50ನೇ ದಿನ ‘ಕೆಜಿಎಫ್ 2’ ಎಷ್ಟು ಕಡೆಗಳಲ್ಲಿ ಪ್ರದರ್ಶನ ಕಾಣುತ್ತಿದೆ; ಇಲ್ಲಿದೆ ಮಾಹಿತಿ | KGF Chapter 2 Movie Collects 50 days still performing in 390 theaters


ಸಿನಿಮಾ ಯಶಸ್ಸಿನ ಬಗ್ಗೆ ಸಿನಿಮಾದ ನಿರ್ಮಾಪಕ ವಿಜಯ್ ಕಿರಗಂದೂರು ಅವರು ಟ್ವೀಟ್ ಮಾಡಿದ್ದಾರೆ. ಸಿನಿಮಾ 50 ದಿನ ಪೂರೈಸಿದ ಬಗ್ಗೆ ಅವರು ಖುಷಿ ವ್ಯಕ್ತಪಡಿಸಿದ್ದಾರೆ.

ಏಪ್ರಿಲ್ 14ರಂದು ‘ಕೆಜಿಎಫ್ 2’ ಸಿನಿಮಾ (KGF Chapter 2) ತೆರೆಗೆ ಬಂತು. ಈಗ ಸಿನಿಮಾ 50 ದಿನ ಪೂರೈಸಿದ ಸಂಭ್ರಮದಲ್ಲಿದೆ. ಸಾಕಷ್ಟು ನಿರೀಕ್ಷೆಗಳೊಂದಿಗೆ ತೆರೆಗೆ ಬಂದ ಈ ಸಿನಿಮಾ ಬರೋಬ್ಬರಿ 1,200 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಇದು ಕನ್ನಡ ಚಿತ್ರರಂಗದ ಪಾಲಿಗೆ ತುಂಬಾನೇ ವಿಶೇಷ ಸಾಧನೆ. ಯಶ್ (Yash) ಮ್ಯಾನರಿಸಂ, ಸಂಜಯ್ ದತ್​ ಮಾಡಿದ ಖಡಕ್ ವಿಲನ್ ಪಾತ್ರ, ಪ್ರಶಾಂತ್ ನೀಲ್ (Prashanth Neel) ನಿರ್ದೇಶನ, ರವಿ ಬಸ್ರೂರು ಸಂಗೀತ ನಿರ್ದೇಶನ, ಭುವನ್ ಗೌಡ ಛಾಯಾಗ್ರಹಣ ಹೀಗೆ ಹಲವು ವಿಚಾರಗಳು ಫ್ಯಾನ್ಸ್​ಗೆ ಇಷ್ಟವಾಗಿದೆ. ಈ ಕಾರಣಕ್ಕೆ 50ನೇ ದಿನವೂ ಚಿತ್ರ ಹಲವು ಕಡೆಗಳಲ್ಲಿ ಪ್ರದರ್ಶನ ಕಾಣುತ್ತಿದೆ.

‘ಕೆಜಿಎಫ್ 2’ ಸಿನಿಮಾ ಐದು ಭಾಷೆಗಳಲ್ಲಿ ತೆರೆಗೆ ಬಂತು. ಬಾಲಿವುಡ್​ನಲ್ಲಿ ಸಿನಿಮಾಗೆ ಭರಪೂರ ಸ್ವಾಗತ ಸಿಕ್ಕಿತು. ಈ ಕಾರಣಕ್ಕೆ ಬಾಲಿವುಡ್​ನಿಂದ ಸಿನಿಮಾಗೆ 430+ ಕೋಟಿ ರೂಪಾಯಿ ಹರಿದು ಬಂತು. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲೂ ಚಿತ್ರ ಒಳ್ಳೆಯ ಕಲೆಕ್ಷನ್ ಮಾಡಿತು. ಇತ್ತೀಚೆಗೆ ಸಿನಿಮಾ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ರಿಲೀಸ್ ಆಯಿತು. ಹಣ ಪಾವತಿಸಿ ಸಿನಿಮಾ ನೋಡಲು ಮಾತ್ರ ಅವಕಾಶ ಇತ್ತು. ಜೂನ್ 3ರಿಂದ ಸಿನಿಮಾ ಚಂದಾದಾರರಿಗೆ ಉಚಿತವಾಗಿ ನೋಡಲು ಅವಕಾಶ ಇದೆ. ಇದರ ಮಧ್ಯೆಯೂ ಅನೇಕ ಕಡೆಗಳಲ್ಲಿ ಸಿನಿಮಾ ಪ್ರದರ್ಶನ ಕಾಣುತ್ತಿದೆ.

ಸಿನಿಮಾ ಯಶಸ್ಸಿನ ಬಗ್ಗೆ ಸಿನಿಮಾದ ನಿರ್ಮಾಪಕ ವಿಜಯ್ ಕಿರಗಂದೂರು ಅವರು ಟ್ವೀಟ್ ಮಾಡಿದ್ದಾರೆ. ಸಿನಿಮಾ 50 ದಿನ ಪೂರೈಸಿದ ಬಗ್ಗೆ ಅವರು ಖುಷಿ ವ್ಯಕ್ತಪಡಿಸಿದ್ದಾರೆ. 50ನೇ ದಿನವೂ ಭಾರತದಲ್ಲಿ 390 ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಕಾಣುತ್ತಿದೆ. ವಿದೇಶದಲ್ಲಿ 10ಕ್ಕೂ ಅಧಿಕ ಕಡೆಗಳಲ್ಲಿ ಸಿನಿಮಾ ಪ್ರದರ್ಶನ ಕಾಣುತ್ತಿದೆ.

‘ಕೆಜಿಎಫ್ 2’ ಚಿತ್ರದಿಂದ ಅನೇಕ ಕಲಾವಿದರ ಬದುಕು ಬದಲಾಗಿದೆ. ಶ್ರೀನಿಧಿ ಶೆಟ್ಟಿ ಅವರಿಗೆ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದಿಂದ ದೊಡ್ಡ ಯಶಸ್ಸು ಸಿಕ್ಕಿತು. ಬೇರೆ ನಟಿಯರಿಗೆ ಹೋಲಿಸಿದರೆ ಚಿತ್ರರಂಗದಲ್ಲಿ ಅವರಿಗೆ ಇರುವ ಅನುಭವ ಕಡಿಮೆ. ಆದರೂ ಅವರು 2 ಕೋಟಿ ರೂಪಾಯಿ ಬೇಡಿಕೆ ಇಡುತ್ತಿದ್ದಾರೆ ಎನ್ನಲಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

TV9 Kannada


Leave a Reply

Your email address will not be published. Required fields are marked *