ಉಡುಪಿ: ಕೊರೊನಾ ಸೋಂಕಿನ ನಿಯಂತ್ರಣಕ್ಕೆ ‌ಜಿಲ್ಲಾಡಳಿತ ಮತ್ತೊಂದು ದಿಟ್ಟ ‌ನಿರ್ಧಾರ ಕೈಗೊಂಡಿದೆ. 50ಕ್ಕೂ ಹೆಚ್ಚು ಕೊರೊನಾ ಪಾಸಿಟಿವ್ ಕೇಸ್​ಗಳಿರುವ ಗ್ರಾಮಗಳಲ್ಲಿ ನಾಳೆಯಿಂದ ಸಂಪೂರ್ಣ ಲಾಕ್​​ಡೌನ್ ಘೋಷಣೆ ಮಾಡಿ ಜಿಲ್ಲಾಧಿಕಾರಿ ಜಿ.ಜಗದೀಶ್ ಆದೇಶ‌ ಹೊರಡಿಸಿದ್ದಾರೆ.

ನಾಳೆಯಿಂದ ಜೂನ್ 7ರವರೆಗೂ ಸಂಪೂರ್ಣ ಲಾಕ್​​ಡೌನ್ ಅನ್ವಯ ಆಗಲಿದೆ. ಜಿಲ್ಲೆಯ ಒಟ್ಟು 165 ಗ್ರಾಮಗಳಲ್ಲಿ 33 ಗ್ರಾಮಗಳು ಸಂಪೂರ್ಣ ಲಾಕ್​​ಡೌನ್ ಆಗಲಿವೆ. ಮೆಡಿಕಲ್ ಶಾಪ್, ಕೃಷಿ ಚಟುವಟಿಕೆಗಳಿಗೆ ಹಾಗೂ ಅನುಮತಿ ಪಡೆದ ಮದುವೆಗೆ ಮಾತ್ರ ಅವಕಾಶ ನೀಡಲಾಗಿದೆ.ಸಂಪೂರ್ಣ ಲಾಕ್​ಡೌನ್ ಹಿನ್ನೆಲೆಯಲ್ಲಿ ಗ್ರಾಮದ ಗಡಿಯಲ್ಲಿ ಬ್ಯಾರಿಕೇಡ್​ಗಳನ್ನ​ ಅಳವಡಿಸಿ ಪೊಲೀಸರನ್ನು ನಿಯೋಜನೆ ಮಾಡಲಾಗುತ್ತದೆ.

ಯಾವೆಲ್ಲಾ ಗ್ರಾಮಗಳಲ್ಲಿದೆ 50ಕ್ಕೂ ಹೆಚ್ಚು ಕೊರೊನಾ ಪಾಸಿಟಿವ್ ಕೇಸ್?
ಶಿರೂರು, ಜಡ್ಕಲ್, ಕಂಬದಕೋಣೆ, ನಾಡ, ಕಾವ್ರಾಡಿ, ಹೊಂಬಾಡಿ ಮಂಡಾಡಿ, ಕೋಟೇಶ್ವರ, ಹಾಲಾಡಿ, ಇಡೂರು, ಕುಂಜ್ಞಾಡಿ, ಆಜ್ರಿ, ಆಲೂರು, 38 ಕಳತ್ತೂರು, 80 ಬಡಗಬೆಟ್ಟು, ಅಲೆವೂರು, ಪೆರ್ಡೂರು, ತೆಂಕನಿಡಿಯೂರು, ಬೊಮ್ಮರಬೆಟ್ಟು, ಬೆಳಪು, ಬೆಳ್ಳೆ, ಪಡುಬಿದ್ರಿ, ಶಿರ್ವ, ಮಾಳ, ಈದು, ಕುಕ್ಕುಂದೂರು, ಕಡ್ತಲ, ಮರ್ಣೆ, ಪಳ್ಳಿ, ನಿಟ್ಟೆ, ಮಿಯಾರು, ಬೆಳ್ಮಣ್, ಬೆಳ್ವೆ, ಮುದ್ರಾಡಿ, ವರಂಗ ಗ್ರಾಮಗಳಲ್ಲಿ 50ಕ್ಕೂ ಹೆಚ್ಚು ಪಾಸಿಟಿವ್ ಕೇಸ್ ಕಂಡುಬಂದಿದೆ. ಈ ಗ್ರಾಮಗಳು ಸಂಪೂರ್ಣ ಲಾಕ್​​ಡೌನ್ ಆಗಲಿದೆ.

ಈಗಾಗಲೇ ಜಿಲ್ಲೆಯಲ್ಲಿ ಶೇ.19 ಪಾಸಿಟಿವಿಟಿ‌ ರೇಟ್ ಇದ್ದು, ಇದನ್ನು ಶೇ.10ಕ್ಕೆ ಇಳಿಕೆ ಮಾಡಲು ಜಿಲ್ಲಾಡಳಿತ ಕಠಿಣ ನಿರ್ಧಾರ ಕೈಗೊಂಡಿದೆ.

The post 50ಕ್ಕೂ ಹೆಚ್ಚು ಸೋಂಕಿತರಿರೋ ಗ್ರಾಮಗಳು ಫುಲ್ ಲಾಕ್​ಡೌನ್- ಉಡುಪಿ ಡಿಸಿ ಆದೇಶ appeared first on News First Kannada.

Source: newsfirstlive.com

Source link