ಗೊಂಬೆ ಪ್ರಣೀತಾ ಸುಭಾಷ್ ಹಂಗಾಮ-2 ಸಿನಿಮಾದಲ್ಲಿ ನಟಿಸಿದ್ದಾರೆ. ​ಇನ್ನು 90ರ ದಶಕದ ಶಿಲ್ಪಾ ಶೆಟ್ಟಿಯ ಹಿಟ್​ ಸಾಂಗ್ ಚುರಾಕೆ ದಿಲ್ ಮೇರಾ ಹಾಡಿನ ರೀಮಿಕ್ಸ್​ ವರ್ಷನ್ ಈ ಸಿನಿಮಾದಲ್ಲಿದೆ. ಈ ಹಾಡಿನಲ್ಲೂ ಶಿಲ್ಪಾ ಶೆಟ್ಟಿ ಸಖತ್ತಾಗಿ ಸ್ಟೆಪ್ಸ್​ ಹಾಕಿದ್ದು, ಜುಲೈ 5ರಂದು ಸಾಂಗ್ ಟೀಸರ್ ಹಾಗೂ ಜುಲೈ 6ರಂದು ಹಾಡಿನ ಮ್ಯೂಸಿಕ್ ವಿಡಿಯೋ ಬಿಡುಗಡೆಯಾಗಲಿದೆ.

ಹಂಗಾಮಾ-2 ಸಿನಿಮಾವನ್ನ ಪ್ರಿಯದರ್ಶನ್ ನಿರ್ದೇಶಿಸಿದ್ದು, ರತನ್ ಜೈನ್ ನಿರ್ಮಾಣ ಮಾಡಿದ್ದಾರೆ. ಮೀಜನ್ ಜಫ್ರಿ, ಶಿಲ್ಪಾ ಶೆಟ್ಟಿ, ಪರೇಶ್​ ರಾವಲ್ ಹಾಗೂ ಪ್ರಣೀತಾ ಸುಭಾಷ್​ ಲೀಡ್​ ರೋಲ್​ಗಳಲ್ಲಿ ಕಾಣಿಸಿಕೊಂಡಿದ್ದಾರೆ.

The post 5 ಮಿಲಿಯನ್​ಗೂ ಅಧಿಕ ವ್ಯೂವ್ಸ್ ಕಂಡು ಓಡ್ತಿದೆ ಕನ್ನಡ ಹುಡುಗೀರ ಹಿಂದಿ ಸಿನಿಮಾ ಟ್ರೇಲರ್ appeared first on News First Kannada.

Source: newsfirstlive.com

Source link