ದಾವಣಗೆರೆ; ಕೊರೊನಾ ಹೆಚ್ಚಾದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಲಾಕ್ ಡೌನ್ ಘೋಷಣೆ ಮಾಡಿದ್ದು, ಇದರಿಂದ ಸಂಚಾರಕ್ಕೆ ಬಸ್ ಗಳು ಸಂಪೂರ್ಣ ಬಂದ್ ಆಗಿವೆ. ಹೀಗಾಗಿ ತಾಯಿಯೊಬ್ಬರು ತನ್ನ ಐದು ವರ್ಷದ ಮಗನನ್ನು ಎತ್ತಿಕೊಂಡು ಬರೋಬ್ಬರಿ 90 ಕಿಲೋಮೀಟರ್ ನಡೆದು ಬಂದಿದ್ದಾರೆ. ಈ ತಾಯಿಯ ಕಷ್ಟವನ್ನು ನೋಡಿ ದಾವಣಗೆರೆಯ ಪೊಲೀಸರು ರಕ್ಷಣೆ ಮಾಡಿ ಮನೆಗೆ ಸೇರಿದಿದ್ದಾರೆ.

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ 5 ವರ್ಷದ ತನ್ನ ಮಗನನ್ನು ಹೊತ್ತು ತಾಯಿ 90 ಕಿಲೋಮೀಟರ್ ನಡೆದು ಬಂದಿರುವ ಘಟನೆ ದಾವಣಗೆರೆಯಲ್ಲಿ ಜರುಗಿದೆ. ಶಿವಮೊಗ್ಗ ಜಿಲ್ಲೆಯ ಗಾಡಿಕೊಪ್ಪದಿಂದ ಕಾಲ್ನಡಿಗೆಯಲ್ಲಿ ನಡೆದುಕೊಂಡು ಬಂದ ತಾಯಿ ಮಗುವನ್ನು ದಾವಣಗೆರೆಯ ಎಸ್ ಎಸ್ ಖಾಸಗಿ ಆಸ್ಪತ್ರೆ ಬಳಿ ಪೊಲೀಸರಿಂದ ತಾಯಿ ಮಗುವನ್ನು ರಕ್ಷಣೆ ಮಾಡಲಾಗಿದೆ.

ನಾಗರತ್ನ ಮಗುವನ್ನು ಹಿಡಿದು 90 ಕಿಲೋಮೀಟರ್ ನಡೆದುಕೊಂಡು ಬಂದ ತಾಯಿಯಾಗಿದ್ದು, ಗಂಡನ ಮನೆಯಲ್ಲಿ ಜಗಳವಾಡಿಕೊಂಡ ನಾಗರತ್ನ ಬೆಳಗ್ಗಿನ ಜಾವ ಮನೆ ಬಿಟ್ಟು ಕಾಲ್ನಡಿಗೆಯಲ್ಲಿ ತನ್ನ ಐದು ವರ್ಷದ ಕಂದಮ್ಮನನ್ನು ಎತ್ತಿಕೊಂಡು, ತಲೆಮೇಲೆ ಗಂಟು ಹೊತ್ತು 90 ಕಿಲೋಮೀಟರ್ ನಡೆದು ಕಳೆದ ರಾತ್ರಿ 9-30 ರ ಸುಮಾರಿಗೆ ದಾವಣಗೆರೆ ತಲುಪಿದ್ದಾರೆ. ಶಿವಮೊಗ್ಗದಿಂದ ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ತುಂಬಿಗೆರೆಯಲ್ಲಿರುವ ಅಕ್ಕನ ಮನೆಗೆ ನಾಗರತ್ನ ತೆರಳಿದ್ದಾರೆ. ಇದನ್ನೂ ಓದಿ: ಜಮೀರ್ ಅಹ್ಮದ್‍ಗೆ ಸಿಹಿಮುತ್ತು ನೀಡಿ ಸಂಭ್ರಮಿಸಿದ ಅಭಿಮಾನಿ

ಲಾಕ್ ಡೌನ್ ಜಾರಿಯಿರುವ ಕಾರಣ ಬಸ್ ಗಳು ಇಲ್ಲದೆ ಮಹಿಳೆ ನಡೆದುಕೊಂಡು ಬಂದಿದ್ದಾರೆ. ದಾವಣಗೆರೆಗೆ ಪ್ರವೇಶಿಸುತ್ತಿದ್ದಂತೆ ಎಸ್ ಎಸ್ ಹೈಟೆಕ್ ಆಸ್ಪತ್ರೆಯ ಬಳಿ ಪೊಲೀಸರು ತಾಯಿ ಮಗುವನ್ನು ತಪಾಸಣೆ ನಡೆಸಿದ್ದಾರೆ. ತಪಾಸಣೆ ನಡೆಸಿದ ಬಳಿಕ ವಿಷಯ ತಿಳಿದು ಕಾರ್ಯನಿರ್ವಹಿಸುತ್ತಿದ್ದ ಪೋಲಿಸರು ತಮ್ಮ ವಾಹನದಲ್ಲಿ ತಾಯಿ ಮಗುವನ್ನು ತುಂಬಿಗೆರೆಗೆ ಬಿಟ್ಟು ಬಂದು ಮಾನವೀಯತೆ ಮೆರೆದರು.

The post 5 ವರ್ಷ ಮಗನನ್ನು ಎತ್ತಿಕೊಂಡು 90 ಕಿಲೋಮೀಟರ್ ನಡೆದ ತಾಯಿ..! appeared first on Public TV.

Source: publictv.in

Source link