ಬೆಂಗಳೂರು: ಈ ಹಿಂದೆ ಕೃಷಿ ಸಚಿವ ಬಿ.ಸಿ ಪಾಟೀಲ್ ಆರೋಗ್ಯಾಧಿಕಾರಿಗಳನ್ನ ಮನೆಗೆ ಕರೆಸಿಕೊಂಡು ವ್ಯಾಕ್ಸಿನ್ ಹಾಕಿಸಿಕೊಂಡಿದ್ದು ಭಾರೀ ಟೀಕೆಗೆ ಗುರಿಯಾಗಿತ್ತು. ಆಗ ಕಾಂಗ್ರೆಸ್​​ ನಾಯಕರು ಅದನ್ನ ಖಂಡಿಸಿದ್ದರು. ಈಗ ಅದೇ ಕಾಂಗ್ರೆಸ್​ನ ಕಾರ್ಯಕರ್ತ, ಶಾಂತಿನಗರ ಶಾಸಕ ಮೊಹಮ್ಮದ್​ ಹ್ಯಾರಿಸ್​ ಪುತ್ರ ನಲಪಾಡ್​ ಕೂಡ ಅಂಥದ್ದೇ ಕೆಲಸ ಮಾಡಿ, ಚರ್ಚೆಗೆ ಗ್ರಾಸರಾಗಿದ್ದಾರೆ.

ನಲಪಾಡ್ ಮಾಡಿದ್ದೇನು..?
ಮಹಮ್ಮದ್ ನಲಪಾಡ್ ಯುವ ಕಾಂಗ್ರೆಸ್​ನ ಬೆಂಬಲಿಗರಿಗೆ ವ್ಯಾಕ್ಸಿನ್ ಕೊಡಿಸಿದ್ದಾರೆ. ವ್ಯಾಕ್ಸಿನ್ ಹಾಕಿಸಿಕೊಂಡ ಕಾಂಗ್ರೆಸ್​ ಕಾರ್ಯಕರ್ತರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿದ್ದು, ವ್ಯಾಕ್ಸಿನೇಷನ್​​​ಗೆ ವ್ಯವಸ್ಥೆ ಮಾಡಿದ ನಲಪಾಡ್​​ರಿಗೆ ಧನ್ಯವಾದ ಎಂದು ಬರೆದುಕೊಂಡಿದ್ದಾರೆ. ಆದರೆ ನಲಪಾಡ್​ ಬೆಂಬಲಿಗರಿಗೆ ಲಸಿಕೆಯನ್ನ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಯಲ್ಲಿ ಕೊಡಿಸದೇ ಫೈವ್ ಸ್ಟಾರ್​ ಹೋಟೆಲ್​​​ನಲ್ಲಿ ಹಾಕಿಸಿದ್ದಾರೆ ಅಂತ ಆರೋಪಿಸಲಾಗಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಸ್ವತಃ ಏಮ್ಸ್​ ಆಸ್ಪತ್ರೆಗೆ ಹೋಗಿ ವ್ಯಾಕ್ಸಿನ್ ಪಡೆದುಕೊಂಡಿದ್ರು. ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ಸಿಎಂ ಯಡಿಯೂರಪ್ಪ ವ್ಯಾಕ್ಸಿನ್ ಪಡೆದಿದ್ರು. ಇನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಲಸಿಕೆ ಹಾಕಿಸಿಕೊಂಡ್ರು. ದೇಶದ ಪ್ರಧಾನಿ, ರಾಜ್ಯದ ಸಿಎಂ, ವಿಪಕ್ಷ ನಾಯಕರಾದಿಯಾಗಿ ಹಿರಿಯ ನಾಯಕರೇ ಸರ್ಕಾರಿ ಆಸ್ಪತ್ರೆಯಲ್ಲಿ ವ್ಯಾಕ್ಸಿನ್ ಹಾಕಿಸಿಕೊಳ್ತಿದ್ದಾರೆ. ಹೀಗಿರುವಾಗ ನಲಪಾಡ್​ ಶಾಂತಿನಗರ ವಿಧಾನಸಭಾ ಕ್ಷೇತ್ರದ ಖಾಸಗಿ ಫೈವ್ ಸ್ಟಾರ್ ಹೋಟೆಲ್​​​ನಲ್ಲಿ ತನ್ನ ಬೆಂಬಲಿಗರಿಗೆ ಲಸಿಕೆ ಹಾಕಿಸಿದ್ದಾರೆ ಎಂದು ತಿಳಿದುಬಂದಿದೆ. ನಲಪಾಡ್​ರ ಈ ನಡೆ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಬಿ.ಸಿ ಪಾಟೀಲ್ ತಮ್ಮ ಮನೆಯಲ್ಲಿ ವ್ಯಾಕ್ಸಿನ್ ಹಾಕಿಸಿಕೊಂಡಿದ್ದನ್ನ ಕಾಂಗ್ರೆಸ್ ನಾಯಕರು ಪ್ರಶ್ನಿಸಿದ್ದರು. ಈ ಹಿನ್ನೆಲೆಯಲ್ಲಿ ವಾಕ್ಸಿನ್ ಕೊಟ್ಟ ಅಧಿಕಾರಿಯನ್ನು ರಾಜ್ಯ ಸರ್ಕಾರ ಅಮಾನತು ಮಾಡಿತ್ತು. ಈಗ ದೇಶದ, ರಾಜ್ಯದ ನಾಯಕರೆಲ್ಲ ಆಸ್ಪತ್ರೆಗೆ ತೆರಳಿ ವ್ಯಾಕ್ಸಿನ್ ಹಾಕಿಸಿಕೊಳ್ಳುವಾಗ ನಲಪಾಡ್ ಬೆಂಬಲಿಗರಿಗೆ ಮಾತ್ರ ಬೇರೆ ಕಾನೂನಾ..? ಎಂದು ಪ್ರಶ್ನಿಸುವಂತಾಗಿದೆ.

 

The post 5 Star ಹೋಟೆಲ್​ನಲ್ಲಿ ನಲಪಾಡ್ ಬೆಂಬಲಿಗರಿಗೆ ವಾಕ್ಸಿನ್; ದೇಶಕ್ಕೊಂದು, ಇವರಿಗೊಂದು ಕಾನೂನಾ? appeared first on News First Kannada.

Source: newsfirstlive.com

Source link