5 ವರ್ಷದಿಂದ ಠಾಣೆಯ ಕಾವಲು ಕಾದಿದ್ದ ಶ್ವಾನಕ್ಕೆ ಗೌರವಯುತ ವಿದಾಯ

5 ವರ್ಷದಿಂದ ಠಾಣೆಯ ಕಾವಲು ಕಾದಿದ್ದ ಶ್ವಾನಕ್ಕೆ ಗೌರವಯುತ ವಿದಾಯ

ಹುಬ್ಬಳ್ಳಿ :  ಸುಮಾರು ಐದು ವರ್ಷಗಳಿಂದ ಠಾಣೆಯನ್ನು ಕಾವಲು ಕಾಯುತ್ತಿದ್ದ ಶ್ವಾನವೊಂದು ಮರಣ ಹೊಂದಿದ ಹಿನ್ನೆಲೆಯಲ್ಲಿ ಪೊಲೀಸರು ಅದಕ್ಕೆ ಗೌರವಯುತವಾಗಿ ವಿದಾಯ ಹೇಳಿದ್ದಾರೆ.

ಹುಬ್ಬಳ್ಳಿಯ ಉಪನಗರ ಠಾಣೆಯಲ್ಲಿ ಕಳೆದ ಸುಮಾರು ಐದು ವರ್ಷದಿಂದ ಇದ್ದ ಜಾಕಿ ಎಂಬ ಹೆಸರಿನ ಶ್ವಾನ ನಿನ್ನೆ ಅಕಾಲಿಕವಾಗಿ ಮರಣ ಹೊಂದಿತ್ತು. ಚಿಕ್ಕ ಮರಿಯಾಗಿದ್ದಾಗಿನಿಂದ ಉಪನಗರ ಠಾಣೆಯಲ್ಲಿ ಬೆಳೆದಿದ್ದ ಜಾಕಿ ಠಾಣೆಯ ಸದಸ್ಯನ ರೀತಿಯಲ್ಲಿ ಪೊಲೀಸರೊಂದಿಗೆ ಅನ್ಯೋನ್ಯತೆಯಿಂದ ಇತ್ತು.

ನಿನ್ನೆ ಜಾಕಿಯ ಆರೋಗ್ಯದಲ್ಲಿ ಏರುಪೇರಾಗಿ ಮೃತಪಟ್ಟಿದೆ. ಈ ಹಿನ್ನೆಲೆಯಲ್ಲಿ ಉಪನಗರ ಠಾಣೆಯ ಪೊಲೀಸರು ಜಾಕಿಗೆ ಗೌರವಯುತವಾಗಿ ಅಂತಿಮ ವಿದಾಯ ಹೇಳಿ, ಅಂತ್ಯಸಂಸ್ಕಾರ ನೆರವೇರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

The post 5 ವರ್ಷದಿಂದ ಠಾಣೆಯ ಕಾವಲು ಕಾದಿದ್ದ ಶ್ವಾನಕ್ಕೆ ಗೌರವಯುತ ವಿದಾಯ appeared first on News First Kannada.

Source: newsfirstlive.com

Source link